Gold Rate Today: ಈ ದಿನ ಚಿನ್ನ ಖರೀದಿ ಮಾಡಿದ್ರೆ ಸಾವಿರಾರು ರೂ. ಉಳಿತಾಯ!

On: Sunday, February 8, 2026 2:08 PM
Gold Rate Today: ಈ ದಿನ ಚಿನ್ನ ಖರೀದಿ ಮಾಡಿದ್ರೆ ಸಾವಿರಾರು ರೂ. ಉಳಿತಾಯ!

Gold Rate Today : ಗೋಲ್ಡ್ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್! ನೀವೇನಾದರೂ ಗೋಲ್ಡ್ ಖರೀದಿ ಮಾಡಬೇಕಾ? ಹಾಗಿದ್ದರೆ ಈ ದಿನದಲ್ಲಿ ನೀವು ಗೋಲ್ಡ್ ಖರೀದಿ ಮಾಡುವುದು ಸರಿಯಾದ ಸಮಯ. ಯಾವ ದಿನ ಎಂದು ಯೋಚನೆ ಮಾಡುತ್ತಿದ್ದೀರಾ? ಈ ವಿಷಯದ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

Join WhatsApp

Join Now

Join Telegram

Join Now

ಬಜೆಟ್ ಮಂಡನೆಯಾದ ನಂತರದ ದಿನದಲ್ಲಿ ಬಾರಿ ಕುಸಿತ ಕಂಡಿದ್ದ ಬಂಗಾರದ ದರದಲ್ಲಿ ಫೆಬ್ರುವರಿ 3 ಮತ್ತು 4 ಕ್ಕೆ ಬಂಗಾರದ ದರದಲ್ಲಿ ಬಾರಿ ಏರಿಕೆ ಕಂಡಿತ್ತು. ನಂತರದ 2 ದಿನಗಳಲ್ಲಿ ಮತ್ತೆ ಬಂಗಾರದ ದರದಲ್ಲಿ ಬಾರಿ ಕುಸಿತ ಕಂಡಿದೆ.

ಯಾವ ದಿನದಲ್ಲಿ ಬಂಗಾರದ ದರ ಇನ್ನಷ್ಟು ಕಡಿಮೆಯಾಗಲಿದೆ? ಗ್ರಾಹಕರಿಗೆ ಬಂಗಾರ ಖರೀದಿ ಮಾಡಲು ಯಾವ ದಿನ ಸೂಕ್ತ? ಎಷ್ಟು ಪ್ರಮಾಣದಲ್ಲಿ ಬಂಗಾರದ ದರ ಇಳಿಕೆಯಾಗಲಿದೆ? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ಪಡೆದುಕೊಳ್ಳಬಹುದಾಗಿದೆ. ಇದೆ ರೀತಿಯ ಇನ್ನಷ್ಟು ಲೇಟೆಸ್ಟ್ ನ್ಯೂಸ್ಗಳ ಅಪ್ಡೇಟ್ ಗಾಗಿ ನಮ್ಮ ವೆಬ್ಸೈಟ್ ಉದ್ಯೋಗಸಲಹೆ ಗೆ ಭೇಟಿ ನೀಡಿ.

ಬಜೆಟ್ ಮಂಡನೆಯಾಗುವ ಮುನ್ನ ಇದ್ದ ಗೋಲ್ಡ್ ದರ ಎಷ್ಟು?

ಬಜೆಟ್ ಮಂಡನೆಗೂ ಮುನ್ನ ಬಂಗಾರವು ಬಾರಿ ದುಬಾರಿಯಾಗಿದ್ದು, ಗ್ರಾಹಕರಲ್ಲಿ ಆತಂಕ ಸೃಷ್ಟಿಸಿತು. ಇದರ ಬಗೆಗಿನ ಮಾಹಿತಿ ಇಲ್ಲಿದೆ.

ಜನವರಿ 1 ರಿಂದ 10 ರ ವರೆಗೆ 22 ಕ್ಯಾರೆಟ್ ಚಿನ್ನದ ದರವು ಒಂದು ಗ್ರಾಂ ಗೆ ₹11,000 ದಿಂದ ₹12,000 ಹಾಗೂ 24 ಕ್ಯಾರೆಟ್ ಚಿನ್ನದ ದರವು ಒಂದು ಗ್ರಾಂ ಗೆ ₹12,500 ರಿಂದ ₹13,000 ಕ್ಕೆ ತಲುಪಿತ್ತು. ನಂತರ ಜನವರಿ 15 ರಿಂದ 25 ರ ವರೆಗೆ 22 ಕ್ಯಾರೆಟ್ ಚಿನ್ನದ ದರವು ಒಂದು ಗ್ರಾಂ ಗೆ ₹14,000 ಹಾಗೂ 24 ಕ್ಯಾರೆಟ್ ಚಿನ್ನದ ದರವು ಒಂದು ಗ್ರಾಂ ಗೆ ₹15,000 ಕ್ಕೆ ತಲುಪಿ ಮತ್ತಷ್ಟು ಏರಿಕೆ ಕಂಡಿತ್ತು.


ಜನವರಿ 29 ರಲ್ಲಿ ಬಂಗಾರದ ದರದಲ್ಲಿ ಬಾರಿ ಏರಿಕೆಯನ್ನು ಕಂಡು ದಾಖಲೆ ಮಟ್ಟವನ್ನು ತಲುಪಿದೆ . 22 ಕ್ಯಾರೆಟ್ ಚಿನ್ನದ ದರವು ಒಂದು ಗ್ರಾಂ ಗೆ ₹16,395 ಹಾಗೂ 24 ಕ್ಯಾರೆಟ್ ಚಿನ್ನದ ದರವು ₹17,885 ಕ್ಕೆ ಏರಿಕೆ ಕಂಡಿದೆ.

ದಾಖಲೆಯ ಮಟ್ಟವನ್ನು ತಲುಪಿದ ಚಿನ್ನದ ದರದಿಂದ ಆತಂಕಕ್ಕೊಳಗಾದ ಗ್ರಾಹಕರಿಗೆ ಜನವರಿ 31 ಕ್ಕೆ ಚಿನ್ನದ ದರವುಒಂದು ಗ್ರಾಂ ಗೆ ₹16,058 ಕ್ಕೆ ಇಳಿಕೆ ಕಂಡು ಕೊಂಚ ನಿರಾಳ ಸಿಕ್ಕಿತು.

ಬಜೆಟ್ ಮಂಡನೆಯ ನಂತರದ ಗೋಲ್ಡ್ ದರ ಎಷ್ಟು?

2026 ರ ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡನೆಯಾಗಿದ್ದು, ಅಂದಿನ ದಿನವೇ ಚಿನ್ನದ ದರದಲ್ಲಿ 9% ರಷ್ಟು ಕುಸಿತ ಕಂಡು ಮಂಡನೆ ಮಾಡುವ ಬಜೆಟ್ ನಲ್ಲಿ ಬಂಗಾರದ ದರ ಇನ್ನಷ್ಟು ಹೆಚ್ಚಾಗಬಹುದೇ? ಎನ್ನುವ ಗೊಂದಲದಲ್ಲಿದ್ದ ಗೋಲ್ಡ್ ಪ್ರಿಯರಿಗೆ ಹಾಗೂ ಗೋಲ್ಡ್ ಖರೀದಿ ಮಾಡುವವರಿಗೆ ಒಳ್ಳೆಯ ಗುಡ್ ನ್ಯೂಸ್ ಸಿಕ್ಕಿದೆ.

ಬಜೆಟ್ ಮಂಡನೆಯಲ್ಲಿ ಬಂಗಾರದ ಆಮದು ಸುಂಕವನ್ನು ಕಡಿಮೆ ಮಾಡಿರುವುದರ ಪರಿಣಾಮವಾಗಿ ಫೆಬ್ರವರಿ 2 ರಲ್ಲಿ ಚಿನ್ನದ ದರವು ಮತ್ತಷ್ಟು ಕುಸಿತ ಕಂಡಿದ್ದು, ಒಂದು ಗ್ರಾಂ ಗೆ ₹15,153 ದಿಂದ ₹15,317 ಕ್ಕೆ ಬಂದು ತಲುಪಿತು. ನಂತರದ ಎರಡು ದಿನದಲ್ಲಿ ಬಂಗಾರದ ದರವು ಇನ್ನಷ್ಟು ಏರಿಕೆ ಕಂಡಿದ್ದು, ಇದರ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಪ್ರಮುಖ ದಿನಾಂಕಗಳು ಮಾರುಕಟ್ಟೆ ಬದಲಾವಣೆ 22 ಕ್ಯಾರೆಟ್ ಗೋಲ್ಡ್ ದರ 24 ಕ್ಯಾರೆಟ್ ಗೋಲ್ಡ್ ದರ
02-02-2026ಬಾರಿ ಇಳಿಕೆ ₹13,890 – ₹14,000₹15,153 – ₹15,317
03-02-2026 ಸ್ವಲ್ಪ ಮಟ್ಟದಲ್ಲಿ ಏರಿಕೆ ₹13,910 – ₹14,110₹15,173 – ₹15,393
04-02-2026ಏರಿಕೆ ಮಟ್ಟ ಇನ್ನಷ್ಟು ಹೆಚ್ಚಳ ₹14,615 – ₹14,715₹15,944 – ₹16,053
05-02-2026ಕುಸಿತ ₹14,155 – ₹14,265₹15,442 – ₹15,469
06-02-2026ಸತತ ಎರಡನೇ ದಿನದಲ್ಲೂ ಭಾರಿ ಕುಸಿತ ₹14,090 – 14,117₹15,371 – ₹15,398

ಈ ಮೇಲಿನ ಚಾರ್ಟ್ ನಲ್ಲಿ ಕಾಣುತ್ತಿರುವಂತೆ ಬಜೆಟ್ ಮಂಡನೆಯಾದ ನಂತರ ಎರಡು ದಿನಗಳಲ್ಲಿ ಬಂಗಾರದ ದರ ಸ್ವಲ್ಪ ಏರಿಕೆ ಕಂಡರೂ, ಉಳಿದ ದಿನಗಳಲ್ಲಿ ಬಂಗಾರದ ದರ ಇಳಿಕೆ ಕಂಡಿದೆ. ಹಾಗೂ ಮುಂದಿನ ದಿನಗಳಲ್ಲಿ ಭಾರಿ ಇಳಿಕೆಯಾಗುವ ಸಾಧ್ಯತೆಗಳಿವೆ.

ಬಂಗಾರ ಪ್ರಿಯರು ಫುಲ್ ಕುಶ್!

ಬಜೆಟ್ ಮಂಡನೆಯ ನಂತರ ಚಿನ್ನದ ದರದಲ್ಲಿ ಭಾರಿ ಕುಸಿತ ಕಂಡಿದ್ದು, ಇನ್ನು ಎರಡು ದಿನಗಳ ನಂತರ ಬಂಗಾರದ ದರ ಮತ್ತಷ್ಟು ಕುಸಿತಗಳಲಿದೆ. ತಜ್ಞರು ತಿಳಿಸಿರುವಂತೆ ಪ್ರತಿ ಗ್ರಾಂ ಗಳ ಮೇಲೆ ₹2,000 ದ ವರೆಗೆ ಭಾರಿ ಕುಸಿತ ಕಾಣಲಿದ್ದು, ಬಂಗಾರ ಪ್ರಿಯರಿಗೆ ಬಂಪರ್ ಗುಡ್ ನ್ಯೂಸ್ ಸಿಕ್ಕಿದೆ.

ತಮ್ಮ ಮಕ್ಕಳ ಮದುವೆಗೆ, ಹಾಗೂ ಇತರೆ ಶುಭ ಸಮಾರಂಭಗಳಿಗೆ ಚಿನ್ನ ಖರೀದಿಸಬೇಕೆಂದಿರುವವರು ಈ ದಿನದಲ್ಲಿ ಖರೀದಿಸಿ ಈಗಿರುವ ಚಿನ್ನದ ದರಕ್ಕಿಂತ ಕಡಿಮೆ ದರದಲ್ಲಿ ಚಿನ್ನವನ್ನು ಖರೀದಿಸಿ.


ಇಲ್ಲಿ ಗಮನಿಸಿ: “ಈ ಎರಡು ದಿನಗಳ ನಂತರ ಅಂದರೆ ಫೆಬ್ರವರಿ 10 ರ ನಂತರದ ದಿನಗಳಲ್ಲಿ ಚಿನ್ನದ ದರವು ಏರಿಕೆಯಾಗುವ ಸಾಧ್ಯತೆಗಳಿದ್ದು, ಗ್ರಾಹಕರು ಬೇಗನೆ ಚಿನ್ನವನ್ನು ಖರೀದಿ ಮಾಡಿ ಹಣವನ್ನು ಉಳಿತಾಯ ಮಾಡಿ.”

ಕೊನೆಯದಾಗಿ:

ಚಿನ್ನದ ದರವು ಪ್ರತಿ ಗ್ರಾಂ ಗೆ ₹5,000 ಇರುವಾಗಲೇ ಜನಸಾಮಾನ್ಯರಿಗೆ ಕೊಳ್ಳಲು ಸಾಧ್ಯವಾಗದೆ ಇರುವಾಗ ಹಿಂದಿನ ನಾಲ್ಕು ತಿಂಗಳಲ್ಲಿ ದಾಖಲೆ ಮಟ್ಟಕ್ಕೆ ಏರಿಕೆನ್ನು ಕಂಡಿರುವ ಬಂಗಾರದ ಬೆಲೆಯೂ ಬಡ ಮತ್ತು ಮಧ್ಯಮವರ್ಗದವರ ಕೈಗೆ ಎಟುಕದ ಮಟ್ಟಕ್ಕೆ ತಲುಪಿದೆ.

ಮದುವೆ ಸಂಭ್ರಮಗಳಿಗೆ ಚಿನ್ನವು ಅಗತ್ಯವಾಗಿದ್ದು, ಎಷ್ಟೇ ದುಬಾರಿಯಾದರೂ ಬಂಗಾರವನ್ನು ಕೊಳ್ಳುವುದು ಅನಿವಾರ್ಯವಾಗಿರುತ್ತದೆ. ನೀವೇನಾದರೂ ಮದುವೆಗೆ ಬಂಗಾರವನ್ನು ಖರೀದಿ ಮಾಡಬೇಕಾ? ಹಾಗಿದ್ದರೆ ಫೆಬ್ರವರಿ 8 ಮತ್ತು 9 ರಂದು ನಿಮ್ಮ ಹತ್ತಿರದ ಗೋಲ್ಡ್ ಅಂಗಡಿಗೆ ಭೇಟಿ ನೀಡಿ ಸ್ವಲ್ಪ ಮಟ್ಟದ ಅಡ್ವಾನ್ಸ್ ಹಣವನ್ನು ನೀಡಿ ಅಂದಿನ ದರದಲ್ಲಿ ಗೋಲ್ಡ್ ಅನ್ನು ಖರೀದಿ ಮಾಡಿ. ನಂತರದ ದಿನಗಳಲ್ಲಿ ಗೋಲ್ಡ್ ದರ ಇನ್ನಷ್ಟು ದುಬಾರಿ ಯಾಗುವ ಸಾಧ್ಯತೆ ಇದೆ.


ಇತರೆ ಪ್ರಮುಖ ಲಿಂಕುಗಳು:


Join WhatsApp

Join Now

Join Telegram

Join Now

Leave a Comment