ನಿಮ್ಮ ಹಳ್ಳಿಯಲ್ಲಿ ಸಂಸ್ಕೃತಿಕ ಸಮುದಾಯ ಭವನಗಳು ಇಲ್ಲವೇ ? (Samudaya Bhavana Grant) ನಮ್ಮ ಗ್ರಾಮ 2026 ಬಂದರು ಇನ್ನು ಎಷ್ಟು ಹಿಂದುಳಿದಿದೆ ಎಂದು ಚಿಂತಿಸುತ್ತಿದ್ದೀರಾ ? ಇದೀಗ ನಿಮ್ಮ ಚಿಂತೆಗೆ ಸರ್ಕಾರ ಬ್ರೇಕ್ ಹಾಕಿದೆ. ಹೌದು ಕರ್ನಾಟಕ ಸರ್ಕಾರ SC/ST ಅಭ್ಯರ್ಥಿಗಳ ಸಾಂಸ್ಕೃತಿಕ , ಸಾಮಾಜಿಕ ಕ್ಷೇತ್ರದ ಬೆಳವಣಿಗೆಗಾಗಿ ಸಮುದಾಯ ಭವನ ಭವ್ಯ ಕಟ್ಟಡ ಕಟ್ಟಿಸಿ ಕೊಡಲು ಸರ್ಕಾರ ಆನ್ಲೈನ್ ಅರ್ಜಿಯನ್ನ ಪ್ರಾರಂಭಿಸಿದೆ.
Samudaya Bhavana Grant in Kannada
ಇದು ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ್ ರಾಮ್ ಹೆಸರಿನಲ್ಲಿ ಸಮುದಾಯ ಭವನ ಆಗಿರುವಂತದ್ದು. ಸರ್ಕಾರದ ಈ ಯೋಜನೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅರ್ಜಿದಾರರಿಗೆ “ಸುಮಾರು 20 ಲಕ್ಷದಿಂದ 4 ಕೋಟಿ ರೂ.ವರೆಗೆ” ಸಹಾಯಧನ ಸಿಗುತ್ತದೆ.
ಮುಖ್ಯವಾಗಿ SC/ST ಅಭ್ಯರ್ಥಿಗಳು ಗ್ರಾಮೀಣ, ನಗರ ಪ್ರದೇಶಗಳಲ್ಲಿ ಶುಭ ಸಮಾರಂಭ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನ ಮಾಡುವ ಮೂಲಕ ತಮ್ಮನ್ನ ತಾವು ಸಮಾಜದಲ್ಲಿ ಎಲ್ಲರಂತೆ ಸಮಾನವಾಗಿ ಮೂಡಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಹಾಗೆ ಈ ಸಮುದಾಯದ ಆರ್ಥಿಕ ಬೆಳವಣಿಗೆಗೆ ಈ ಯೋಜನೆ ಪೂರಕವಾಗಿದೆ.
ಈ ಯೋಜನೆಯನ್ನ ಸರ್ಕಾರ ಯಾವ ಕಾರಣಕ್ಕೆ ಜಾರಿಮಾಡಿದೆ ಮಾಡಿದೆ ?
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಸಾಮಾಜಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗಾಗಿ ಕರ್ನಾಟಕ ಸರ್ಕಾರವು ಈ ಒಂದು ಉತ್ತಮ ಯೋಜನೆಯನ್ನು ಜಾರಿಗೆ ತಂದಿದೆ ಎಂದರೆ ತಪ್ಪಾಗುವುದಿಲ್ಲ. ಗ್ರಾಮೀಣ ಭಾಗದಲ್ಲಿ ಮತ್ತು ನಗರ ಭಾಗದಲ್ಲಿ ಪ್ರತಿಯೊಬ್ಬ ವರ್ಗದವರು ಕೂಡ ಶುಭ ಸಮಾರಂಭಗಳು, ಇತರೆ ಸಭೆಗಳು ಹಾಗೆ ಶೈಕ್ಷಣಿಕ ಕಾರ್ಯಕ್ರಮಗಳನ್ನ ವಿಜೃಂಭಣೆಯಾಗಿ ನಡೆಸುತ್ತವೆ.
ಅದೇ ರೀತಿ ಈ ಎಸ್ಸಿ /ಎಸ್ಟಿ ವರ್ಗಗಳು ಇಂತಹ ಕಾರ್ಯಕ್ರಮಗಳನ್ನ ಒಂದು ಭವ್ಯವಾದ ಕಟ್ಟಡದಲ್ಲಿ ಮಾಡಬೇಕು ಎಂದು ಸರ್ಕಾರ ಈ ಯೋಜನೆಯನ್ನು ರೂಪುಗೊಳಿಸಿರುವಂತದ್ದು.
ಸಮುದಾಯ ಭವನ ನಿರ್ಮಾಣ ಯೋಜನೆ ಬಗ್ಗೆ ನಿಮ್ಮಗೆಷ್ಟು ಗೊತ್ತು ?
ಮುಖ್ಯವಾಗಿ ಈ ಸಮುದಾಯ ಭವನ (Samudaya Bhavana Grant) ನಿರ್ಮಾಣ ಯೋಜನೆಯ ಬಗ್ಗೆ ತಿಳಿಯುವುದಾದರೆ ಕರ್ನಾಟಕ ಸರ್ಕಾರದ ಸಮತ ಕಲ್ಯಾಣ ಇಲಾಖೆಯು ಈ ಒಂದು ಯೋಜನೆಯನ್ನ ಎಸ್ ಸಿ ಎಸ್ ಟಿ ವರ್ಗದ ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರವನ್ನು ಉತ್ತಮಗೊಳಿಸಲು ಯೋಚನೆಯನ್ನು ಸಿದ್ಧಪಡಿಸಿದೆ.
ಈ ಸಮುದಾಯ ಭವನ ನಿರ್ಮಾಣ ಯೋಜನೆಯು ಗ್ರಾಮೀಣ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದವರೆಗೆ ಡಾ. ಬಿ.ಆರ್. ಅಂಬೇಡ್ಕರ್ ಅಥವಾ ಡಾ. ಬಾಬು ಜಗಜೀವನ್ ರಾಮ್ ಇವರುಗಳ ಹೆಸರಿನಲ್ಲಿ ಹಿಂದುಳಿದ ವರ್ಗಕ್ಕೆ ಸಮುದಾಯ ಭವನ (Samudaya Bhavana Grant) ನಿರ್ಮಾಣಗೊಳ್ಳುತ್ತದೆ.
ಈ ಸಮುದಾಯ ಭವನಕ್ಕೆ ಸಿಗುವ ಸಹಾಯಧನ ಎಷ್ಟು ?
“ರಾಜ್ಯ ಸರ್ಕಾರದಿಂದ ಬರೋಬ್ಬರಿ 20 ಲಕ್ಷ ರೂ ಇಂದ 4 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಳ್ಳುತ್ತದೆ“.
| ಇಲ್ಲಿ ಗಮನಿಸಿ : ಈ ಯೋಜನೆ ಅಡಿಯಲ್ಲಿ ನಿಮ್ಮ ವರ್ಗಕ್ಕೆ ಸಮುದಾಯ ಭವನ ಕಟ್ಟಡ ನಿರ್ಮಾಣ ಮಾಡಿಕೊಳ್ಳಲು ಸರ್ಕಾರದಿಂದ ಮಂಜೂರು ಪತ್ರ ಸಿಕ್ಕಲ್ಲಿ ತಮ್ಮ ಸ್ವಂತ ಜಾಗ ಅಥವಾ ಸರ್ಕಾರಿ ಜಾಗದಲ್ಲಿ ಈ ಕಟ್ಟಡವನ್ನ ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದ್ದು, ಇದರಿಂದ ತೀರ ಬಡವರ್ಗದ ಜನಸಾಮಾನ್ಯರು ತಮ್ಮ ಮಕ್ಕಳ ಮದುವೆ, ಸಭೆ ಸಮಾರಂಭಗಳನ್ನ ತುಂಬಾ ಕಡಿಮೆ ಖರ್ಚು – ವೆಚ್ಚದಲ್ಲಿ ಮಾಡಲು ಹಾಗೆಯೇ ಉಚಿತವಾಗಿ ನಡೆಯಲು ಸಹಕಾರಿಯಾಗಿದೆ. |
ಮುಖ್ಯ ಉದ್ದೇಶ :-
ರಾಜ್ಯ ಸರ್ಕಾರವು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಖಾಸಗಿ ಕಲ್ಯಾಣ ಮಂದಿರಗಳಲ್ಲಿ ತಮ್ಮ ಮಕ್ಕಳ ವಿವಾಹ ಮಾಡಲು ಅಥವಾ ಇತರೆ ಕಾರ್ಯಕ್ರಮವನ್ನು ಮಾಡಲು ಬಾಡಿಗೆಯನ್ನು ಕೊಡಲು ಕಷ್ಟವಾಗುತ್ತದೆ.
ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರವು ಸ್ಥಳೀಯ ಮಟ್ಟದಲ್ಲಿ ಸಮುದಾಯ ಭವನವನ್ನ ನಿರ್ಮಿಸಿ ಕಡಿಮೆ ಖರ್ಚು – ವೆಚ್ಚದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಮಾಡಬೇಕು ಎನ್ನುವ ದೃಷ್ಟಿಯಿಂದ ಈ ಯೋಚನೆಯನ್ನು ಸಿದ್ಧಪಡಿಸಿರುವಂಥದ್ದು. ಇದೇ ರೀತಿ ಪ್ರಮುಖ ಉದ್ದೇಶಗಳನ್ನ ಈ ಕೆಳಗೆ ವಿವರವಾಗಿ ಕೊಡಲಾಗಿದೆ.
- ಎಸ್ಸಿ / ಎಸ್ಟಿ ವರ್ಗದ ಜನರು ತಮ್ಮ ಸಮುದಾಯಕ್ಕೆ ಸಂಬಂಧಪಟ್ಟ ಸಭೆಗಳನ್ನು, ಸಾಂಸ್ಕೃತಿಕ ಹಬ್ಬಗಳನ್ನ, ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನ ನಡೆಸಲು ಭವ್ಯವಾದ ಕಟ್ಟಡವನ್ನ ಒದಗಿಸುವ ಪ್ರಮುಖ ಗುರಿ ಹೊಂದಿದೆ.
- ಗ್ರಾಮೀಣವಾಗದ ಮಕ್ಕಳಿಗೆ ಮತ್ತು ಯುವಕ ಯುವತಿಯರಿಗೆ ತಂದೆ ಹೊತ್ತು ತಮ್ಮ ಓದು ಬರಹವನ್ನು ನಡೆಸಲು ಹಾಗೆಯೇ ಗ್ರಂಥಾಲಯವಾಗಿ ಬಳಸಲು ಮತ್ತು ತರಬೇತಿ ಶಿಬಿರವನ್ನು ನಡೆಸಲು ಸ್ಥಳಾವಕಾಶ ಮಾಡಿಕೊಡಬೇಕೆಂಬ ಪ್ರಮುಖ ಉದ್ದೇಶ ಸರ್ಕಾರ ಹೊಂದಿದೆ.
- ಸರ್ಕಾರಿ ಹೊಸ ಹೊಸದಾಗಿ ತರುವ ಕಾರ್ಯ ಕಾರ್ಯಕ್ರಮಗಳ ಮಾಹಿತಿಯನ್ನ ಇತರರಿಗೆ ತಿಳಿಸಲು ಅಥವಾ ಆರೋಗ್ಯ ಶಿಬಿರಗಳಂತಹ ಉತ್ತಮ ಸಾರ್ವಜನಿಕ ಸೇವೆಗಳನ್ನ ಕಲ್ಪಿಸಲು ಈ ಸಮುದಾಯ ಸಮುದಾಯಗಳನ್ನ ಬಳಸಿಕೊಳ್ಳಲಾಗುತ್ತದೆ.
- ಹಳ್ಳಿಗಳಲ್ಲಿನ ಜನರನ್ನ ಸಮುದಾಯಗಳ ಮೂಲಕ ಒಂದು ಕಡೆ ಸೇರಿ ಉತ್ತಮ ಸರ್ಕಾರಿ ಕೆಲಸವನ್ನ ಚರ್ಚಿಸಲು ಮತ್ತು ಜನರನ್ನ ಸಂಘಟಿಸಲು ಈ ಒಂದು ಕೇಂದ್ರವು ತನ್ನದೇ ಆದ ಪಾತ್ರವನ್ನ ವಹಿಸುತ್ತದೆ.
- ಆರ್ಥಿಕವಾಗಿ ಹಿಂದುಳಿದ ಮತ್ತು ಎಸ್ಸಿ ಎಸ್ಟಿ ವರ್ಗದ ಜನಸಾಮಾನ್ಯರು ತಮ್ಮ ಕುಟುಂಬದಲ್ಲಿ ನಡೆಯುವ ಮದುವೆ ,ನಾಮಕರಣ ಹೀಗೆ ಇತರ ಕಾರ್ಯಕ್ರಮಗಳಿಗೆ ಹಣವನ್ನ ವೆಚ್ಚ ಮಾಡುವುದು ತಪ್ಪುತ್ತದೆ. ಯಾಕೆಂದರೆ ಉಚಿತವಾಗಿ ಈ ಸಮುದಾಯದಲ್ಲಿ ಕಾರ್ಯಕ್ರಮವನ್ನು ತಮ್ಮ ಊರಿನಲ್ಲಿಯೇ ಮಾಡಬಹುದು.
ಸಮುದಾಯ ಭವನ (Samudaya Bhavana Grant)ನಿರ್ಮಿಸಲು ಪ್ರದೇಶವಾರು ಗರಿಷ್ಠ ಅನುದಾನದ ಎಷ್ಟು ಗೊತ್ತ ?
ರಾಜ್ಯ ಸರ್ಕಾರವು ಸಮುದಾಯ ಭವನವನ್ನು ನಿರ್ಮಾಣ ಮಾಡಲು ಅಂದರೆ ಹಳ್ಳಿಯಲ್ಲಿ, ತಾಲ್ಲೂಕೋ ಅಥವಾ ಜಿಲ್ಲೆಯೋ ಕಟ್ಟಿಟ್ಟಿರೋ ಅಲ್ಲಿನ ಗರಿಷ್ಠ ಸಹಾಯಧನದ ವಿವರಗಳು ಈ ಕೆಳಗೆ ಪ್ರತಿಯೊಬ್ಬರೂ ಕೂಡ ಹಂತ ಹಂತವಾಗಿ ತಿಳಿಯಬಹುದು. ಒಂದೊಂದು ಪ್ರದೇಶಕ್ಕೆ ಒನೆದು ರೀತಿಯಲ್ಲಿ ಸಹಾಯಧನವನ್ನ ಸರ್ಕಾರ ಮಂಜೂರು ಮಾಡುತ್ತದೆ.
- ಅಭ್ಯರ್ಥಿಗಳು ಗ್ರಾಮೀಣ ಮಟ್ಟದಲ್ಲಿ ಸಣ್ಣ ದಾಗಿ ಸಮುದಾಯ ಭವನವನ್ನು ನಿರ್ಮಾಣ ಮಾಡುವುದಕ್ಕೆ ಸರ್ಕಾರದಿಂದ ಗರಿಷ್ಠ 20 ಲಕ್ಷ ಸಹಾಯಧನ ಲಭ್ಯವಿರುತ್ತದೆ.
- ಹೋಬಳಿ ಮಟ್ಟದಲ್ಲಿ ನೀವೇನಾದರೂ ಸಮುದಾಯ ಭವನವನ್ನ ನಿರ್ಮಾಣ ಮಾಡಬೇಕೆಂದು ಯೋಚಿಸಿದರೆ 75 ಲಕ್ಷ ಸರ್ಕಾರದಿಂದ ಸಹಾಯಧನವನ್ನ ಪಡೆಯಬಹುದು.
- ತಾಲೂಕು ಮಟ್ಟದಲ್ಲಿ ನೀವೇನಾದರೂ ಸಮುದಾಯ ಭವನವನ್ನ ನಿರ್ಮಾಣ ಮಾಡಬೇಕೆಂದು ಮುಂದಾದರೆ 2 ಕೋಟಿ ವರೆಗೆ ಸಹಾಯಧನವನ್ನ ಪಡೆಯಬಹುದು.
- ಜಿಲ್ಲಾ ಮಟ್ಟದಲ್ಲಿ ನೀವು ಸಮುದಾಯ ಭವನವನ್ನ ಕಟ್ಟಬೇಕೆಂದು ಚಿಂತನೆ ಮಾಡಿದರೆ ಅಂದರೆ ಅತ್ಯಂತ ದೊಡ್ಡದಾಗಿ ಮತ್ತು ಸುಂದರವಾಗಿ ಗರಿಷ್ಠ 4 ಕೋಟಿ ವೆಚ್ಚದೊಂದಿಗೆ ಈ ಭವ್ಯವಾದ ಕಟ್ಟಡವನ್ನ ನಿರ್ಮಾಣ ಮಾಡಬಹುದು.
- ರಾಜ್ಯಮಟ್ಟದಲ್ಲಿ ನೀವು ಸಮುದಾಯ ಭವನವನ್ನ ನಿರ್ಮಾಣ ಮಾಡಲು ಮುಂದಾದರೆ 5 ಕೋಟಿಗಿಂತ ಹೆಚ್ಚು ಅನುದಾನವನ್ನ ಸರ್ಕಾರ ನಿಮಗೆ ಕೊಡುತ್ತದೆ. ಯಾಕೆಂದರೆ ರಾಜ್ಯ ಮಟ್ಟದಲ್ಲಿ ನೀವು ಅತ್ಯಂತ ದೊಡ್ಡ ಮತ್ತು ಸುಂದರವಾದ ಸಮುದಾಯ ಮಂದಿರವನ್ನ ನಿರ್ಮಾಣ ಮಾಡಬಹುದು.
ಈ ದಾಖಲೆಗಳು ನಿಮ್ಮಲ್ಲಿ ಇದ್ದಾರೆ ಮಾತ್ರ ನೀವು ಅರ್ಜಿ ಸಲ್ಲಿಸಬಹುದು!
- ಜಾಗದ ಪಹಣಿ, ಹಕ್ಕುಪತ್ರ ಅಥವಾ ಕ್ರಯಾ ಪತ್ರ
- ಸಂಘ ಸಂಸ್ಥೆ ನೊಂದಾಯಿತವಾಗಿರಬೇಕು
- ಸಮುದಾಯ ಭವನ ಕಟ್ಟಲು ಸಂಘದ ಸದಸ್ಯರು ಒಪ್ಪಿರುವ ಪತ್ರ
- ಕಟ್ಟಡದ ನಕ್ಷೆಯ ಮತ್ತು ಅಂದಾಜು ಖರ್ಚಿನ ಪಟ್ಟಿ “ಇಂಜಿನಿಯರ್ ಸಹಿ ಇರಬೇಕು”
- ಸಂಘದ ಪದಾಧಿಕಾರಿಗಳ ಜಾತಿ ಗಿಳಿಕರಣ ಪತ್ರ
- ಸ್ಥಳೀಯ ಶಾಸಕರ ಶಿಫಾರಸು ಪತ್ರ
ನೀವು ಈ ಎಲ್ಲ ದಾಖಲೆಗಳೊಂದಿಗೆ ನಿಮ್ಮ ತಾಲೂಕಿನ ಸಮಾಜ ಕಲ್ಯಾಣ ಕಚೇರಿಯನ್ನ ಸಂಪರ್ಕಿಸಬಹುದು.
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಲ್ಲಿ ಇರಬೇಕಾದ ಅರ್ಹತೆಗಳು ಮತ್ತು ನಿಬಂಧನೆಗಳು :-
ರಾಜ್ಯ ಸರ್ಕಾರ ಸಮುದಾಯ ಭವನವನ್ನು ನಿರ್ಮಾಣ ಮಾಡಲು ಕೊಡುವ ಅನುದಾನವನ್ನು ನೀವು ಪಡೆಯಲು ಈ ಕೆಳಗಿನ ಅರ್ಹತೆಗಳು ಮತ್ತು ನಿಬಂಧನೆಗಳಿಗೆ ಒಳಪಟ್ಟಿರಬೇಕು.
| ಮುಖ್ಯ ವಿಷಯ :“ಈ ಯೋಜನೆಯ ಲಾಭ ಪಡೆಯುವ ಅಭ್ಯರ್ಥಿಗಳು ಕೇವಲ ಪರಿಶಿಷ್ಟ ಜಾತಿ ಮತ್ತು ಪಂಗಡ (SC/ST) ವರ್ಗದವರಾಗಿರುತ್ತಾರೆ ಇತರೆ. ಎಲ್ಲ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಈ ಯೋಜನೆ ಅಡಿಯಲ್ಲಿ ಸಾಧ್ಯವಾಗುವುದಿಲ್ಲ”. ಆದರೆ ಬೇರೆ ಯೋಜನೆ ಅಡಿಯಲ್ಲಿ ಬೇರೆ ವರ್ಗದವರು ಅರ್ಜಿಯನ್ನ ಸಲ್ಲಿಸಬಹುದು. ಹೆಚ್ಚಿನ ಆಧ್ಯತೆ ಸರ್ಕಾರ SC/ST ವರ್ಗಕ್ಕೆ ಕೊಟ್ಟಿದೆ. |
- ಮೊದಲನೆಯದಾಗಿ ನಿಮ್ಮ ಸಮುದಾಯದ ಹೆಸರಿನಲ್ಲಿ ಒಂದು ನೋಂದಣಿ ಸಂಘ ಇರಬೇಕು.
- ಸಮುದಾಯ ಭವನ ಕಟ್ಟಡವನ್ನ ನಿರ್ಮಾಣ ಮಾಡಲು ಒಂದು ಸಂಘದ ಹೆಸರಿನಲ್ಲಿ ಜಾಗ ಇರಬೇಕು. ಹಾಗೆ ಆ ಜಾಗಕ್ಕೆ ಸಂಬಂಧಿಸಿದ ಪಹಣಿ ಮತ್ತು ಖಾತೆ ಸಂಘದ ಹೆಸರಿಗೆ ಆಗಿರಬೇಕು.
- ಗ್ರಾಮೀಣ ಭಾಗದಲ್ಲಾದರೆ ಜಾಗದ ಅಳತೆಯು ಕನಿಷ್ಠ 5 ರಿಂದ 10 ಗುಂಟೆ ಜಾಗವಿದ್ದರೆ ಅನುಕೂಲವಾಗುತ್ತದೆ.
- ಸಮುದಾಯದ ನಿರ್ಮಾಣಕ್ಕೆ ಒಬ್ಬ ಇಂಜಿನಿಯರಿಂಗ್ ಮೂಲಕ ಕಟ್ಟಡದ ಪ್ಲಾನಿಂಗ್ ಮತ್ತು ಅದಕ್ಕೆ ಎಷ್ಟು ಖರ್ಚಾಗುತ್ತದೆ ಎಂಬ ಅಂದಾಜು ಪಟ್ಟಿ ನಿಮ್ಮಲ್ಲಿ ಸಿದ್ಧವಿರಬೇಕು.
- ನಿಮ್ಮ ಗ್ರಾಮ ಪಂಚಾಯತಿಯಿಂದ ಕಟ್ಟಡ ಮಾಡಲು ಅನುಮತಿ ಪ್ರಮಾಣ ಪತ್ರ (NOC) ಕಡ್ಡಾಯವಾಗಿರುತ್ತದೆ.
- ಸಂಘದ ಹೆಸರಿನಲ್ಲಿ ಒಂದು ಬ್ಯಾಂಕ್ ಖಾತೆ ಇರಬೇಕು. ಅದೇ ಖಾತೆಗೆ ನೇರವಾಗಿ ಸರ್ಕಾರದಿಂದ ಹಣ ವರ್ಗಾವಣೆಯಾಗುತ್ತದೆ.
ನೀವು ಅರ್ಜಿ ಸಲ್ಲಿಸಲು ಬಯಸುವಿರಾ ? ಹಾಗಿದ್ದಲ್ಲಿ ಕೆಳಗಿನ ಹಂತ ಅನುಸರಿಗೆ
ನೀವಿನಾದರೂ ಮೇಲೆ ಕೊಟ್ಟಿಯಿರುವ ಮಾಹಿತಿಯನ್ನ ಓದಿಕೊಂಡು ನಾನು ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು ಎಂದು ಬಯಸಿದರೆ ಆಫ್ ಲೈನ್ ಮತ್ತು ಆನ್ಲೈನ್ ಎರೆಡು ವಿಭಾಗದಲ್ಲೂ ಅರ್ಜಿಯನ್ನ ಸಲ್ಲಿಸಬುದು.
ಮೊದಲು ನೀವು ಆಫ್ ಲೈನ್ ಅರ್ಜಿ ಸಲ್ಲಿಸುವ ವಿಧಾನವನ್ನ ಈ ಕೆಳಗೆ ತಿಳಿಯಿರಿ.
- ನಿಮ್ಮ ಹತ್ತಿರದ ತಾಲೂಕು ಅಥವಾ ಜಿಲ್ಲಾಮಟ್ಟದ ಸಮಾಜ ಕಲ್ಯಾಣ ಇಲಾಖೆಗೆ ಭೇಟಿ ನೀಡಿ. ಈ ಯೋಜನೆಗೆ ಯಾವ ಅರ್ಜಿಯನ್ನು ಪಡೆಯಬೇಕು ಎಂದು ಮೂಲಕ ಕಚೇರಿಯ ಸಿಬ್ಬಂದಿಗಳ ಹತ್ತಿರ ಕೇಳಿ ಅರ್ಜಿ ನಮೂನೆ ಪಡೆದುಕೊಳ್ಳಿ.
- ಹೇಳಲಾದ ಅಗತ್ಯ ದಾಖಲೆಗಳನ್ನು ಸರಿಯಾಗಿ ಬರ್ತಿ ಮಾಡಿ. ಅದರ ಜೊತೆ ಸಂಸ್ಥೆಯ ನೋಂದಣಿ ಪತ್ರ, ಭವನದ ಕಟ್ಟಡದ ನೀಲಿನಕ್ಷೆ, ಹಾಗೆಯೇ ಜಮೀನು ಪಹಣಿ, ಇನ್ನಿತರ ಅಗತ್ಯ ದಾಖಲೆಗಳನ್ನು ಲಗತ್ತಿಸಿ. ಅದೇ ಕಚೇರಿಯಲ್ಲಿ ಸಲ್ಲಿಸಬೇಕು.
- ನೀವು ಅರ್ಜಿಯನ್ನು ಸಲ್ಲಿಸಿದ ಬಳಿಕ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳು ಸಮುದಾಯ ಭವನ ನಿರ್ಮಿಸಲು ನಿರ್ದಿಷ್ಟ ಪಡಿಸಿದ ಜಾಗಕ್ಕೆ ಬಂದು ಪರಿಶೀಲನೆ ಮಾಡುತ್ತಾರೆ. ಹೇಗಂದರೆ ಜಾಗದ ಲಭ್ಯತೆ ಮತ್ತು ಅರ್ಹತೆಯನ್ನು ನೋಡಿ ವರದಿ ಸಿದ್ಧಪಡಿಸುತ್ತಾರೆ.
- ಅಧಿಕಾರಿಗಳು ನೀಡಿದ ಸ್ಥಳ ಪರಿಶೀಲನ ವರದಿಯ ಆಧಾರದ ಮೇಲೆ ನಿಮ್ಮ ಪ್ರಸ್ತಾವನೆಯನ್ನು ಅಂತಿಮ ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸುತ್ತಾರೆ.
- ಸರ್ಕಾರದ ಮಟ್ಟದಲ್ಲಿ ಅನುಮೋದನೆಗೊಂಡ ನಂತರ ಕಟ್ಟಡ ನಿರ್ಮಾಣಕ್ಕೆ ಹಣವನ್ನ ಒಂದೇ ಸರಿ ಬ್ಯಾಂಕ್ ಖಾತೆಗೆ ಜಮಾ ಮಾಡದೇ, ಕಟ್ಟಡದ ಕೆಲಸವೂ ನಡೆದಂತೆ ಹಂತವಾಗಿ ಹಣವನ್ನ ಸರ್ಕಾರವೇ ಬಿಡುಗಡೆ ಮಾಡುತ್ತಾ ಹೋಗುತ್ತದೆ.
- ನೀವು ಯಾವ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ಕೊಟ್ಟಿರುತ್ತಾರೆ ಅದೇ ಬ್ಯಾಂಕ್ ಅಕೌಂಟ್ ಗೆ ಹಣ ನೇರವಾಗಿ ವರ್ಗಾವಣೆ ಆಗುತ್ತದೆ.
ಆತ್ಮೀಯರೇ ನೀವು ಆನ್ ಲೈನ್ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ ಈ ಕೆಳಗೆ ಕೊಡಲಾದ ಹಂತವನ್ನು ಅನುಸರಿಸಿ. ಇಲ್ಲಿ ನೀವು ಸರ್ಕಾರದ ಅಧಿಕೃತ ವೆಬ್ ಸೈಟ್ ಮೂಲಕ ಸರಳವಾಗಿ ಅರ್ಜಿಯನ್ನು ಸಲ್ಲಿಸಬಹುದು.
- ಅಭ್ಯರ್ಥಿಗಳು ಸೇವಾ ಸಿಂಧೂ ಪೋರ್ಟಲ್ ಮೂಲಕ ಸಮಾಜ ಕಲ್ಯಾಣ ಇಲಾಖೆಯ ಸೇವೆಯನ್ನ ಆಯ್ಕೆ ಮಾಡಿ ಅರ್ಜಿ ಸಲ್ಲಿಸಬಹುದು.
- ಇದು ಕರ್ನಾಟಕ ಸರ್ಕಾರದ ಯೋಜನೆಗಳಿಗೊಂದೆ ಇರುವ ಸುವಿಧಾ ಪೋರ್ಟಲ್ ಆಗಿದೆ.
- ಇನ್ನು ಸರಳವಾಗಿ ನೀವು ಅರ್ಜಿ ಸಲ್ಲಿಸಲು ಬಯಸಿದರೆ, ನಿಮ್ಮ ಹತ್ತಿರದ ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅವರು ಕೇಳುವ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿ.
ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ :
| ಸಹಾಯವಾಣಿ : 94823 00400 ಕರೆ ಮಾಡಿ ನಿಮ್ಮ ಹತ್ತಿರದ ತಾಲ್ಲೂಕು/ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯನ್ನು ಸಂಪರ್ಕಿಸಿ. |
ಅಂತಿಮ ಮಾತು :
ಈ ಯೋಜನೆ ಅಡಿಯಲ್ಲಿ ಕೆಲವೇ ಕೆಲವು ಜನ ಮಾತ್ರ ಲಾಭವನ್ನು ಪಡೆಯುತ್ತಿದ್ದಾರೆ. ಕರ್ನಾಟಕ ದಂತ ರಾಜ್ಯದಲ್ಲಿ ಇನ್ನೂ ಅನೇಕ ಜನರಿಗೆ ಇಂಥ ಯೋಜನೆ ನಮ್ಮ ಕರ್ನಾಟಕ ಸರ್ಕಾರ ಅದರಲ್ಲಿಯೂ ಪರಿಶುದ್ಧ ಜಾತಿ ಮತ್ತು ಪರಿಶುದ್ಧ ಪಂಗಡಗಳಿಗೆ ಸಿದ್ಧಪಡಿಸಿರುವಂತಹ ಯೋಜನೆ ಇದಾಗಿದೆ ಎಂಬುದರ ಸಣ್ಣ ಅರಿವು ಕೂಡ ಇಲ್ಲ. ಹಾಗಾಗಿ ನಮ್ಮ ವೆಬ್ಸೈಟ್ ಮೂಲಕ ಅವರಿಗೆ ಈ ಯೋಜನೆ ಬಗ್ಗೆ ಅರಿವು ಮೂಡಿಸಲು ಮತ್ತು 2026 ರ ಫೆಬ್ರವರಿಯಲ್ಲಿ ಅಭ್ಯರ್ಥಿಗಳು ಅವರಿಗೆ ಅನುಕೂಲ ವಾಗುವ ರೀತಿಯಲ್ಲಿ ಸಂಪೂರ್ಣವಾದ ಮಾಹಿತಿಯನ್ನ ತಿಳಿದು ಅರ್ಜಿ ಸಲ್ಲಿಸಿ.







