ಶಿವಮೊಗ್ಗ ಜಿಲ್ಲೆಯಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಇಲ್ಲಿದೆ ಗೋಲ್ಡನ್ ಚಾನ್ಸ್! ಶಿವಮೊಗ್ಗ ಗೃಹರಕ್ಷಕದಳ ನೇಮಕಾತಿ. 2026 ವಿವಿಧ ಗೃಹರಕ್ಷಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಸ್ವಯಂಸೇವಕ ಸಂಸ್ಥೆಯಲ್ಲಿ ಉದ್ಯೋಗವನ್ನು ಮಾಡಲು ಬಯಸುವವರಿಗೆ ಇದೊಂದು ಸುವರ್ಣಾವಕಾಶ. ಇಂತಹ ಅತ್ಯುತ್ತಮ ಅವಕಾಶವನ್ನ ತಪ್ಪಿಸಿಕೊಳ್ಳದೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಇಂದೇ ಕೆಳಗೆ ತಿಳಿಸಲಾದ ಸ್ಥಳಕ್ಕೆ ಹೋಗಿ ಅರ್ಜಿಯನ್ನು ಸಲ್ಲಿಸಿ.
Shivamogga Home Guards Recruitment 2026
ಶಿವಮೊಗ್ಗ ಜಿಲ್ಲೆಯ ವಿವಿಧ ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅನುಗುಣವಾಗಿ ಅರ್ಹ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು. ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು 10 ನೇ ತರಗತಿಯಲ್ಲಿ ಉತ್ತೀರ್ಣರಾದರೆ ಸಾಕಾಗುತ್ತದೆ. ಅರ್ಹ ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ಹುದ್ದೆಯ ಕುರಿತು ಸಂಪೂರ್ಣ ಮಾಹಿತಿ ಬೇಕಿದ್ದರೆ, ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಇನ್ನಷ್ಟು ಹೊಚ್ಚ ಹೊಸ ಉದ್ಯೋಗಗಳ ಬಗ್ಗೆ ಮಾಹಿತಿಗಾಗಿ ನಮ್ಮ ಉದ್ಯೋಗ ಸಲಹೆ ವೆಬ್ಸೈಟ್ ಅನ್ನು ಫಾಲೋ ಮಾಡಿ.
ಹುದ್ದೆಯ ಬಗ್ಗೆ ಕಿರುಪರಿಚಯ :
1. ನೇಮಕಾತಿ ಸಂಸ್ಥೆಯ ಹೆಸರು : ಗೃಹರಕ್ಷಕ ದಳ ಶಿವಮೊಗ್ಗ ಜಿಲ್ಲೆ (ಕರ್ನಾಟಕ ಗೌರ್ಮೆಂಟ್)
2. ಹುದ್ದೆಯ ಹೆಸರು : ಗೃಹರಕ್ಷಕರು
3. ಯಾರು ಅರ್ಜಿ ಸಲ್ಲಿಸಬಹುದು : ಮಹಿಳೆ ಮತ್ತು ಪುರುಷ
4. ಒಟ್ಟು ಹುದ್ದೆಗಳು : ಜಿಲ್ಲೆಯ ವಿವಿಧ ಘಟಕಗಳಲ್ಲಿ ಖಾಲಿ ಇರುವ ಅಗತ್ಯಕ್ಕೆ ಅನುಗುಣವಾಗಿ ಹುದ್ದೆಗಳ ಸಂಖ್ಯೆಯನ್ನು ನಿಗದಿಪಡಿಸಲಾಗುತ್ತದೆ
5. ಕೆಲಸ ನಿರ್ವಹಿಸುವ ಸ್ಥಳ : ಶಿವಮೊಗ್ಗ ಜಿಲ್ಲೆಯ ವಿವಿಧ ಘಟಕ ಮತ್ತು ಉಪ ಘಟಕಗಳು
6. ಅರ್ಜಿ ಸಲ್ಲಿಸುವ ವಿಧಾನ : ಆಫ್‌ಲೈನ್, ನೇರವಾಗಿ ಕಛೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕಾಗುತ್ತದೆ.
7. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03-02-2026
ಒಟ್ಟು ಹುದ್ದೆಗಳ ವಿವರ :
ಉದ್ಯೋಗ ಪ್ರಿಯರೇ ಈ ಹುದ್ದೆಗಳ ನೇಮಕಾತಿಯು ಶಿವಮೊಗ್ಗ ಜಿಲ್ಲೆಯ ಸ್ಥಳೀಯ ನಿವಾಸಿಗಳಿಗಾಗಿ ಮಾತ್ರ ಇರುವಂತದ್ದು, ಹಾಗೆಯೇ ವಿವಿಧ ಘಟಕಗಳಲ್ಲಿ ಪುರುಷರು ಮತ್ತು ಮಹಿಳಾ ಅಭ್ಯರ್ಥಿಗಳನ್ನ ಗೃಹರಕ್ಷಕ ಸದಸ್ಯರನ್ನಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ವಿದ್ಯಾರ್ಹತೆ :
“ಒಟ್ಟು ಹುದ್ದೆಗಳ ಸಂಖ್ಯೆಯನ್ನ ನಿರ್ದಿಷ್ಟವಾಗಿ ಇನ್ನಷ್ಟು ಅಂತ ನಿಗದಿಪಡಿಸಿಲ್ಲ, ಜಿಲ್ಲೆಯ ವಿವಿಧ ಘಟಕಗಳಲ್ಲಿ ಖಾಲಿ ಇರುವ ಅಗತ್ಯಕ್ಕೆ ಅನುಕೂಲವಾಗಿ ಅಭ್ಯರ್ಥಿಗಳನ್ನ ಆಯ್ಕೆ ಮಾಡಿಕೊಳ್ಳಲಾಗುತ್ತದೆ”.
ಶಿವಮೊಗ್ಗ ಜಿಲ್ಲೆಯ ನಿವಾಸಿಗಳಿಗೆ ಅಂದರೆ ವಿಶೇಷವಾಗಿ ಸಮಾಜ ಸೇವೆಯಲ್ಲಿ ಆಸಕ್ತಿ ಹೊಂದಿರುವ ಪುರುಷ ಮಹಿಳೆಯರಿಗೆ ಇದೊಂದು ಒಳ್ಳೆಯ ಅವಕಾಶ. ಶಿವಮೊಗ್ಗ ಜಿಲ್ಲೆಯ ನಿಷ್ಕಾಮ ಸೇವೆ ಎಂಬ ಧ್ಯೇಯ ವಾಕ್ಯದೊಂದಿಗೆ ನಾಡಿನ ರಕ್ಷಣೆಗೆ ಕೈಜೋಡಿಸಲು ಬಯಸುವವರಿಗೆ ಶಿವಮೊಗ್ಗ ಜಿಲ್ಲೆಯ ವಿವಿಧ ಘಟಕಗಳಲ್ಲಿ ಗೃಹರಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಅಭ್ಯರ್ಥಿಗಳು ಆಫ್ಲೈನ್ ಮೂಲಕ ಇಂದೇ ಅರ್ಜಿ ಸಲ್ಲಿಸುವುದು ಉತ್ತಮ.
ಅಧಿಕೃತ ಅಧಿಸೂಚನೆಯ ಪ್ರಕಾರ ಈ ಕೆಳಗೆ ನೀವು ವಿದ್ಯಾರ್ಹತೆಯನ್ನ ನೋಡಬಹುದು.
- ಮಾನ್ಯತೆ ಪಡೆದ ಮಂಡಳಿಯಲ್ಲಿ 10ನೇ ತರಗತಿ ಅಥವಾ ಅದಕ್ಕೆ ಸಮನಾದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
- ಕೇವಲ ಉತ್ತೀರ್ಣರಾದ ಅಭ್ಯರ್ಥಿಗಳು ಮಾತ್ರವಲ್ಲದೆ ಯಾವುದೇ ಪದವಿ, ಐಟಿಐ, ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸುವ ಅವಕಾಶ ಇದೆ. ಆದರೆ ನೀವು ಕನಿಷ್ಠ 10ನೇ ತರಗತಿಯಾದರು ಉತ್ತೀರ್ಣರಾಗಿರಬೇಕೆನ್ನುವುದು ಕಡ್ಡಾಯವಾಗಿರುತ್ತದೆ.
ವೇತನ ಶ್ರೇಣಿ :
ಶಿವಮೊಗ್ಗ ಗೃಹರಕ್ಷಕರ ದಳ ಸೇವೆಯು ಒಂದು ಸ್ವಯಂ ಪ್ರೇರಿತ ಕೆಲಸವಾಗಿದ್ದು, ಇದನ್ನು ಪೂರ್ಣ ಪ್ರಮಾಣದ ಕಾಯಂ ಉದ್ಯೋಗ ಎಂದು ನಿರ್ದಿಷ್ಟ ಪಡಿಸಲಾಗುವುದಿಲ್ಲ. ಅಭ್ಯರ್ಥಿಗಳು ತಮ್ಮ ಕೆಲಸಕ್ಕೆ ಹಾಜರಾದ ದಿನಾಂಕಗಳಲ್ಲಿ ಸರ್ಕಾರವು ನಿಗದಿಪಡಿಸಿದ ಗೌರವಧನ ಅಥವಾ ದಿನನಿತ್ಯದ ಸಂಬಳ ನೀಡಲಾಗುತ್ತದೆ.
ಇಂದಿನ ಕರ್ನಾಟಕ ಸರ್ಕಾರದ ನಿಯಮಗಳ ಪ್ರಕಾರ ಈ ಉದ್ಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳಿಗೆ ನೀಡಲಾಗುವ ನಿಗದಿತ ಬಗ್ಗೆಗಳು ಅನ್ವಯವಾಗುತ್ತವೆ ಇವುಗಳೊಂದಿಗೆ ಯೂನಿಫಾರಂ ಮತ್ತು ಇತರ ಸೌಕರ್ಯಗಳನ್ನು ಇಲಾಖೆಯ ವತಿಯಿಂದ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ.
ವಯೋಮಿತಿ :
ಸರ್ಕಾರದ ಯಾವುದೇ ಹುದ್ದೆಯಾದರೂ ಅಧಿಕೃತ ಅಧಿಸೂಚನೆಯಲ್ಲಿ ವಯೋಮಿತಿಯನ್ನು ನಿಗದಿಪಡಿಸುವುದು ಪ್ರತಿಯೊಬ್ಬರು ಗವಿಸಿದ್ದೀರಿ, ಹಾಗೆಯೇ ಈ ಹುದ್ದೆಗಳಿಗೂ ಸಹ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
- ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 19 ವರ್ಷ ಪೂರೈಸಿರಬೇಕು.
- ಹಾಗೆಯೇ ಗರಿಷ್ಠ ವಯಸ್ಸಿನ ಮಿತಿಯು 45 ವರ್ಷಕ್ಕಿಂತ ಕಡಿಮೆ ಇರಬೇಕು.
ವಯೋಮಿತಿ ಸಡಿಲಿಕೆ :
- ಆತ್ಮೀಯರೇ,,, ಅಧಿಸೂಚನೆಯಲ್ಲಿ ವಿಶೇಷ ವರ್ಗಗಳಿಗೆ ಪ್ರತ್ಯೇಕವಾಗಿ ಯಾವುದೇ ರೀತಿಯ ವಯೋಮಿತಿ ಸಡಿಲಿಕೆಯನ್ನ ನೀಡಿರುವುದಿಲ್ಲ, ಪ್ರತಿಯೊಬ್ಬ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 19 ವರ್ಷದಿಂದ 45 ವರ್ಷದ ಒಳಗಿನ ಎಲ್ಲಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುಕ್ತ ಅವಕಾಶವನ್ನ ಮಾಡಿಕೊಟ್ಟಿದೆ.
ಅರ್ಜಿ ಶುಲ್ಕ ವಿವರ :
- ಈ ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ ಮುಗಿಸಿಕೊಂಡ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಬಯಸಿದರೆ ಒಂದು ಖುಷಿಪಡುವ ವಿಷಯವನ್ನು ನೀವಿಲ್ಲಿ ಗಮನಿಸಬಹುದು. ಏನೆಂದರೆ ಯಾವುದೇ ಅಭ್ಯರ್ಥಿಗೂ ಕೂಡ ಅರ್ಜಿ ಶುಲ್ಕ ಇರುವುದಿಲ್ಲ.
- ಉಚಿತವಾಗಿ ಅರ್ಜಿಯನ್ನು ಹಾಕಿಕೊಳ್ಳಬಹುದು.
“ಅಭ್ಯರ್ಥಿಗಳು ಕಚೇರಿಗೆ ಭೇಟಿ ನೀಡಿ ಉಚಿತವಾಗಿ ಅರ್ಜಿ ನಮೂನೆಯನ್ನು ಪಡೆದು ಸರಿಯಾಗಿ ಬರ್ತಿ ಮಾಡಿ ಅರ್ಜಿ ಸಲ್ಲಿಸಿ “.
ಇಲ್ಲಿ ಗಮನಿಸಿ : ಈ ಮೇಲಿನ ಎಲ್ಲಾ ಹಂತಗಳನ್ನು ಓದಿಕೊಂಡ ನಂತರ ನೀವು ನಾನು ಅರ್ಜಿ ಸಲ್ಲಿಸಬೇಕು ಎಂದು ಬಯಸಿದರೆ ಕೆಳಗೆ ಕೊಡಲಾದ ಅರ್ಜಿ ಸಲ್ಲಿಕೆಯ ವಿವರವನ್ನು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಹೀಗಿರುತ್ತದೆ :
ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿದ ಅಭ್ಯರ್ಥಿಗಳು ಆಫ್ ಲೈನ್ ಮುಖಾಂತರ ತಮ್ಮ ಅರ್ಜಿಯನ್ನು ಪೂರ್ಣಗೊಳಿಸಬೇಕು.
- ಅಭ್ಯರ್ಥಿಗಳು ಶಿವಮೊಗ್ಗದ ಹಳೆಯ ಜೈ ಆವರಣದಲ್ಲಿರುವ ಜಿಲ್ಲಾ ಸಮಾದೇಷ್ಟರ ಕಾರ್ಯಾಲಯ ಅಥವಾ ಜಿಲ್ಲೆಯ ಯಾವುದಾದರು ಗೃಹರಕ್ಷಕ ದಳದ ಘಟಕಗಳಿಗೆ ಮೊದಲು ಭೇಟಿ ನೀಡಬೇಕು.
- ಬೆಳಗ್ಗೆ 10 ಗಂಟೆಯಿಂದ ಸಂಜೆ 5:30ರ ಸಮಯದಲ್ಲಿ ಉಚಿತವಾಗಿ ಅರ್ಜಿ ನಮೂನೆಯನ್ನು ಪಡೆಯಲಾಗುವುದು.
- ಅಭ್ಯರ್ಥಿಗಳ ಅರ್ಜಿ ಜೊತೆಗೆ ಕೇಳಲಾದ ಅಂಕಪಟ್ಟಿ, ವಾಸ ಸ್ಥಳ ದುಡಿಗಳ ಪತ್ರ, ಇತ್ತೀಚಿನ ನಿಮ್ಮ ಭಾವಚಿತ್ರ ಮತ್ತು ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನ ಅರ್ಜಿಯೊಂದಿಗೆ ಲಗತ್ತಿಸಿ.
- ಅರ್ಜಿಯಲ್ಲಿ ಅಭ್ಯರ್ಥಿಯ ಹೆಸರು, ವಿದ್ಯಾರ್ಹತೆ , ತಮ್ಮ ವಿಳಾಸ, ಜನ್ಮ ದಿನಾಂಕವನ್ನು ಸರಿಯಾಗಿ ಬರ್ತಿ ಮಾಡಿ.
- ಅಭ್ಯರ್ಥಿಗಳು ಕೊನೆಯಲ್ಲಿ ಭರ್ತಿ ಮಾಡಿದ ಎಲ್ಲಾ ಅರ್ಜಿಯ ವಿವರವನ್ನು ಸರಿಯಾಗಿ ಓದಿ ಹಾಗೆ 03-02-2026 ರ ಒಳಗೆ ಅದೇ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸಿ.
- ಅರ್ಜಿ ಸಲ್ಲಿಕೆಯ ನಂತರ ಕಚೇರಿಯ ಸಿಬ್ಬಂದಿಗಳ ಹತ್ತಿರ ಸ್ವೀಕೃತಿ ಪತ್ರ ಅಥವಾ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳುವುದು ಸೂಕ್ತ.
ಹೆಚ್ಚಿನ ಮಾಹಿತಿಗೆ :
“ಶಿವಮೊಗ್ಗ ಜಿಲ್ಲಾ ಗೃಹರಕ್ಷಕ ದಳ ಕಚೇರಿಯನ್ನು ಅಥವಾ ದೂರವಾಣಿ ಸಂಖ್ಯೆ 08182-255630 ಅಥವಾ 295630 ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನ ಪಡೆಯಿರಿ”.
ಪ್ರಮುಖ ದಿನಾಂಕಗಳು :
| ಅರ್ಜಿ ಪ್ರಾರಂಭದ ದಿನಾಂಕ | ಪ್ರಾರಂಭವಾಗಿದೆ |
| ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ | 2 ಫೆಬ್ರವರಿ 2026 |
| ಸಮಯ | ಬೆಳಗ್ಗೆ 10:00 ಇಂದ ಸಂಜೆ 5:30 ವರೆಗೆ |
ಈ ಹುದ್ದೆಯ ಪ್ರಮುಖ ಲಿಂಕುಗಳು :
| ಅಧಿಕೃತ ವೆಬ್ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅರ್ಜಿ ಸಲ್ಲಿಸುವ ಲಿಂಕ್ | ಕಚೇರಿಗೆ ಭೇಟಿ ನೀಡಿ |
| ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
ಅಂತಿಮ ಮಾತು :
ಶಿವಮೊಗ್ಗ ಹತ್ತಿರದ ತಾಲೂಕು ಅಥವಾ ನಗರ ಭಾಗಗಳಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಕೇವಲ ಹತ್ತನೇ ತರಗತಿ ಪಾಸ್ ಮಾಡಿಕೊಂಡಿದ್ದರೆ ಸಾಕು ಈ ಉದ್ಯೋಗಕ್ಕೆ ನೀವು ಅರ್ಜಿ ಸಲ್ಲಿಸಿ ಶಿವಮೊಗ್ಗ ಹೋಂ ಸೆಕ್ಯೂರಿಟಿ ಗಾರ್ಡ್ ಕೆಲಸವನ್ನ ನೀವು ನಿಮ್ಮದಾಗಿಸಿಕೊಳ್ಳಬಹುದು.







