ಕೇಂದ್ರದ 2026ರ ಬಜೆಟ್ ಮಂಡನೆ ಬಳಿಕ ಕರ್ನಾಟಕ ಸರ್ಕಾರ ದಿಂದ ಕಟ್ಟಡ ಕಾರ್ಮಿಕ, ಮತ್ತು ಇತರೆ ಕಾರ್ಮಿಕ ಗರ್ಭಿಣಿ ಮಹಿಳೆಯರಿಗೆ ಸಿಗ್ತು ಭರ್ಜರಿ ಗಿಫ್ಟ್ !. ತಾಯಿ ಲಕ್ಷ್ಮೀ ಬಾಂಡ್ (Maternity Benefit / Delivery Assistance) ಯೋಜನೆ ಅಡಿಯಲ್ಲಿ ಮೊದಲನೇ ಹೆರಿಗೆ ಮತ್ತು ಎರಡನೇ ಹೆರಿಗೆಯಲ್ಲಿ ಸಿಗುತ್ತಿದ್ದ ಸಹಾಯಧನವನ್ನ 2% ಅಷ್ಟು ಹೆಚ್ಚಿಗೆ ಮಾಡಿದೆ ಆದರೆ ಗಂಡು ಮಗುವಿಗೆ ಎರಡು ಹೆರಿಗೆಯಲ್ಲೂ ಒಂದೇ ರೀತಿಯ ಸಹಾಯಧನ ಸಿಗುತ್ತದೆ ಯಾವುದೇ ಬದಲಾವಣೆ ಮಾಡಲಿಲ್ಲ. (KBOCWWB) ಈ ಯೋಜನೆ ಇಂದ ಸಿಗುವ ಲಾಭದ ಬಗ್ಗೆ ಪ್ರತಿಯೊಬ್ಬ ಕಾರ್ಮಿಕ ಮತ್ತು ಕಾರ್ಮಿಕನ ಹೆಂಡತಿ ತಿಳಿಯಲೇ ಬೇಕು.
KBOCWWB Scheme Information in Kannada
ಆದರೆ, ದುರದೃಷ್ಟವಶಾತ್, 2026ನೇ ವರ್ಷ ಬಂದರೂ ಕೆಲವರು ಈ ಯೋಜನೆ ಬಗ್ಗೆ, ಯೋಜನೆಯ ಹೆಸರಿನ ಬಗ್ಗೆ ತಿಳಿಯದೆ ಇರುವುದು ನಿಜ. ನಮ್ಮ ಕಟ್ಟಡ ಕಾರ್ಮಿಕ ತಾಯಿಗಳು ಮತ್ತು ಕುಟುಂಬಗಳಿಗೆ ಈ ಮಾಹಿತಿ ತಲುಪಿಸದೇ ಇದ್ದರೆ, ಅವರ ಹಕ್ಕು ಸದುಪಯೋಗವಾಗುವುದಿಲ್ಲ.
“ಹಾಗಾಗಿ ತಾಯಿ ಲಕ್ಷ್ಮೀ ಬಾಂಡ್ ಯೋಜನೆಯ (KBOCWWB) ಬಗ್ಗೆ ಹಾಗೆ ಕರ್ನಾಟಕ ಸರ್ಕಾರ ಕೇಂದ್ರದ ಬಜೆಟ್ ಬಳಿಕ ಸಹಾಯಧನ ಹೆಚ್ಚಿಸಿರುವುದನ್ನು ಸಂಪರ್ಣವಾಗಿ ತಿಳಿಸಲೇ ಬೇಕೆನ್ನುವ ಉದ್ದೇಶ ನನ್ನ ದಾಗಿದೆ”.
ಪ್ರತಿ ತಾಯಿ ತನ್ನ ಮಗುವಿನ ಮೊದಲ ನಗು ಮತ್ತು ಹೆಜ್ಜೆ ಬಗ್ಗೆ ಕನಸು ಕಂಡು ಕುಳಿತಿರುವಾಗ, ಈ ಹಣಕಾಸಿನ ಬೆಂಬಲವು ಆತಂಕವನ್ನು ಕಡಿಮೆ ಮಾಡಿ, ಸಂತೋಷವನ್ನು ಹೆಚ್ಚಿಸುತ್ತದೆ. (KBOCWWB)ಎರಡನೇ ಹೆರಿಗೆ ಸಹಾಯಧನದ ಹೆಚ್ಚಳವು ಕುಟುಂಬದ ಆರ್ಥಿಕ ಭರವಸೆಯನ್ನು ಬಲಪಡಿಸಿ, ಹೊಸ ಮಗುವಿನ ಹುಟ್ಟುವ ಸಂಭ್ರಮವನ್ನು ಸುರಕ್ಷಿತವಾಗಿ ಅನುಭವಿಸಲು ನೆರವಾಗುತ್ತದೆ.
ತಾಯಿ ಲಕ್ಷ್ಮೀ ಬಾಂಡ್ ಯೋಜನೆ
ಗಮನಾರ್ಹವೇನೆಂದರೆ, ಗಂಡು ಮಗುವಿಗೆ ಸಹಾಯಧನ ಮೊದಲ ಮತ್ತು ಎರಡನೇ ಹೆರಿಗೆಗಳಲ್ಲಿ ಸಮಾನ. ಇದು ಲಿಂಗ ಸಮಾನತೆ, ನ್ಯಾಯ, ಮತ್ತು ಪ್ರತಿಯೊಬ್ಬ ಮಗುವಿನ ಹಕ್ಕುಗಳ ಮೆಟ್ಟಿಲು ಎಂದು ತೋರಿಸುತ್ತದೆ. ತಾಯಿಯ ಕನಸುಗಳು, ಮಗುವಿನ ಬೆಳಕು, ಕುಟುಂಬದ ನೆಮ್ಮದಿ.
“ತಾಯಿಯ ಕನಸು, ಮಗುವಿನ ಭವಿಷ್ಯ, ಕುಟುಂಬದ ನೆಮ್ಮದಿ – ಸರ್ಕಾರದ ಪ್ರೋತ್ಸಾಹದಿಂದ ಸಾಧ್ಯವಾಗುತ್ತದೆ”.
ಈ ಯೋಜನೆ ಕೇವಲ ಹಣಕಾಸಿನ ಪೂರೈಕೆ ಅಲ್ಲ, ಇದು ಮಾನವೀಯತೆ, ಪ್ರೀತಿ, ಮತ್ತು ಸಮಾಜದ ಜವಾಬ್ದಾರಿ. ತಾಯಿಯ ಪ್ರತಿ ಹೆಜ್ಜೆ, ಮಗುವಿನ ಮೊದಲ ನಗು, ಕುಟುಂಬದ ಸಂತೋಷ – ಎಲ್ಲವನ್ನೂ ಬೆಂಬಲಿಸುವ ರಾಜ್ಯದ ನಿರ್ಧಾರ, ಪ್ರತಿಯೊಬ್ಬ ಕುಟುಂಬದ ಜೀವನದಲ್ಲಿ ಬೆಳಕಿನ ಕಿರಣವಾಗಿ ಪ್ರಕಾಶಿಸುತ್ತದೆ.
ಯೋಜನೆಯ ಪರಿಚಯ :-
| ಅಂಶ | ವಿವರ | ಟಿಪ್ಪಣಿ |
|---|---|---|
| ಯೋಜನೆಯ ಹೆಸರು | ತಾಯಿ ಲಕ್ಷ್ಮೀ ಬಾಂಡ್ | ಮಹಿಳಾ ಕಾರ್ಮಿಕರಿಗೆ ಹೆರಿಗೆ ಸಂದರ್ಭದಲ್ಲಿ ನೆರವು |
| ಜಾರಿಗೆ ತಂದ ಇಲಾಖೆ | ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ | ರಾಜ್ಯ ಸರಕಾರದ ಅಧಿಕೃತ body |
| ಫಲಾನುಭವಿಗಳು | ನೋಂದಾಯಿತ ಮಹಿಳಾ ಕಾರ್ಮಿಕರು | ಅರ್ಹತೆಯನ್ನು ಪರಿಶೀಲಿಸಿ ಮಾತ್ರ |
| ಉದ್ದೇಶ | ಹೆರಿಗೆ ಸಮಯದ ಆರ್ಥಿಕ ಭದ್ರತೆ | ತಾಯಿಗೆ ಸುಗಮ, ಸುರಕ್ಷಿತ ಜೀವನದ ಹಕ್ಕು |
| ಸಹಾಯಧನ ಮೊತ್ತ | ₹51,000 ಗರಿಷ್ಠ(2026 ರ ಹೊಸ ಬದಲಾವಣೆ) | ಮೊದಲ 2 ಹೆರಿಗೆಗಳಿಗೆ ಮಾತ್ರ |
| ಹಣ ಪಾವತಿ ವಿಧಾನ | DBT – ನೇರ ಬ್ಯಾಂಕ್ ಖಾತೆಗೆ | ಹಣ ನೇರವಾಗಿ ಬ್ಯಾಂಕ್ ಖಾತೆಗೆ |
| ಅನ್ವಯ | ಮೊದಲ 2 ಹೆರಿಗೆಗಳಿಗೆ ಮಾತ್ರ | ಮುಂದಿನ ಹೆರಿಗೆಗಳಿಗೆ ಅನ್ವಯಿಸುವುದಿಲ್ಲ |

ಇನ್ನು ತಡ ಮಾಡುವುದು ಬೇಡ, ತಾಯಿ ಲಕ್ಷ್ಮೀ ಬಾಂಡ್ ಯೋಜನೆಯಿಂದ (KBOCWWB) ಸಿಗುವ ಲಾಭಗಳು, ಸಹಾಯಧನದ ಹೆಚ್ಚಳ, ಅರ್ಹತೆಗಳು ಹೀಗೆ ಈ ಯೋಜನೆಯ ಬಗ್ಗೆ ತಿಳ್ಸ್ಕೊಡಿತ ಹೋಗ್ತೀನಿ ಬನ್ನಿ,,,,
KBOCWWB ಯೋಜನೆಯ ಮುಖ್ಯ ಉದ್ದೇಶ (Purpose) :
ಈ ಯೋಜನೆಯು ತನ್ನದೇ ಆದ ಉದ್ದೇಶವನ್ನ ಒಳಗೊಂಡಿದೆ, ಇದನ್ನ ಪ್ರತಿಯೊಬ್ಬರೂ ತಿಳಿಯಲೇಬೇಕು.
- ಇಂದಿನಿಂದ ಈ ಯೋಜನೆಯಡಿ ಕಾರ್ಮಿಕ ಕಾರ್ಡ್ ಇರುವ ಕುಟುಂಬದಲ್ಲಿ ಹೆಣ್ಣು ಮಗು ಹುಟ್ಟಿದರೆ ಆ ಮಗುವಿಗೆ ಇಂದಿನ ದೈನಂದಿನ ದಿನದ ಖರ್ಚು ವೆಚ್ಚ ಪರಿಗಣಿಸಿ ಹೆಣ್ಣುಮಕ್ಕಳ ಬೆಳವಣಿಗೆ ಉತ್ತಮವಾಗಿರಬೇಕು ಎನ್ನುವ ಉದ್ದೇಶದಿಂದ 2% ಅಷ್ಟು ಸಹಾಯಧನ ಹೆಚ್ಚಿಸಿದೆ.
- ಗರ್ಭಿಣಿ ತಾಯಿಗಳಿಗೆ ವೈದ್ಯಕೀಯ ನೆರವು ಮತ್ತು ಹಣಕಾಸಿನ ಬೆಂಬಲ ಕೊಡುವುದು ಜೊತೆಗೆ ಇದರಿಂದ ತಾಯಿಯ ಗರ್ಭಧಾರಣೆ ಸುರಕ್ಷಿತವಾಗಿರುತ್ತದೆ ಮತ್ತು ಮಗುವಿನ ಜನನ ಸುಲಭವಾಗುತ್ತದೆ.
- ಸರ್ಕಾರದ ಇಂತಹ ಹೆರ್ಗೆ ಸಹಾಯಧನದಿಂದ ಮಗುವಿಗೆ ಮೊದಲ ಆಹಾರ, ಚಿಕಿತ್ಸೆ ಮತ್ತು ಆರೋಗ್ಯದ ಅಗತ್ಯಗಳನ್ನು ಸುಲಭವಾಗಿ ಕೊಡಬಹುದು ಹಾಗೆ ಇದರಿಂದ ಹುಟ್ಟುವ ಮಕ್ಕಳು ಅರೋಗ್ಯ ಕರವಾಗಿರುತ್ತವೆ.
- ತಾಯಿಯ ಹೆರಿಗೆಯ ಸಮಯದಲ್ಲಿ ಹಣಕಾಸಿನ ಒತ್ತಡ ಕಡಿಮೆ ಆಗುತ್ತದೆ. ಇದರಿಂದ ಕುಟುಂಬಕ್ಕೆ ನೆಮ್ಮದಿ ಜೊತೆಗೆ ಹಣಕಾಸಿನ ಭರವಸೆಯು ಈ ಯೋಜನೆಯ ಮೂಲಕ ಸಿಗುತ್ತದೆ.
- ತಾಯಿಯ ಎರೆಡು ಹೆರಿಗೆಯಲ್ಲಿ ಗಂಡು ಮಕ್ಕಳು ಜನಿಸಿದರೆ ಒಂದೇ ರೀತಿಯ ಸಹಾಯಧನ ಸಿಗುತ್ತದೆ. ಯಾವುದೇ ರೀತಿ ಹೆಚ್ಚು- ಕಮ್ಮಿ ಇಲ್ಲ ಅಂದರೆ ಎಲ್ಲ ಮಕ್ಕಳಿಗೂ ಸಮಾನ ಅವಕಾಶ ಮತ್ತು ನ್ಯಾಯ ದೊರಕುತ್ತದೆ.
- ಕಾರ್ಮಿಕರು, ಗರ್ಭಿಣಿ ಮಹಿಳೆ ಮತ್ತು ಕುಟುಂಬಗಳಿಗೆ ಯೋಜನೆಯ ಲಾಭ, ಅರ್ಹತೆ ಮತ್ತು ಸಹಾಯಧನ ಪ್ರಮಾಣವನ್ನು ತಿಳಿಸುವ ಮೂಲಕ, ಎಲ್ಲರೂ ತಮ್ಮ ಹಕ್ಕನ್ನು ಸಂಪೂರ್ಣವಾಗಿ ಪಡೆಯಬಹುದು.
ಈ ಯೋಜನೆಗೆ ಯಾರು ಅರ್ಹರು ?
- ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ನೋಂದಾಯಿತ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು.
- ಪ್ರಥಮ ಅಥವಾ ಎರಡನೇ ಹೆರಿಗೆಗಾಗಿ ಗರ್ಭಿಣಿಯಾಗಿರುವ ತಾಯಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
- ಈ ಯೋಜನೆಯ ಲಾಭ ಮೊದಲ 2 ಹೆರಿಗೆಗಳಿಗೆ ಮಾತ್ರ ಲಭ್ಯವಿದೆ.
- ಗರ್ಭಿಣಿ ಮಹಿಳೆ ಮತ್ತು ಕುಟುಂಬಗಳು ಹೆರಿಗೆ ಸಮಯದಲ್ಲಿ ಹಣದ ತೊಂದರೆ ಎದುರಿಸಬಾರದು, ಹಾಗಾಗಿ ಸರ್ಕಾರವು ಈ ಸಹಾಯಧನ ನೀಡುತ್ತದೆ.
- ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಿಗೆ ಮಾತ್ರ ಯೋಜನೆಯ ಲಾಭ ಸೀಮಿತವಾಗಿದೆ.
ಕಾರ್ಮಿಕ ಕುಟುಂಬಕ್ಕೆ ಸಿಗುವ ಲಾಭ ತಿಳಿದರೆ ಶಾಕ್ ಆಗ್ತೀರಾ !
- ತಾಯಿಗೂ ಮಗುವಿಗೂ ಸುರಕ್ಷಿತ ಜನನಕ್ಕೆ ಸರ್ಕಾರ ಹಣ ಮತ್ತು ವೈದ್ಯಕೀಯ ನೆರವು ನೀಡುತ್ತದೆ.
- ಪ್ರಥಮ ಮತ್ತು ಎರಡನೇ ಹೆರಿಗೆಗಳಲ್ಲಿ ಮಹಿಲ್ರಗ್ರ್ ಸಿಗುವ ಸಹಾಯಧನದಿಂದ ಮಗುವಿಗೆ ಆಹಾರ, ಚಿಕಿತ್ಸೆ ಮತ್ತು ಆರೋಗ್ಯ ಕಾಳಜಿ ಸರಾಗವಾಗಿ ಸಿಗುತ್ತದೆ.
- ತಾಯಿ ಆರೋಗ್ಯಕ್ಕೂ, ಮಗುವಿನ ಜೀವನಕ್ಕೂ ಸುರಕ್ಷಿತ ಆರಂಭ.
- ಹೆರಿಗೆ ಸಮಯದಲ್ಲಿ ಸರ್ಕಾರ ನೀಡುವ ಹಣಕಾಸಿನ ಸಹಾಯದಿಂದ ತಾಯಿಯ ಮೇಲೆ ಬರುವ ಖರ್ಚಿನ ಒತ್ತಡ ಕಡಿಮೆಯಾಗುತ್ತದೆ. ಹೀಗಾಗಿ ಕುಟುಂಬಕ್ಕೆ ಹಣದ ಒತ್ತಡದಿಂದ ಉಂಟಾಗುವ ಕಷ್ಟ ಕಡಿಮೆಯಾಗುತ್ತದೆ, ಕುಟುಂಬದ ಜನರಿಗೆ ನೆಮ್ಮದಿ, ಭರವಸೆ ಮತ್ತು ಆರ್ಥಿಕ ಸ್ಥಿರತೆ ದೊರಕುತ್ತದೆ.
- ಹೆರಿಗೆ ಸಮಯದಲ್ಲಿ ಖರ್ಚು ಕಡಿಮೆ, ಕುಟುಂಬಕ್ಕೆ ನೆಮ್ಮದಿ
- ಆಸ್ಪತ್ರೆ ಬಿಲ್ ,ಔಷಧಿ ಬಿಲ್, ಹಾಗೆ ಪೌಷ್ಟಿಕ ಆಹಾರವನ್ನ ಸೇವಿಸಲು ಈ ಯೋಜನೆ ಸಹಕಾರಿಯಾಗಿದೆ.
ತಾಯಿ ಲಕ್ಷ್ಮೀ ಬಾಂಡ್ ಯೋಜನೆ (KBOCWWB) ಅಡಿ ಸಿಗುವ ಸಹಾಯಧನ (Amount Details) ವಿವರ :-
ಬಜೆಟ್ ಮಂಡನೆಗೂ ಮೊದಲು ಸಿಗುತ್ತಿದ್ದ ಸಹಾಯಧನದ ಮೊತ್ತದ ವಿವರ :
1. ಹೆಣ್ಣು ಮಗು ಜನನ
- ಕಾರ್ಮಿಕ ಕಾರ್ಡ್ ಹೊಂದಿದ ಕಾರ್ಮಿಕರ ಹೆಂಡತಿಯಯ ಮೊದಲ ಹೆರಿಗೆ ಸುಮಾರು : ₹50,000 ಸಹಾಯಧನ ಸರ್ಕಾರದಿಂದ ಸಿಗುತಿತ್ತು. ಇದು ಹೆಣ್ಣು ಮಗು ಆದರೆ ಮಾತ್ರ.
- ಹಾಗೆ ಎರಡನೇ ಹೆರಿಗೆ ಸರ್ಕಾರದಿಂದ : ₹50,000 ಹಣ ಹೆಣ್ಣು ಮಗು ಜನಿಸಿದರೆ ಸಿಗುತ್ತಿತ್ತು.
2. ಗಂಡು ಮಗು ಜನನ
ಯೋಜನೆ ಮೂಲಕ ತಾಯಿಯ ಮೊದಲ ಮತ್ತು ಎರಡೇ ಹೆರಿಗೆಯಲ್ಲಿ ಗಂಡು ಜನಿಸಿದರು ₹50,000 ನೀಡಲಾಗುತಿತ್ತು ಎರಡು ಮಗು ಇಂದ ಒಟ್ಟು 1 ಲಕ್ಷ ಕಾರ್ಮಿಕ ಕುಟುಂಬಗಳು ಪಡೆಯುತಿದ್ದವು.
ಆದರೆ ಬಜೆಟ್ ಬಳಿಕ ಹೆಚ್ಚಳ : ಪ್ರಸ್ತುತ ಸಿಗುವ ಸಹಾಯಧನ
- ಹೆರಿಗೆಗಳ ಸಹಾಯಧನಕ್ಕೆ 2% ಹೆಚ್ಚಳ
- ಅಂದರೆ ಹೊಸ ಸಹಾಯಧನ: ₹50,000 + 2% = ₹51,000
“ಗರ್ಭಿಣಿ ಮಹಿಳೆ ತನ್ನ ಮೋಡ ಮತ್ತು ಎರಡನೇ ಹೆರಿಗೆಯಲ್ಲಿ ಹೆಣ್ಣು ಮಗು ಜನಿಸಿದರೆ ೨ ೦ ೨ ೬ ಫೆಬ್ರವರಿ ಇಂದ ಸುಮಾರು ₹51,000 ಸಹಾಯಧನವನ್ನ ಸರ್ಕಾರದಿಂದ ಪಡೆಯುತ್ತಾರೆ”.
ಸಹಾಯಧನದ ವರ್ಗಾವಣೆ :-
- ನೇರ ಬ್ಯಾಂಕ್ ಖಾತೆಗೆ DBT (Direct Benefit Transfer) ಮೂಲಕ ಪಾವತಿ ಆಗುತ್ತದೆ.
- ಯಾವುದೇ ಮಾಧ್ಯವರ್ತಿಗಳು ಇರುವುದಿಲ್ಲ.
ಇಲ್ಲಿ ಗಮನಿಸಿ : ಈ ಯೋಜನೆಯ ಸಂಪೂರ್ಣ ಲಾಭ ಕೇವಲ 2 ಹೆರಿಗೆಗಳಿಗೆ ಮಾತ್ರ ಅನ್ವಯ. 3ನೇ ಅಥವಾ ನಂತರದ ಹೆರಿಗೆಗಳಿಗೆ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ.
ಅಗತ್ಯ ದಾಖಲೆಗಳು :-
- ಕಾರ್ಮಿಕ ಕಾರ್ಡ್
- ಆಧಾರ್ ಕಾರ್ಡ್
- ಹೆರಿಗೆ ಪ್ರಮಾಣ ಪತ್ರ
- ಮಗುವಿನ ಜನನ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ವಿಳಾಸ ದೃಢೀಕರಣ
- ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೋ
ತಾಯಿ ಲಕ್ಷ್ಮೀ ಬಾಂಡ್ ಯೋಜನೆ – ಅರ್ಜಿ ಸಲ್ಲಿಸುವ ವಿಧಾನ :-
- ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ವೆಬ್ಸೈಟ್ ತೆರೆಯಬೇಕು
- ತಾಯಿ ಲಕ್ಷ್ಮೀ ಬಾಂಡ್ / ಹೆರಿಗೆ ಸಹಾಯಧನ (KBOCWWB)ಆಯ್ಕೆ ಮಾಡಬೇಕು
- ಕಾರ್ಮಿಕ ನೋಂದಣಿ ಸಂಖ್ಯೆ, ಆಧಾರ್ ಸಂಖ್ಯೆ, ಮೊಬೈಲ್ ನಂಬರ್ ಹಾಕಬೇಕು
- ಬ್ಯಾಂಕ್ ಖಾತೆ ವಿವರಗಳನ್ನು ತುಂಬಬೇಕು
- ಕಾರ್ಮಿಕ ಗುರುತಿನ ಚೀಟಿ ಅಪ್ಲೋಡ್ ಮಾಡಬೇಕು
- ಆಧಾರ್ ಕಾರ್ಡ್ ನಕಲು ಅಪ್ಲೋಡ್ ಮಾಡಬೇಕು
- ವೈದ್ಯರಿಂದ ಪಡೆದ ಗರ್ಭಧಾರಣೆ ಅಥವಾ ಹೆರಿಗೆ ಪ್ರಮಾಣ ಪತ್ರ ಹಾಕಬೇಕು
- ಬ್ಯಾಂಕ್ ಪಾಸ್ಬುಕ್ ನಕಲು ಅಪ್ಲೋಡ್ ಮಾಡಬೇಕು
- ಅರ್ಜಿ Submit ಮಾಡಿದ ನಂತರ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಬರುತ್ತದೆ
ನೀವು ಆನ್ಲೈನ್ ಅರ್ಜಿ ಬಿಟ್ಟು ಆಫ್ಲೈನ್ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಈ ಕೆಳಗಿನ ವಿಧಾನವನ್ನು ಅನುಸರಿಸಿ :-
- ನಿಮ್ಮ ಹತ್ತಿರದ ಕಾರ್ಮಿಕ ಇಲಾಖೆ ಕಚೇರಿ / ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಕಚೇರಿಗೆ ಹೋಗಬೇಕು
- ತಾಯಿ ಲಕ್ಷ್ಮೀ ಬಾಂಡ್ / ಹೆರಿಗೆ ಸಹಾಯಧನ ಅರ್ಜಿ ಫಾರ್ಮ್ (KBOCWWB) ಕೇಳಿ ಪಡೆಯಬೇಕು
- ಫಾರ್ಮ್ನಲ್ಲಿ ನಿಮ್ಮ ಹೆಸರು, ವಿಳಾಸ, ಕಾರ್ಮಿಕ ನೋಂದಣಿ ಸಂಖ್ಯೆ ಬರೆಯಬೇಕು
- ಗರ್ಭಧಾರಣೆ ಅಥವಾ ಹೆರಿಗೆ ವಿವರಗಳನ್ನು ತುಂಬಬೇಕು
- ಕಾರ್ಮಿಕ ಗುರುತಿನ ಚೀಟಿ ನಕಲು ಜೋಡಿಸಬೇಕು
- ಆಧಾರ್ ಕಾರ್ಡ್ ನಕಲು ಸೇರಿಸಬೇಕು
- ವೈದ್ಯರಿಂದ ಪಡೆದ ಗರ್ಭಧಾರಣೆ ಅಥವಾ ಹೆರಿಗೆ ಪ್ರಮಾಣ ಪತ್ರ ಜೋಡಿಸಬೇಕು
- ಬ್ಯಾಂಕ್ ಪಾಸ್ಬುಕ್ ನಕಲು ಸೇರಿಸಬೇಕು
- ಎಲ್ಲ ದಾಖಲೆಗಳೊಂದಿಗೆ ಫಾರ್ಮ್ ಅನ್ನು ಕಚೇರಿಗೆ ಸಲ್ಲಿಸಬೇಕು
- ಪರಿಶೀಲನೆಯ ನಂತರ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ
ನನ್ನ ಕೊನೆಯ ಮಾತು : ತಾಯಿ ಲಕ್ಷ್ಮೀ ಬಾಂಡ್ ಯೋಜನೆ (KBOCWWB)ಕಟ್ಟಡ ಕಾರ್ಮಿಕ ತಾಯಿಗಳಿಗೆ ಸರ್ಕಾರ ನೀಡುವ ಮಹತ್ವದ ಸಹಾಯಧನ ಯೋಜನೆ. ಮೊದಲ ಎರಡು ಹೆರಿಗೆಗಳಿಗೆ ಗರಿಷ್ಠ ₹50,000 (2% ಹೆಚ್ಚಳದೊಂದಿಗೆ ₹51,000) ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ .ಇದು ತಾಯಿಯ ಆರೋಗ್ಯ, ಮಗುವಿನ ಸುರಕ್ಷಿತ ಜನನ ಮತ್ತು ಕುಟುಂಬದ ಆರ್ಥಿಕ ನೆಮ್ಮದಿಗೆ ದೊಡ್ಡ ಬೆಂಬಲ. ಅರ್ಹ ಕಾರ್ಮಿಕ ತಾಯಿಗಳು ಈ ಯೋಜನೆಯ ಬಗ್ಗೆ ತಿಳಿದುಕೊಂಡು ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಬೇಕು.
“ತಾಯಿ ಲಕ್ಷ್ಮೀ ಬಾಂಡ್ – ಕುಟುಂಬಗಳ ಭರವಸೆ, ಸಮಾಜದ ಶಕ್ತಿ.”







