ನಮಸ್ಕಾರ ಎಲ್ಲರಿಗೂ ರೈತರಿಗೆ ರೈತರ ಮಕ್ಕಳಿಗೆ ಒಂದು ಗಾದೆ ಮಾತು ಹೇಳ್ತಾರೆ ಬೇಸಾಯ ನೀನ್ ಸಾಯ ನಿನ್ ಮಂದಿಯಲ್ಲ ಸಾಯ ಎಂಬ ಗಾದೆ ಮಾತು ಹೇಳುತ್ತಾರೆ ಕೇಳಿದಿರಾ ಅಲ್ವ! ಆದರೆ ಆ ಗಾದೆ ಮಾತನ್ನ ನಾವು ಖಂಡಿತ ಸುಳ್ಳು ಮಾಡಬಹುದು ಅದು ಹೇಗೆ ಅಂತ ಸಂಪೂರ್ಣ ಮಾಹಿತಿಯನ್ನ ತಿಳಿಸಿಕೊಡ್ತಾ ಹೋಗ್ತೀನಿ. PMFME ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಸೇರಿ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
PMFME Scheme information In Kannada
ಈ ಯೋಜನೆಯ ಮೂಲಕ 15 ಲಕ್ಷದವರೆಗೆ ರೈತರಿಗೆ ಕೊಡುತ್ತಿದ್ದಾರೆ ಯಾಕೆ ಎಂದರೆ ರೈತರು ಒಂದು ಸ್ವಂತ ಉದ್ಯಮ ಶುರುಮಾಡಲಿ ಉದ್ಯಮಿಯಾಗಲಿ ಎಂಬ ಉದ್ದೇಶದಿಂದ ಈ ಕಾರ್ಯಕರ್ಮವನ್ನು ಕೃಷಿ ಸಚಿವರಾದ ಚೆಲುವರಾಯಸ್ವಾಮಿಯವರ ಕೃಷಿ ಇಲಾಖೆಯ ಅಡಿಯಲ್ಲಿ ಕೆಪೆಕ್ ಎನ್ನುವುದರಲ್ಲಿ ಯೋಜನೆ ಬರುತ್ತದೆ.
ಒಂದು ಪ್ರಾಜೆಕ್ಟ್ ಮೂರೂ ಲಾಭ ಸ್ವಂತ ಉಧ್ಯಮವನ್ನುಶುರುಮಾಡುವುದರಿಂದ ಬೇರೆಯವರಿಗೆ ಕೆಲಸಕೊಡುವ ಹಾಗೆ ಬೆಳೆಯ ಬಹುದು ನಮ್ಮ ಲೋಕಲ್ ಪ್ರಾಡಕ್ಟ್ ಗಳು ನಮ್ಮ ದೇಶ ಮಾತ್ರ ಅಲ್ಲದೆ ವಿದೇಶದಲ್ಲೂ ಮಾರುಕಟ್ಟೆಯಲ್ಲೂ ಸಹ ಗದ್ದಲ ಮಾಡುತ್ತವೆ. (PMFME) ಅಷ್ಟೇ ಅಲ್ಲದೆ ನಾವು ನೀವು ಎಲ್ಲರು ಕಾಯ್ತಾ ಇರುವಂತದ್ದು ಆರ್ಥಿಕವಾಗಿ ಉತ್ತಮವಾಗಬೇಕು ಎಂಬುವುದು ನಮ್ಮ ಜೇಬು ಕಟ್ಟಿ ಆಗ್ಬೇಕು ಎಂಬ ಅಸೆ ಸಹಜವಾಗಿ ಇದ್ದೆ ಇರುತ್ತದೆ.
ಈ ಯೋಜನೆಯ ಲಾಭ ನಿಮಗೂ ಸಿಗುತ್ತಾ? ಎಷ್ಟು ಸಿಗುತ್ತೆ? ಹೇಗೆ ಪಡೆದುಕೊಳ್ಳೋದು? ಯಾವ ತರ ಉದ್ಯಮ ಶುರುಮಾಡಬೇಕು ಅಂತ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ
ಏನಿದು PMFME ಯೋಜನೆ:-
ಈ ಯೋಜನೆಯು ಕೇಂದ್ರ ಸರ್ಕಾರ ಆಹಾರ ಮತ್ತು ಸಂಸ್ಕಾರ ಉದ್ಯಮಗಳ ಸಚಿವಾಲಯವು ಜಾರಿಗೆ ತಂದಿರುವ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಇದು ಸೂಕ್ಷ್ಮ ಹಾಗೂ ಸಣ್ಣ ಉದ್ಯಮಿಗಳ ಉತ್ತೇಜಿಸುವ ಗುರಿಯನ್ನು ಹೊಂದಿದ್ದು (PMFME)ಹೊಸ ಆಹಾರ ಸಂಸ್ಕರಣ ಉದ್ಯಮಿ ಪ್ರಾರಂಭಿಸಲು ಅಥವಾ ಈಗಾಗಲೇ ಚಾಲ್ತಿಯಲ್ಲಿರುವ ಉದ್ಯಮವನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಲು ಸಾಲ ಸೌಲಭ್ಯದ ಜೊತೆಗೆ ಗರಿಷ್ಠ 15 ಲಕ್ಷ ಸಹಾಯಧನವನ್ನು ಪಡೆದುಕೊಳ್ಳುವ ಅವಕಾಶವಿದೆ
ಯೋಜನೆಯ ಕಿರು ಪರಿಚಯ:-
| ಯೋಜನೆಯ ಹೆಸರು | ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ಯಮಿಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆ(PMFME) |
| ಫಲಾನುಭವಿಗಳು | ರೈತರು, ಮಹಿಳೆಯರು, ಯುವಕ, ಯುವತಿಯರು, |
| ಒಟ್ಟು ಸಹಾಯಧನದ ಮೊತ್ತ | 15 ಲಕ್ಷ |
| ಅರ್ಜಿ ಸಲ್ಲಿಸುವ ವಿಧಾನ | ಆನ್ ಲೈನ್ ಮತ್ತು ಆಫ್ ಲೈನ್ |
ಯೋಜನೆ ಉದ್ದೇಶ:-
ಯೋಜನೆಯ ಮುಖ್ಯ ಉದ್ದೇಶ ಕೇವಲ ಸಾಲ ನೀಡುವುದಕ್ಕೆ ಅಷ್ಟೇ ಅಲ್ಲದೆ ಭಾರತಾದ್ಯಂತ ಇರುವ ಸಣ್ಣ ಮತ್ತು ಅಸಂಘಟಿತ ಆಹಾರ ಸಂಸ್ಕರಣೆ ಘಟಕಗಳನ್ನು ಜಾಗತಿಕ ಮಟ್ಟಕ್ಕೆ ಏರಿಸುವುದು ವಿದೇಶದ ಮಾರುಕಟ್ಟೆಯಲ್ಲಿ ಸಹ ಅವುಗಳ ಬೇಡಿಕೆಯನ್ನು ಹೆಚ್ಚಿಸುವುದು.
- ಆಧುನಿಕರಣ ಮತ್ತು ತಾಂತ್ರಿಕರಣವನ್ನು ಹೆಚ್ಚಿಸುವುದು:-
ಹಳೆಯ ಪದ್ಧತಿಯಲ್ಲಿ ಆಹಾರ ತಯಾರಿಸುವ ಸಣ್ಣ ಘಟಕಗಳಿಗೆ ಈಗಿನ ಡಿಜಿಟಲ್ ಯುಗಕ್ಕೆ ತಕ್ಕಂತೆ ಯಂತ್ರೋಪಕರಣಗಳನ್ನು ಒದಗಿಸುವುದು ಇದರಿಂದ ಉತ್ಪಾದನಾ ಸಾಮರ್ಥ್ಯ ಹೆಚ್ಚುತ್ತದೆ ಸಮಯ ಉಳಿತಾಯ ಕೆಲಸಗಾರರ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ.
- ಆರ್ಥಿಕ ನೆರವು:-
ಆದಾಯದ ಕೊರತೆಯಿಂದಾಗಿ ಸಂಕಷ್ಟದಲ್ಲಿರುವ ಉದ್ಯಮಿಗಳಿಗೆ ಶೇಕಡ 35% ರಷ್ಟು ಹಣಕಾಸಿನ ನೆರವು ನೀಡುವುದರ ಮೂಲಕ ಅವರಿಗೆ ಬಂಡವಾಳದ ಕೊರತೆಯನ್ನು ನೀಗಿಸುವುದು ಮತ್ತು ಸಾಲದ ಸುಳಿಯಿಂದ ಮುಕ್ತಿಗೊಳಿಸಿ ಉದ್ಯಮವನ್ನು ಬೆಳೆಸಲು ಉತ್ತೇಜಿಸುವುದು
- ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ:-
ಉದ್ಯಮಿದಾರರಿಗೆ ಆಹಾರ ತಯಾರಿಕೆ, ಗುಣಮಟ್ಟ, ಸುರಕ್ಷತೆ, ಸ್ವಚ್ಛತೆ ಮತ್ತು ಮಾರುಕಟ್ಟೆಯ ನಿರ್ವಹಣೆಯ ಬಗ್ಗೆ ತಾಂತ್ರಿಕ ತರಬೇತಿ ನೀಡುವುದು ಜೊತೆಗೆ ರೈತರ ಮತ್ತು ಸಣ್ಣ ಉದ್ಯಮಿಗಳ ಆದಾಯವನ್ನು ದ್ವಿಗುಣ ಮಾಡುವುದು
- ಮಾರುಕಟ್ಟೆ ವಿಸ್ತರಣೆ:-
ಸೂಕ್ಷ್ಮ ಹಾಗೂ ಸಣ್ಣ ಉದ್ಯಮಿದಾರರು ತಯಾರಿಸಿದ ಉತ್ಪನ್ನಗಳಿಗೆ ಉತ್ತಮ ಪ್ಯಾಕೇಜಿಂಗ್ ಬ್ರ್ಯಾಂಡಿಂಗ್ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆಯನ್ನು ಕಲ್ಪಿಸಿಕೊಳ್ಳುವುದು. ಇದರಿಂದಾಗಿ ಸ್ಥಳೀಯ ಉತ್ಪನ್ನಗಳು ದೊಡ್ಡ ದೊಡ್ಡ ಮಾಲ್ ಗಳಲ್ಲಿ ಅಥವಾ ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟವಾಗುವ ಸಾಧ್ಯವಾಗುತ್ತದೆ.
ಒಂದು ಯೋಜನೆ 3 ಲಾಭ:-
ಸ್ವಂತ ಉದ್ಯಮ ಸ್ಥಾಪನೆ:-
ಸೂಕ್ಷ್ಮ ಹಾಗೂ ಸಣ್ಣ ಆಹಾರ ಉದ್ಯಮಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಸಹಾಯಧನವನ್ನು ನೀಡಲಾಗುತ್ತಿದ್ದು. ರೈತರು ಮಹಿಳೆಯರು ಯುವ ಉದ್ಯಮಿಗಳು ಸ್ವಸಹಾಯ ಸಂಘಗಳು ರೈತ ಉತ್ಪಾದಕರ ಸಂಘಗಳು ಮತ್ತು ಖಾಸಗಿ ಸಂಸ್ಥೆಗಳು ತಮ್ಮ ಊರಿನಲ್ಲಿಯೇ ಆಹಾರ ಸಂರಕ್ಷಣಾ ಘಟಕ ಆರಂಭಿಸಿ ಹೆಚ್ಚಿನ ಆದಾಯವನ್ನು ಗಳಿಸಬಹುದು
ಮಾಲೀಕತ್ವ ಬೆಳವಣಿಗೆ:-
ನಮ್ಮ ಒಂದು ಸ್ವಂತ ಉದ್ಯಮ ಶುರುಮಾಡುವುದರಿಂದ ಹಲವು ಕಾರ್ಮಿಕರಿಗೆ ಕೆಲಸ ಕೊಡುವ ಹಾಗೆ ಬೆಳೆಯಬಹುದು ಮಾಲೀಕರಾಗಬಹದು ಉದ್ಯೋಗವನ್ನು ಹುಡಿಕಿಕೊಂಡು ಯಾವುದೊ ಊರಿಗೆ ಹೋಗುವ ಬದಲು ಹಳ್ಳಿಯಲ್ಲೇ ಸ್ವಯಂ ಉದ್ಯೋಗ ಸೃಷ್ಟಿಸುವ ಮೂಲಕ .
ಲೋಕಲ್ ಪ್ರಾಡಕ್ಟ್ ಗಳು ವಿದೇಶಿ ಮಾರುಕಟ್ಟೆಯಲ್ಲಿ:-
ಉತ್ಪನ್ನಗಳಿಗೆ ಉತ್ತಮ ಪ್ಯಾಕೇಜಿಂಗ್ ಬ್ರ್ಯಾಂಡಿಂಗ್ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆಯನ್ನು ಹೆಚ್ಚಿನ ಪ್ರಾಧಾನ್ಯತೆ ಪಡೆದುಕೊಳ್ಳುತ್ತವೆ.
ಈ ಯೋಜನೆಯಲ್ಲಿ ಸಿಗುವ ಸಹಾಯಧನ ಎಷ್ಟು?
ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಉದ್ಯಮಿಗಳ ನಿಯಮ ಬದ್ಧಗೊಳಿಸಿಕೆ ಯೋಜನೆಯ ಮೂಲಕ ಸಣ್ಣ ಹಾಗೂ ಸೂಕ್ಷ್ಮಉದ್ಯಮಿಗಳಿಗೆ ಸಿಗುವ ಸಹಾಯಧನ 15 ಲಕ್ಷ ಅದರಲ್ಲಿ ಕೇಂದ್ರ ಸರ್ಕಾರದಿಂದ 6 ಲಕ್ಷ ಹಾಗೂ ರಾಜ್ಯ ಸರ್ಕಾರದಿಂದ 9 ಲಕ್ಷ ಸಹಾಯಧನ ಒದಗಿಸುತ್ತವೆ.
ಸಾವಿರಾರು ಉದ್ಯಮಗಳ ಸ್ಥಾಪನೆ:-
- ಈ ಯೋಜನೆ ಯೋಜನೆಯ ಪ್ರಯೋಜನ ಪಡೆದ ರೈತರು ಯುವ ಉದ್ಯಮಿಗಳು ಮಹಿಳೆಯರು ಸ್ವಸಹಾಯ ಸಂಘಗಳು ಖಾಸಗಿ ಸಂಸ್ಥೆಗಳು ಉತ್ಪಾದಕರ ಸಂಘಗಳು ತಮ್ಮ ಊರಲ್ಲಿಯೇ ಆಹಾರ ಸಂಸ್ಕರಣ ಘಟಕ ಆರಂಭಿಸಬಹುದು.
- ಕಳೆದ ಐದು ವರ್ಷದಲ್ಲಿ ಎರಡು ಸಾವಿರ ಅರ್ಜಿಗಳ ಸಲ್ಲಿಕೆಯಾಗಿದ್ದು 6,698 ಅರ್ಜಿಗಳ ವಿಲೇವಾರಿ ಮಾಡಲಾಗುತ್ತಿದೆ ಇದೀಗ ಮತ್ತೊಂದು ವರ್ಷ ಅವಧಿ ವಿಸ್ತರಣೆ ಮಾಡಿದ್ದು ಅತಿಹೆಚ್ಚಿನಹೊಸ ಅರ್ಜಿಗಳನ್ನು ಆಹ್ವಾನಿಸುವ ಗುರಿಯನ್ನು ಹೊಂದಿದೆ
- ಈ ಯೋಜನೆಗೆ ಅರ್ಜಿ ಸಲ್ಲಿಸಿ ಸಹಾಯಧನ ಪಡೆದ ಪಡೆದು ರಾಜ್ಯಾದ್ಯಂತ ಸಂಕರಣ ಘಟಕಗಳು ಸ್ಥಾಪನೆಯಾಗಿವೆ
- ಜೊತೆಗೆ 783 ಎಣ್ಣೆಯ ಗಾಣದ ಘಟಕಗಳು 380 ಬೆಲ್ಲದ ಘಟಕಗಳು 180 ಮಸಾಲಾ ಪ್ರಾಡಕ್ಟ್ ಉದ್ಯಮಗಳು ಆರಂಭವಾಗಿದ್ದು ಸಿರಿಧಾನ್ಯ ಉತ್ಪನ್ನಗಳು ವಿದೇಶಿ ಗಳಿಗೆ ರಫ್ತುವಾಗುತ್ತಿವೆ.
ಯೋಜನೆಯ ಮುಖ್ಯ ಅಂಶಗಳು (PMFME)
- ಸಹಾಯಧನ:- ಐದು ವರ್ಷಗಳಲ್ಲಿ 10 ಕೋಟಿ ರೂ ಅನುದಾನ
- ವ್ಯಾಪ್ತಿ:- 2 ಲಕ್ಷ ಕಿರು ಆಹಾರ ಸಂಸ್ಕರಣ ಘಟಕಗಳಿಗೆ ಸಾಲ ಸಂಬಂಧಿತ ಸಬ್ಸಿಡಿ ಮತ್ತು ಮೂಲಸೌಕರ್ಯಗಳ ಬೆಂಬಲ
- ಜಿಲ್ಲೆಗೆ ಒಂದು ಉತ್ಪನ್ನ:- ಜಿಲ್ಲೆಗೆ ಬಂದು ನಿರ್ದಿಷ್ಟ ಉತ್ಪನ್ನಕ್ಕೆ ಆದ್ಯತೆ ನೀಡುವುದರಿಂದ ಕಚ್ಚ ವಸ್ತುಗಳ ಖರೀದಿ ಸಂಸ್ಕರಣೆ ಮತ್ತು ಮಾರಾಟ ಸುಲಭ ಗೊಳ್ಳುತ್ತದೆ
ಯೋಜನೆ ಲಾಭ ಪಡೆಯಲು ಯಾರೆಲ್ಲಾ ಅರ್ಹರು?
- ರೈತ ಉತ್ಪಾದಕ ಸಂಸ್ಥೆಗಳು, ಸಹಕಾರಿ ಸಂಘಗಳು, ಸ್ವಸಹಾಯ ಸಂಘಗಳು
- ಉದ್ಯಮದ ಮಾಲೀಕತ್ವ ಅಥವಾ ಪಾಲುದಾರಿಕೆಯ ಹಕ್ಕು
- ಕನಿಷ್ಠ ವಿದ್ಯಾರ್ಹತೆಯ ಅಗತ್ಯವಿರುವುದಿಲ್ಲ
- ಅಸ್ತಿತ್ವದಲ್ಲಿರುವ ಕಿರು ಉದ್ಯಮಗಳಿಗೆ ಹೆಚ್ಚಿನ ಆದ್ಯತೆಗಳು ಅಥವಾ ಗುಂಪುಗಳಿಗೆ ಹೊಸ ಘಟಕಗಳು
- ಒಂದು ಜಿಲ್ಲೆ ಒಂದು ಉತ್ಪನ್ನಕ್ಕಾಗಿ ಮಾತ್ರ ಬೆಂಬಲವಾಗಿರುತ್ತದೆ(ODOP)
ಯಾವೆಲ್ಲ ಉತ್ಪನ್ನಗಳಿಗೆ ಸಹಾಯಧನ ಸಿಗುತ್ತದೆ:-
- ಬೆಲ್ಲ ಮತ್ತೆ ಸಕ್ಕರೆ ಉತ್ಪನ್ನ ಘಟಕಗಳು
- ಬೇಕರಿ ಉತ್ಪನ್ನ ಘಟಕಗಳು
- ಮೆಣಸಿನ ಪುಡಿ ಘಟಕಗಳು
- ಮೀನುಗಾರಿಕೆ
- ಮಾಂಸ ಮತ್ತು ಕೋಳಿ ಮತ್ತು ಪಶು ಆಹಾರ ಘಟಕಗಳು
- ಉಪ್ಪಿನಕಾಯಿ ಹಪ್ಪಳ ಮಸಾಲಗಳು
- ಜೇನುತುಪ್ಪ ಅರಿಶಿನ ಶುಂಠಿ
- ಅನಾನಸ್ ಹಲವಾರು ಹಣ್ಣು
- ತರಕಾರಿ ಸಂಸ್ಕರಣೆ ಘಟಕಗಳು
- ಸಿರಿಧಾನ್ಯ ಸಂಸ್ಕರಣ ಘಟಕಗಳು
ಯೋಜನೆಯ ಪ್ರಯೋಜನಗಳನ್ನು ತಿಳಿಯೋಣ :-
- ದೊಡ್ಡ ಮೊತ್ತದ ಸಬ್ಸಿಡಿ ಯೋಜನಾ ವೆಚ್ಚದ ಶೇಕಡ 35ರಷ್ಟು ದೊರೆಯುತ್ತವೆ ಸಹಾಯಧನದ ಮೊತ್ತ ಗರಿಷ್ಠ 10 ಲಕ್ಷದವರೆಗೆ ನೇರ ಸಬ್ಸಿಡಿ
- ಸರ್ಕಾರವೇ ಯೋಜನೆಗೆ ಶಿಫಾರಸ್ಸು ಮಾಡಿರುವುದರಿಂದ ಬ್ಯಾಂಕ್ ಗಳಿಂದ ಬ್ಯಾಂಕ್ ಗಳಿಂದ ಸುಲಭವಾಗಿ ಸಾಲ ಪಡೆಯಬಹುದು
- ಇದು ಮುದ್ರಾ ಅಥವಾ ಇತರೆ ಆದ್ಯತೆ ವಲಯದ ಸಾಲದ ಅಡಿಯಲ್ಲಿ ಬರುವುದರಿಂದ ಬಡ್ಡಿದರವು ಖಾಸಗಿ ಬಡ್ಡಿದರಕ್ಕಿಂತ ಕಡಿಮೆ ಇರುತ್ತದೆ
- ಆಹಾರದ ಗುಣಮಟ್ಟ ಕಾಯ್ದುಕೊಳ್ಳುವುದು ಯಂತ್ರದ ಬಳಕೆ ಮತ್ತು ಸುರಕ್ಷತೆಯ ಬಗ್ಗೆ ಸರ್ಕಾರವೇ ತರಬೇತಿ ನೀಡುತ್ತದೆ, ಕೈಯಿಂದ ಮಾಡುವ ಕೆಲಸವನ್ನು ಯಂತ್ರಗಳ ಯಂತ್ರಗಳ ಮೂಲಕ ಮಾಡುವುದರಿಂದ ಉತ್ಪಾದಕತೆ ಹೆಚ್ಚುತ್ತದೆ ಗುಣಮಟ್ಟ ಸುಧಾರಿಸುತ್ತದೆ.
ಅಗತ್ಯ ದಾಖಲೆಗಳು:
- BPL ಪಡಿತರ ಚೀಟಿ
- ಆದಾಯ ಪ್ರಮಾಣಪತ್ರ
- ಉದ್ಯಮಕ್ಕೆ ಸಂಬಂಧಿಸಿದ ದಾಖಲೆಗಳು
- ಮೊಬೈಲ್ ನಂಬರ್
- ಆಧಾರ್ ಕಾರ್ಡ್
- ಭಾವಚಿತ್ರ
- ವಿಶೇಷ ಪ್ರಮಾಣಪತ್ರಗಳು
- ಬ್ಯಾಂಕ್ ಪಾಸ್‌ಬುಕ್
ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ವೆಬ್ಸೈಟ್ ಗೆ ಭೇಟಿ https://pmfme.mofpi.gov.in/pmfme/#/Home-Page ನೀಡಿ
- ನಿಮ್ಮ ಮೊಬೈಲ್ ನಂಬರ್ ಹಾಕಿ
- ಜಿಲ್ಲೆ ತಾಲ್ಲೂಕು ಪಿನ್ ಕೋಡ್ ಗ್ರಾಮ ಹೋಬಳಿ
- ಆಯ್ಕೆ ಮಡಿದ ನಂತರ ಮುಂದುವರೆಸಿ ಅನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ 12 ಅಂಕಿಯ ಆಧಾರ್ ಕಾರ್ಡ್ ಸಂಖ್ಯೆ ಅನ್ನು ನಮೂದಿಸಬೇಕು.
ಆಧಾರ್ ಕಾರ್ಡ್‌ನಲ್ಲಿರುವಂತೆ ಹೆಸರು ಅನ್ನು ಸರಿಯಾಗಿ ನಮೂದಿಸಿ - ನಂತರ ನಿಮ್ಮ ಅಗತ್ಯ ದಾಖಲೆಗಳನ್ನ ಜಾಗರೂಕತೆಯಿಂದ ಭರ್ತಿ ಮಾಡಬೇಕು.
- ಭರ್ತಿ ಮಾಡಿದ ದಾಖಲೆಗಳು ಸರಿ ಎಡಿಎ ಎಂದು ಪರಿಶೀಲಿಸಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನ ಸಲ್ಲಿಸಿ.
| ಗಮನಿಸಿ:- ಗ್ರಾಮೀಣ ಭಾಗದ ರೈತರು ಸಣ್ಣ ವ್ಯಾಪಾರಿಗಳು ಉನ್ನತ ಸ್ಥಾನಕ್ಕೆ ಹೊಗಳಲಿ ಎಂಬ ಉದ್ದೇಶದಿಂದ 15 ಲಕ್ಷ ಪ್ರೋತ್ಸಹದನ ನೀಡುತ್ತಿದ್ದು. ಭಾರತದ ಮೂಲೆ ಮೂಲೆ ಯಲ್ಲರುವ ಎಲ್ಲ ವರ್ಗದ ಜನರಿಗೂ ಇದರ ಲಾಭ ಲಭ್ಯ |
ತೀರ್ಮಾನ:-
ನೀವು ಒಂದು ಸ್ವಂತ ಉದ್ಯಮವನ್ನು ಪ್ರಾರಂಭಿಸಬೇಕಾ ಹಾಗಾದ್ರೆ ಈ ಯೋಜನೆಯ ಮೂಲಕ ದೊಡ್ಡ ಮಟ್ಟದ 15 ಲಕ್ಷ ಸಹಾಯದವನ್ನು ಕೇಂದ್ರ ಸರ್ಕಾರದಿಂದ 6 ಲಕ್ಷ ಹಾಗೂ ರಾಜ್ಯ ಸರ್ಕಾರದಿಂದ 9 ಲಕ್ಷ ಸಹಾಯಧನ ಒದಗಿಸುತ್ತವೆ. ಯೋಜನೆಯ ಮುಖ್ಯ ಉದ್ದೇಶ ಕೇವಲ ಸಾಲ ನೀಡುವುದಕ್ಕೆ ಅಷ್ಟೇ ಅಲ್ಲದೆ ಭಾರತಾದ್ಯಂತ ಇರುವ ಸಣ್ಣ ಮತ್ತು ಅಸಂಘಟಿತ ಆಹಾರ ಸಂಸ್ಕರಣೆ ಘಟಕಗಳನ್ನು ಜಾಗತಿಕ ಮಟ್ಟಕ್ಕೆ ಏರಿಸುವುದು ವಿದೇಶದ ಮಾರುಕಟ್ಟೆಯಲ್ಲಿ ಸಹ ಅವುಗಳ ಬೇಡಿಕೆಯನ್ನು ಹೆಚ್ಚಿಸುವುದು.
ಇತರೆ ಪ್ರಮುಖ ಸರ್ಕಾರಿ ಹುದ್ದೆಗಳ ಲಿಂಕುಗಳು:
- 10ನೇ ತರಗತಿ ಓದಿದ್ರೆ ಸಾಕು! ಸರ್ಕಾರಿ ನೌಕರಿ ಬಯಸುವವರಿಗೆ ಇದು ಸುವರ್ಣಾವಕಾಶ!
- MESCOM Apprentice : 200 ಹುದ್ದೆಗಳು ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲಿದೆ ಸರ್ಕಾರಿ ಉದ್ಯೋಗ!
- ಶಿವಮೊಗ್ಗ ಜಿಲ್ಲಾ ಗೃಹರಕ್ಷಕ ದಳ ನೇಮಕಾತಿ 2026 – Shivamogga Home Guards Recruitment 2026
- ಭಾರತೀಯ ಅಂಚೆ ಇಲಾಖೆ, 28,635 ಹುದ್ದೆಗಳು +10ನೇ ಪಾಸ್ 2026 ನೇಮಕಾತಿ
- SBI : ₹85,920/-ವೇತನ : ಬರೋಬ್ಬರಿ 2077 ಹುದ್ದೆಗಳ ಬರ್ತಿಗಾಗಿ ಅರ್ಜಿ







