ಭಾರತೀಯ ಅಂತ್ಯ ಇಲಾಖೆಗೆ (GDS Recruitment)ದೇಶದ ಅತ್ಯಂತ ಹಳೆಯ ಹಾಗೂ ವಿಶ್ವಾಸ ಅರ್ಹ ಸರ್ಕಾರಿ ಇಲಾಖೆಯಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ವ್ಯಾಪಕವಾಗಿ ಸೇವೆ ನೀಡಿರುವ ಈ ಇಲಾಖೆಯಲ್ಲಿ ಪ್ರತಿ ವರ್ಷ ವಿವಿಧ ಹುದ್ದೆಗಳ ಬರ್ತಿಯನ್ನ ಮಾಡಿಕೊಳ್ಳಲಾಗುತ್ತದೆ, ಅದೇ ರೀತಿ “2026ನೇ ಸಾಲಿನಲ್ಲಿಯೂ ಅತಿ ದೊಡ್ಡ ನೇಮಕಾತಿ ಅಧಿಸೂಚನೆ ಇದೀಗ ಹೊರಬಿದ್ದಿರುವಂಥದ್ದು” 10ನೇ ತರಗತಿ ಪಾಸ್ ಮಾಡ್ಕೊಂಡ ಅಭ್ಯರ್ಥಿಗಳನ್ನ ಈ ಹುದ್ದೆಗಳಿಗೆ ಆಯ್ಕೆ ಮಾಡುವುದಾಗಿ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದೆ.
GDS Recruitment 2026 in Kannada
ಅಂಚೆ ಇಲಾಖೆಯ (GDS Recruitment) ಉದ್ಯೋಗಗಳ ಪ್ರಮುಖ ಆಕರ್ಷಣೆ ಎಂದರೆ ನಿಯಮಿತ ವೇತನ, ಉದ್ಯೋಗ ಭದ್ರತೆ, ಪಿಂಚಣಿ ಸೌಲಭ್ಯ ಹಾಗೆಯೇ ವೈದ್ಯಕೀಯ ಸೌಲಭ್ಯ ಮತ್ತು ಇತರೆ ಸರ್ಕಾರಿ ಲಾಭಗಳು. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮೆರಿಟ್ ಆಧಾರಿತವಾಗಿರುತ್ತದೆ ಮತ್ತು ಕೆಲ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗುತ್ತದೆ.
ಕೇವಲ ಹತ್ತನೇ ತರಗತಿ ಪಾಸ್ ಮಾಡ್ಕೊಂಡ ಅಭ್ಯರ್ಥಿಗಳಿಗೆ ಭಾರತೀಯ ಅಂಚೆ ಇಲಾಖೆಯಲ್ಲಿ (GDS Recruitment) ಕೆಲಸ ಕೊಡುವುದರಿಂದ ಗ್ರಾಮೀಣ ಭಾಗದ ಯುವಕ-ಯುವತಿಯರಿಗೆ ಉತ್ತಮ ಉದ್ಯೋಗವಕಾಶ ಸಿಕ್ಕಂತಾಗುತ್ತದೆ. ಶಿಸ್ತು, ಸೇವಾಭಾವ ಮತ್ತು ಜವಾಬ್ದಾರಿಯೊಂದಿಗೆ ಕೆಲಸ ಮಾಡುವವರಿಗೆ ಇದು ಉತ್ತಮ ಭವಿಷ್ಯವನ್ನೇ ಕಟ್ಟಿಕೊಡುತ್ತದೆ.
ಭಾರತ ಪೋಸ್ಟ್ ಆಫೀಸ್ ನೇಮಕಾತಿ 2026ರ ಒಳನೋಟ :-
ಉದ್ಯೋಗ ಪ್ರಿಯರಿಗೆ ಇದೀಗ ಕೊಂಚ ರಿಲೀಫ್ ಸಿಕ್ಕಿದೆ. ಯಾಕೆಂದರೆ ಭಾರತೀಯ ಅಂಚೆ ಇಲಾಖೆಯಲ್ಲಿ (GDS Recruitment)ಅತಿ ದೊಡ್ಡ ಮಟ್ಟದ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಅತೀ ಕಡಿಮೆ ವಿದ್ಯಾರ್ಹತೆಯನ್ನ ಈ ಭಾರಿ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದೆ.
| ಸಂಸ್ಥೆಯ ಹೆಸರು : ಅಂಚೆ ಇಲಾಖೆ, ಸಂವಹನ ಸಚಿವಾಲಯ, ಭಾರತ ಸರ್ಕಾರ(ಇಂಡಿಯನ್ ಗೌರ್ಮೆಂಟ್) (GDS Recruitment) ಹುದ್ದೆಯ ಹೆಸರು : ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್) – ಬ್ರಾಂಚ್ ಪೋಸ್ಟ್ ಮಾಸ್ಟರ್ (ಬಿಪಿಎಂ), ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ಎಬಿಪಿಎಂ), ದಕ್ ಸೇವಕ್ ಒಟ್ಟು ಹುದ್ದೆಗಳ ಸಂಖ್ಯೆ : 28635 ಹುದ್ದೆಗಳು ಸಲಹೆ ಸಂಖ್ಯೆ : 17‑37/2025‑GDS (ಅಂಕ.ಐ) ವೇತನ : ರೂ. 10,000/- ದಿಂದ ₹29,380/- ವಯೋಮಿ : 18 ದಿಂದ 40 ವರ್ಷಗಳು ವಿದ್ಯಾರ್ಹತೆ : 10ನೇ ತರಗತಿ ಉತ್ತೀರ್ಣ ನೋಂದಣಿಗೆ ಕೊನೆಯ ದಿನಾಂಕ : 14/02/2026 ಅರ್ಜಿ ಸಲ್ಲಿಸಲು ಆರಂಭದ ದಿನಾಂಕ : 31/01/2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16-02-2026 (5:00 PM) ಅಧಿಕೃತ ಜಾಲತಾಣ : https://indiapost.gov.in/ ಈ ವೆಬ್ಸೈಟ್ನಲ್ಲಿ ಹೆಚ್ಚಿನ ಮಾಹಿತಿ ತಿಳಿಯಬಹುದು. |
“ಭಾರತೀಯ ಅಂಜೆ ಇಲಾಖೆ ನೇಮಕಾತಿ 2026 (GDS Recruitment0, ಭರ್ಜರಿ 28 ಸಾವಿರಕ್ಕೂ ಹೆಚ್ಚು (ಜಿಡಿಎನ್) ಗ್ರಾಮೀಣ ಡಾಕ್ ಸೇವಕ ಹುದ್ದೆಗಳಿಗೆ ಹತ್ತನೇ ತರಗತಿ ಉತ್ತೀರ್ಣರಾದಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಹಾಗೆಯೇ ಜನವರಿ 31 ರಿಂದ ಆನ್ಲೈನ್ ಅಪ್ಲಿಕೇಶನ್ ಆರಂಭವಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 14, 2026 ರ ಒಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ”.
ಹಾಗೆ ಈ ಕೆಳಗೆ ಭಾರತೀಯ ಅಂಚೆ ಇಲಾಖೆಗೆ (GDS Recruitment) ಸಂಬಂಧ ಪಟ್ಟ ವಿದ್ಯಾರ್ಹತೆ, ವೇತನ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಸುವ ಹಂತಗಳು ಮತ್ತು ಅಧಿಕೃತ ಅಧಿಸೂಚನೆ ಹಾಗೇನೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ನೇರ ಲಿಂಕ್ ಒಳಗೊಂಡಂತೆ ಇಂಡಿಯನ್ ಇಂಡಿಯಾ ಪೋಸ್ಟ್ ಹುದ್ದೆಗಳ ನೇಮಕಾತಿ ವಿವರವನ್ನು ನೀವು ಕೆಳಗೆ ನೋಡಬಹುದು.
ಅಂಚೆ ಇಲಾಖೆಯ ಒಟ್ಟು ಹುದ್ದೆಗಳ ಕ್ರಮಬದ್ಧ ವಿವರ :-GDS Recruitment
| ಕ್ರಮ | ರಾಜ್ಯ / ಕೇಂದ್ರ ರಾಜ್ಯ | ಹುದ್ದೆಗಳ ಸಂಖ್ಯೆ |
|---|---|---|
| 1 | ಅಸ್ಸಾಂ | 639 ಹುದ್ದೆಗಳು |
| 2 | ಬಿಹಾರ | 1,344 ಹುದ್ದೆಗಳು |
| 3 | ಚತ್ತೀಸ್ಗಢ | 1,155 ಹುದ್ದೆಗಳು |
| 4 | ದೆಹಲಿ | 37 ಹುದ್ದೆಗಳು |
| 5 | ಗುಜರಾತ್ | 1,782 ಹುದ್ದೆಗಳು |
| 6 | ಹರಿಯಾಣ | 270 ಹುದ್ದೆಗಳು |
| 7 | ಹಿಮಾಚಲ ಪ್ರದೇಶ | 520 ಹುದ್ದೆಗಳು |
| 8 | ಕರ್ನಾಟಕ | 1,022 ಹುದ್ದೆಗಳು |
| 9 | ಕೇರಳ | 1,691 ಹುದ್ದೆಗಳು |
| 10 | ಮಧ್ಯಪ್ರದೇಶ | 2,102 ಹುದ್ದೆಗಳು |
| 11 | ಮಹಾರಾಷ್ಟ್ರ | 3,553 ಹುದ್ದೆಗಳು |
| 12 | ಓಡಿಶಾ | 1,191 ಹುದ್ದೆಗಳು |
| 13 | ಪಂಜಾಬ್ | 261 ಹುದ್ದೆಗಳು |
| 14 | ರಾಜಸ್ಥಾನ | 634 ಹುದ್ದೆಗಳು |
| 15 | ತಮಿಳುನಾಡು | 2,009 ಹುದ್ದೆಗಳು |
| 16 | ತೆಲಂಗಾಣ | 608 ಹುದ್ದೆಗಳು |
| 17 | ಉತ್ತರ ಪ್ರದೇಶ | 3,169 ಹುದ್ದೆಗಳು |
| 18 | ಉತ್ತರಾಖಂಡ | 436 ಹುದ್ದೆಗಳು |
| 19 | ಜಾರ್ಖಂಡ್ | 908 ಹುದ್ದೆಗಳು |
| 20 | ಜಮ್ಮು ಮತ್ತು ಕಾಶ್ಮೀರ | 267 ಹುದ್ದೆಗಳು |
| 21 | ಪಶ್ಚಿಮ ಬಂಗಾಳ | 2,963 ಹುದ್ದೆಗಳು |
| 22 | ಆಂಧ್ರ ಪ್ರದೇಶ | 1,060 ಹುದ್ದೆಗಳು |
| 23 | ಈಶಾನ್ಯ ರಾಜ್ಯಗಳು | 1,014 ಹುದ್ದೆಗಳು |
ಶೈಕ್ಷಣಿಕ ವಿದ್ಯಾರ್ಹತೆ :-
- ಅಭ್ಯರ್ಥಿಗಳು ಭಾರತ ಸರ್ಕಾರ ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶಗಳಿಂದ ಮಾನ್ಯತೆ ಪಡೆದ ಶಾಲಾ ಮಂಡಳಿಯ 10ನೇ ತರಗತಿ ಗಣಿತ ಮತ್ತು ಇಂಗ್ಲಿಷ್ ವಿಷಯದಲ್ಲಿ ಉತ್ತೀರ್ಣರಾಗಿರಬೇಕು.
- ಹುದ್ದೆ ಹುದ್ದೆಗೆ ಸ್ಥಳೀಯ ಭಾಷೆ ತಿಳಿದಿರಬೇಕು.
- ಕೆಲವು ರಾಜ್ಯಗಳಲ್ಲಿ (ಅರುಣಾಚಲ, ಗೋವಾ, ಸಿಕ್ಕಿಂ) ಸ್ಥಳೀಯ ಭಾಷೆ ಕುರಿತ ವಿಶೇಷ ನಿಯಮಗಳು ಅನ್ವಯಿಸುತ್ತವೆ.
ನಿಮ್ಮಲ್ಲಿ ಇರಬೇಕಾದ ಅಗತ್ಯ ದಾಖಲೆಗಳು :
- ಸೈಕ್ಲಿಂಗ್ ಜ್ಞಾನ
- ಜೀವನೋಪಾಯಕ್ಕೆ ಸಮರ್ಪಕ ಮಾರ್ಗಗಳು
- ಕಂಪ್ಯೂಟರ್ಗಳ ಜ್ಞಾನ
ಅಪೇಕ್ಷಣೀಯ
1. ಹುದ್ದೆಗೆ ಅಭ್ಯರ್ಥಿಯು ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಸಿದ್ಧ ಆಗಿರಬೇಕು.
2. ರ್ಟ್ಫೋನ್, ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಬಳಸಲು ಸಾಧ್ಯವಾಗಬೇಕು.
3. ಕಚೇರಿ ನಡೆಸಲು ಮತ್ತು ವಸತಿ ವ್ಯವಸ್ಥೆ ಮಾಡಿಕೊಳ್ಳಲು ಸ್ವಂತ ಸಾಮರ್ಥ್ಯ
ವಯಸ್ಸಿನ ಮಿತಿ :-
ಈ ಹುದ್ದೆಗಳ ಅಧಿಕೃತ ಅಧಿಸೂಚನೆಯಲ್ಲಿ ಕನಿಷ್ಠ ವಯೋಮಿತಿಯು 18 ವರ್ಷಗಳು ಹಾಗೆಯೇ ಗರಿಷ್ಠ ವಯೋಮಿತಿಯು 40 ವರ್ಷದೊಳಗಿನ ಅಭ್ಯರ್ಥಿಗಳಾಗಿರಬೇಕು.
ವಯೋಮಿತಿ ಸಡಿಲಿಕೆ :-
ಭಾರತೀಯ ಅಂಚೆ ಇಲಾಖೆಯ (GDS Recruitment)ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯನ್ನು ಕೂಡ ನೀಡಲಾಗಿದೆ ಯಾವ ರೀತಿ ತಡಿಲಿಕ್ಕೆ ಇದೆ ಎನ್ನುವುದನ್ನು ಕೆಳಗೆ ಟೇಬಲ್ ರಚನೆಯ ಮೂಲಕ ವಿವರಿಸಲಾಗಿದೆ.
| ವರ್ಗ (Category) | ಸಡಿಲಿಕೆ (Years) |
|---|---|
| SC/ST | 5 ವಷಗಳ ಸಡಿಲಿಕೆ |
| OBC | 3 ವಷಗಳ ಸಡಿಲಿಕೆ |
| EWS | 0 ವಷಗಳ ಸಡಿಲಿಕೆ |
| PwBD | 10 ವಷಗಳ ಸಡಿಲಿಕೆ |
| PwBD + OBC | 13 ವಷಗಳ ಸಡಿಲಿಕೆ |
| PwBD + SC/ST | 15 ವಷಗಳ ಸಡಿಲಿಕೆ |
ವೇತನ / ಸ್ಟೈಫಂಡ್ :-
- ಸಂಪೂರ್ಣ ವೇತನ ಸ್ಥಿರ ಪ್ರಮಾಣದ ನಿರಂತರ ಭತ್ಯೆ ಆಗಿದ್ದು, ಕೆಲಸದ ಅವಧಿ ಹಾಗೂ ಶರತ್ತುಗಳಿಗೆ ಅನುಗುಣವಾಗಿ ಪಡೆಯುತ್ತಾರೆ.
- ವರ್ಷದಲ್ಲಿ TRCA ನಲ್ಲಿ ವರ್ಷಕ್ಕೊಮ್ಮೆ 3% ಹೆಚ್ಚಳ ಆಗುತ್ತದೆ ಹಾಗೆ ಈ ಹೆಚ್ಚಳವು ಭಾರತ ಸರ್ಕಾರ ಘೋಷಿಸಿದ ನಿಯಮಗಳಂತೆ ಇರುತ್ತದೆ.
- ಅರ್ಹತೆಯು GDS ಗಳು TRCA ಯ tuft (ತುಟ್ಟಿ) ಭತ್ಯೆಗೆ ಅರ್ಹರಾಗುತ್ತಾರೆ – ಇದು ಸರ್ಕಾರ ಕಾಲಕಾಲಕ್ಕೆ ಘೋಷಿಸುವ ಪ್ರಕಾರ ಲಭ್ಯವಾಗುತ್ತದೆ.
| ಶಾಖಾ ಪೋಸ್ಟ್ ಮಾಸ್ಟರ್ ಹುದ್ದೆಗಳಿಗೆ (BPM) : ರೂ. 12,000/- ರಿಂದ ರೂ. 29,380/- ಡಾಕ್ ಸೇವಕ ಹುದ್ದೆಗಳಿಗೆ : ರೂ. 10,000/- ರಿಂದ ರೂ. ತಿಂಗಳಿಗೆ 24,470/- ರೂ ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್ ಹುದ್ದೆಗಳಿಗೆ (ABPM) : ರೂ. 10,000/- ರಿಂದ ರೂ. 24,470/- |
ಇತರೆ ಭತ್ಯಗಳ ವಿವರ :
- ಸೇವಾ ವಿಸರ್ಜನಾ ಪ್ರಯೋಜನ ಯೋಜನೆ
- TRCA ಮೇಲಿನ ತುಟ್ಟಿ ಭತ್ಯೆ
- ಜಿಡಿಎಸ್ ಗ್ರಾಚ್ಯುಟಿ
ಆಯ್ಕೆ ಪ್ರಕ್ರಿಯೆ ನಡೆಯುವ ರೀತಿ :-
೧ . ಶಾರ್ಟ್ ಲಿಸ್ಟ್
- 10ನೇ ತರಗತಿಯ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ.
- ಅಂಕಗಳು CGPA ರೂಪದಲ್ಲಿ ಇದ್ದರೆ, CGPA × 9.5 ಮಾಡಿ ಅಂಕಗಳಿಗೆ ಪರಿವರ್ತಿಸಲಾಗುತ್ತದೆ.
- ಶ್ರೇಣಿಯ/ಅಂಕಗಳ tie ಇದ್ದರೆ, ವಯಸ್ಸು ಮತ್ತು ವರ್ಗ ಕ್ರಮ (ST ಟ್ರಾನ್ಸ್-ವುಮೆನ್ → ST ಮಹಿಳೆ → SC ಟ್ರಾನ್ಸ್-ವುಮೆನ್ → SC ಮಹಿಳೆ → OBC ಟ್ರಾನ್ಸ್-ವುಮೆನ್ → … → UR ಮಹಿಳೆ) ಆಧಾರವಾಗುತ್ತದೆ.
೨ . ಅಭ್ಯರ್ಥಿಗಳಿಗೆ ಮಾಹಿತಿ
- Shortlisted ಅಭ್ಯರ್ಥಿಗಳಿಗೆ SMS ಮತ್ತು ಇಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ.
೩ . ದಾಖಲೆ ಪರಿಶೀಲನೆ
ವಿಭಾಗೀಯ/ಘಟಕ ಮುಖ್ಯಸ್ಥರು ದಾಖಲೆಗಳ ಭೌತಿಕ ಪರಿಶೀಲನೆ ನಡೆಸುತ್ತಾರೆ.
೪ . ತಾತ್ಕಾಲಿಕ ನೇಮಕಾತಿ
- ಯಶಸ್ವಿ ಅಭ್ಯರ್ಥಿಗಳಿಗೆ ತಾತ್ಕಾಲಿಕ ನಿಶ್ಚಿತಾರ್ಥ ನೀಡಲಾಗುತ್ತದೆ.
- 30 ದಿನಗಳ ಒಳಗೆ ಪ್ರಾರಂಭಿಕ ಔಪಚಾರಿಕತೆಗಳನ್ನು ಪೂರ್ಣಗೊಳಿಸಬೇಕು, ಇದರಲ್ಲಿ 3 ದಿನಗಳ
೫ . ಅಂತಿಮ ನೇಮಕಾತಿ
ಜಾರಿ ಅಧಿಕಾರಿಗಳ ಪರಿಶೀಲನೆ ಮತ್ತು ಪೊಲೀಸ್ ವರದಿಗಳನ್ನು ಸ್ವೀಕರಿಸಿದ ಬಳಿಕ ಅಂತಿಮ ನಿಶ್ಚಿತಾರ್ಥ ನೀಡಲಾಗುತ್ತದೆ.
ಅರ್ಜಿ ಶುಲ್ಕ :-
- ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ಅಬ್ಯಾರಿಗಳಿಗೆ ಅಧಿಸೂಚನೆಯ ಪ್ರಕಾರ ₹100/- ಮಾತ್ರ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
- ಎಲ್ಲಾ ಮಹಿಳಾ ಅರ್ಜಿದಾರರು, SC/ST ಅರ್ಜಿದಾರರು, P w B D ಅರ್ಜಿದಾರರು ಮತ್ತು ಟ್ರಾನ್ಸ್ವುಮೆನ್ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ವಿನಾಯಿತಿ ಏರುತ್ತದೆ.
- ನೆಟ್ ಬ್ಯಾಂಕಿಂಗ್ಕ್ರೆ, ಡಿಟ್/ಡೆಬಿಟ್ ಕಾರ್ಡ್ಗಳು, ಅಥವಾ UPI ಮೂಲಕ ಆನ್ಲೈನ್ ಪಾವತಿ ಪ್ರಕ್ರಿಯೆ ಇರುತ್ತದೆ.
- ಒಮ್ಮೆ ಪಾವತಿ ಮಾಡಲಾದ ಶುಲ್ಕ ನಂತರ ಹಿಂತಿರುಗುವುದಿಲ್ಲ.
ಇತರೆ ಪ್ರಮುಖ ಲಿಂಕುಗಳು :-
| ಹಂತ (Step) | ಚಟುವಟಿಕೆ (Activity) | ದಿನಾಂಕಗಳು / ಟೈಮ್ ಲಿಮಿಟ್ |
|---|---|---|
| 1 | ಅಧಿಸೂಚನೆ ಪ್ರಕಟಣೆ | 28/01/2026 |
| 2 | ಆನ್ಲೈನ್ ಒಂದು-ಬಾರಿ ನೋಂದಣಿ ಪ್ರಾರಂಭ | 31/01/2026 – 14/02/2026 (17:00) |
| 3 | ಆನ್ಲೈನ್ ಅರ್ಜಿ ಸಲ್ಲಿಕೆ & ಶುಲ್ಕ ಪಾವತಿ | 02/02/2026 – 16/02/2026 (17:00) |
| 4 | ಅರ್ಜಿಯಲ್ಲಿ ತಿದ್ದುಪಡಿ / Edit Window | 18/02/2026 – 19/02/2026 (17:00) |
| 5 | Shortlist ಆದ ಬಳಿಕ ದಾಖಲೆಗಳ ಭೌತಿಕ ಪರಿಶೀಲನೆ | Shortlist ದಿನಾಂಕದಿಂದ 15 ದಿನಗಳೊಳಗೆ |
| 6 | ತಾತ್ಕಾಲಿಕ ನೇಮಕಾತಿ / ಪ್ರಾರಂಭಿಕ ಸೇವೆ & ತರಬೇತಿ | ತಾತ್ಕಾಲಿಕ ನಿಶ್ಚಿತಾರ್ಥದ ಪ್ರಸ್ತಾಪದಿಂದ 30 ದಿನಗಳೊಳಗೆ |
| 7 | ಅಂತಿಮ ನಿಶ್ಚಿತಾರ್ಥ ಪ್ರಕ್ರಿಯೆ ಪೂರ್ಣಗೊಳ್ಳುವುದು | 30/06/2026 |
ಭಾರತೀಯ ಅಂಚೆ ಇಲಾಖೆ ಹುದ್ದೆಗಳ ಪ್ರಮುಖ ಲಿಂಕ್ಗಳು :-
- ಅಧಿಕೃತ ವೆಬ್ಸೈಟ್ ಲಿಂಕ್ – ಇಲ್ಲಿ ಕ್ಲಿಕ್ ಮಾಡಿ
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ – ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ಅಧಿಸೂಚನೆ ಪಿಡಿಎಫ್ – ಇಲ್ಲಿ ಕ್ಲಿಕ್ ಮಾಡಿ
- ವೃತ್ತವಾರು ಪೋಸ್ಟ್ ಎಣಿಕೆ: – https://indiapost.gov.in/gdsonlineengagement
ಇತರೆ ಪ್ರಮುಖ ಸರ್ಕಾರಿ ಹುದ್ದೆಗಳ ಲಿಂಕುಗಳು :-
- ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲಿದೆ ಸರ್ಕಾರಿ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?
- ₹85,920/-ವೇತನ : ಬರೋಬ್ಬರಿ 2077 ಹುದ್ದೆಗಳ ಬರ್ತಿಗಾಗಿ ಅರ್ಜಿ
- ಶಿವಮೊಗ್ಗ ಜಿಲ್ಲಾ ಗೃಹರಕ್ಷಕ ದಳ ನೇಮಕಾತಿ 2026 – Shivamogga Home Guards Recruitment 2026
- 10ನೇ ತರಗತಿ ಓದಿದ್ರೆ ಸಾಕು! ಸರ್ಕಾರಿ ನೌಕರಿ ಬಯಸುವವರಿಗೆ ಇದು ಸುವರ್ಣಾವಕಾಶ!
- SBI : ₹85,920/-ವೇತನ : ಬರೋಬ್ಬರಿ 2077 ಹುದ್ದೆಗಳ ಬರ್ತಿಗಾಗಿ ಅರ್ಜಿ
| ಮಿತ್ರರಿಗೆ ನನ್ನ ಕಿವಿ ಮಾತು : “ಅಭ್ಯರ್ಥಿಗಳೇ ಇಂಡಿಯನ್ ಪೋಸ್ಟ್ ಆಫೀಸ್ ಅತ್ಯಂತ ದೊಡ್ಡ ಮಟ್ಟದ ನೇಮಕಾತಿ ಪ್ರಕ್ರಿಯೆ ಇದಾಗಿರುವ ಅಂತದ್ದು ಇಂತಹ ಅವಕಾಶ ನಿಮಗೆ ಮತ್ತೆ ಸಿಗದೆಯೂ ಇರಬಹುದು ಹಾಗಾಗಿ ಮೇಲಿನ ಹಂತಗಳನ್ನ ಓದಿಕೊಂಡು ಅಂತಿಮ ದಿನದೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಹಾಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ಇಂಡಿಯನ್ ಪೋಸ್ಟ್ ಆಫೀಸ್ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ”. |







