Danta Bhagya Yojane : ಹಲ್ಲು ಬಿದ್ದಿದೆಯಾ? ಚಿಂತಿಸಬಿಡಿ! ಸರ್ಕಾರದಿಂದ ಸಿಗುತ್ತೆ ಉಚಿತ ಕೃತಕ ಹಲ್ಲು!

On: Saturday, January 24, 2026 4:37 PM
Danta Bhagya Yojane

Join WhatsApp

Join Now

Join Telegram

Join Now

ನಿಮ್ಮ ಮನೆಯಲ್ಲಿ ಹಿರಿಯ ನಾಗರಿಕದಿದ್ದರೆ ಕರ್ನಾಟಕ ಸರ್ಕಾರದ ಈ ಮಹತ್ವದ ಯೋಜನೆಯ ಬಗ್ಗೆ ನೀವು ತಿಳಿಯಲೇಬೇಕು. ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ವಯಸ್ಸಾದವರಿಗಾಗಿ “ದಂತ ಭಾಗ್ಯ ಯೋಜನೆ” ಎಂಬ ಅತ್ಯುತ್ತಮ ಯೋಜನೆ ಜಾರಿಗೆ ತಂದಿದೆ.

Danta Bhagya Yojane In Kannada

ಯಾವಾಗ ಗೊತ್ತಾ ? ಡಿಸೆಂಬರ್ 7, 2014 ರಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಂದ ಜಾರಿಗೆ ತರಲ್ಪಟ್ಟಿತು. ನಂತರದ ದಿನಗಳಲ್ಲಿ ಅಂದರೆ ಪೂರ್ಣ ಪ್ರಮಾಣದಲ್ಲಿ ಮೇ 2015 ರಿಂದ ರಾಜ್ಯಾದ್ಯಂತ ಅನುಷ್ಠಾನಗೊಂದೆ. ಆದರೆ 2026 ಬಂದರು ಈ ಯೋಜನೆಯ ಬಗ್ಗೆ ನಮ್ಮ ರಾಜ್ಯದ ಜನಸಾಮಾನ್ಯರು ತಿಳಿದೇ ಇಲ್ಲ. ಅದರಲ್ಲಿಯೂ ಇಂತ ಒಂದು ಯೋಚನೆ ನಮ್ಮ ಕರ್ನಾಟಕದಂತ ರಾಜ್ಯದಲ್ಲಿ ಜಾರಿ ಇದೆ ಎಂದರು ನಂಬದೇ ಇರುವಷ್ಟು ಮೂರ್ಖರು ಕೂಡ ಇದ್ದಾರೆ.

ಹೀಗಾಗಿ ನಮ್ಮ ಒಂದು ವೆಬ್ ಸೈಟ್ ನಲ್ಲಿ “ದಂತ ಭಾಗ್ಯ ಯೋಜನೆ” (Danta Bhagya Scheme) ಬಗ್ಗೆ ಸ್ಪಷ್ಟವಾಗಿ ಜನರಿಗೆ ತಲುಪಿಸಲೇಬೇಕೆನ್ನುವುದು ನಮ್ಮ ಆಶಯವಾಗಿದೆ. ಇದೇ ರೀತಿ ಸರ್ಕಾರದ ಹೊಚ್ಚಹೊಸ ಯೋಚನೆಗಳ ಬಗ್ಗೆ ಮಾಹಿತಿಗಾಗಿ ಮತ್ತು ಉದ್ಯೋಗಗಳ ಬಗ್ಗೆ ಮಾಹಿತಿಗಾಗಿ ನಮ್ಮ ಉದ್ಯೋಗ ಸಲಹೆ ವೆಬ್ಸೈಟ್ ಪೇಜ್ ಗೆ ಬೇಟಿನೀಡುತ್ತೀರಿ.

ದಂತ ಭಾಗ್ಯ ಯೋಜನೆ:

ಕಾಮನಾಗಿ ವಯಸ್ಸಾದಂತೆ ಪ್ರತಿಯೊಬ್ಬರಲ್ಲೂ ಆಹಾರ ಸೇವನೆಗೆ ಮಾತ್ರವಲ್ಲದೆ ವೈಯಕ್ತಿಕ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುವ ಹಲ್ಲಿನ ಸಮಸ್ಯೆಗೆ ಚಿಕಿತ್ಸೆ ಪಡೆಯುವುದು ಇಂದಿನ ದಿನಗಳಲ್ಲಿ ತುಂಬಾನೇ ಕಷ್ಟ ಆಗಿದೆ. ಯಾಕೆಂದರೆ ಆರ್ಥಿಕವಾಗಿ ಹಿಂದುಳಿದ ಕುಟುಂಬದಲ್ಲಿದ ಹಿರಿಯನಾದರಿಕರ ಹಲ್ಲಿನ ಸಮಸ್ಯೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟು ಹಣ ಅವರಲ್ಲಿ ಇರುವುದಿಲ್ಲ. ಇದನ್ನ ಮನಗಂಡ ಸರ್ಕಾರ ಹಿರಿಯ ನಾಗರಿಕರಿಗೆ ಉಚಿತ ಮತ್ತು ಉತ್ತಮ ಗುಣಮಟ್ಟದ ಹಲ್ಲಿನ ಸೆಟ್ ಜೋಡಿಸುವ ಯೋಜನೆಯನ್ನ ಅನುಷ್ಠಾನ ಗೊಳಿಸಿದೆ.


‘ಆತ್ಮೀಯ ಹಿರಿಯ ನಾಗರಿಕರೇ ಉದ್ದುರಿ ಹೋಗಿರುವ ಹಲ್ಲಿಗೆ ಹೇಳಿ ಗುಡ್ ಬಾಯ್ ! ಗಟ್ಟಿ ಇರುವ ಹಲ್ಲುಗಳನ್ನ ಜೋಡಿಸಲು ಸರ್ಕಾರ ದಂತ ಭಾಗ್ಯ ಯೋಜನೆಯನ್ನು ನಿಮಗಾಗಿ ಸಿದ್ಧಪಡಿಸಿದೆ’.

ಯೋಜನೆಯ ಅವಲೋಕನ :-

ಯೋಜನೆಯ ಹೆಸರು ದಂತ ಭಾಗ್ಯ ಯೋಜನೆ
ರಾಜ್ಯ ಕರ್ನಾಟಕ
ವಯೋಮಿತಿ 45 ವರ್ಷ ದಾಟಿದ  ಅಥವಾ ಅದಕ್ಕಿಂತ ಹೆಚ್ಚು
ಯಾರು ಅರ್ಹರು ಹಿರಿಯ ನಾಗರಿಕರು ಮಾತ್ರ
ಯಾವ ಸರ್ಕಾರ ಜಾರಿ ಮಾಡಿದ್ದು ಕರ್ನಾಟಕ ಸರ್ಕಾರ
Danta Bhagya Yojane

ಯೋಜನೆಯ ಪ್ರಯೋಜನವನ್ನು ನಾವು ಪಡೆಯಬಹುದೇ ?

ಕೆಳಗೆ ಕೊಡಲಾದ ಅರ್ಹತೆಗಳು ನಿಮ್ಮಲ್ಲಿದ್ದರೆ ಯೋಚನೆಯ ಲಾಭವನ್ನು ಸಂಪೂರ್ಣವಾಗಿ ನಿಮ್ಮದಾಗಿಸಿಕೊಳ್ಳಬಹುದು

  • ಕರ್ನಾಟಕ ರಾಜ್ಯದ ಕಾಯಂ ನಿವಾಸಿಗಳಾಗಿರಬೇಕು
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಪಿಎಲ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು
  • 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಈ ಯೋಜನೆಗೆ ಅರ್ಹರಾಗಿರುತ್ತಾರೆ
  • ಕೆಳಗಿನ ದವಡೆ ಅಥವಾ ಮೇಲಿನ ದವಡೆ ಹಲ್ಲುಗಳು ಸಂಪೂರ್ಣವಾಗಿ ಉದುರಿ ಹೋಗಿರಬೇಕು.
  • ಸಾಮಾನ್ಯ ಜನರಿಗೆ ಮಾತ್ರ ಈ ಯೋಜನೆಯ ಲಾಭ ಸಿಗುವಂತದ್ದು ಸರ್ಕಾರಿ ಪಿಂಚಣಿ ಪಡೆಯುತ್ತಿರುವ ಅಥವಾ ಇತರೆ ವಿಮಾ ಯೋಜನೆಗಳ ಸೌಲಭ್ಯವನ್ನು ಪಡೆಯುತ್ತಿರುವವರು ಈ ಯೋಜನೆಗೆ ಅನ್ವಯಿಸುವುದಿಲ್ಲ.

“ದಂತ ಭಾಗ್ಯ ಯೋಜನೆ ಅಡಿಯಲ್ಲಿ ಹಲ್ಲಿನ ಸೇರ್ಪಡೆಯಲು ಜನಸಾಮಾನ್ಯರು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ? ಇದಕ್ಕೆ ಅರ್ಜಿ ಸಲ್ಲಿಸುವ ವಿಧಾನವಾದರೂ ಹೇಗೆ ? ಸರ್ಕಾರ ಕೇಳುವ ದಾಖಲೆಗಳೆಲು ? ಈ ಬಗ್ಗೆ ಎಲ್ಲಾ ವಿಷಯವನ್ನು ನಿಮ್ಮೊಂದಿಗೆ ಈ ಕೆಳಗೆ ಹಂಚಿಕೊಳ್ಳಲಾಗಿದೆ”.

ಈ ಯೋಜನೆ ಅಡಿಯಲ್ಲಿ ರಾಜ್ಯಾದ್ಯಂತ ಸುಮಾರು 41,218ಕ್ಕೂ ಹೆಚ್ಚು ನಾಗರಿಕರು ಯೋಜನೆಯ ಸೌಲಭ್ಯವನ್ನು ಪಡೆದಿದ್ದಾರೆ ಎಂಬುದು ಸರ್ಕಾರದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆದರೂ ಕೂಡ ಅನೇಕ ಗ್ರಾಮೀಣ ಜನಗಳಿಗೆ ಈ ಯೋಚನೆಯ ಬಗ್ಗೆ ಮಾಹಿತಿ ಇಲ್ಲವೇ ಇಲ್ಲ.

ಸೌಲಭ್ಯ ಪಡೆಯುವುದು ಹೇಗೆ :-

  • ಸೌಲಭ್ಯ ಪಡೆಯಲು ಅರುಣ ನಾಗರಿಕರು ಅವಶ್ಯವಿರುವ ದಾಖಲೆಗಳ ಸಮೇತ ಹತ್ತಿರದ ಜಿಲ್ಲಾ ಆಸ್ಪತ್ರೆಗಳು ಅಥವಾ ರಾಜ್ಯಾದ್ಯಂತ ಗುರುತಿಸಿರುವ ಹಾಗೂ ದಂತ ವೈದ್ಯಕೀಯ ಕಾಲೇಜುಗಳಲ್ಲಿ ಈ ಉಚಿತ ಸೇವೆಯನ್ನು ಪಡೆದುಕೊಳ್ಳಬಹುದು.
  • ಅಥವಾ ನಿಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ದಂತ ವೈದ್ಯಕೀಯ ವಿಭಾಗವನ್ನ ಸಂಪರ್ಕಿಸಿ.

ನಿಮ್ಮಲ್ಲಿ ಇರಬೇಕಾದ ದಾಖಲೆಗಳು :-

ನಿಮ್ಮ ಊರಿನ ಹಾಸ್ಪಿಟಲ್ ಗೆ ಭೇಟಿ ನೀಡುವ ಮೊದಲು ಈ ಕೆಳಗೆ ಕೊಡಲಾದ ದಾಖಲೆಗಳು ಕಡ್ಡಾಯವಾಗಿ ಇರಲೇಬೇಕು.

  • ಬಿಪಿಎಲ್ ಕಾರ್ಡ್
  • ಆಧಾರ್ ಕಾರ್ಡ್
  • ಎರಡು ಪಾಸ್ಪೋರ್ಟ್ ಅಳತೆಯ ಫೋಟೋ

ಇಂತಹ ಸರ್ಕಾರದ ಯೋಜನೆಗಳಿಂದ ಹಿರಿಯ ನಾಗರಿಕರು ಹಲ್ಲಿನ ಸಮಸ್ಯೆಯಿಂದಾಗಿ ಆಹಾರವನ್ನು ತ್ಯಜಿಸುವ ಅಗತ್ಯವಿಲ್ಲ. ಯೋಜನೆಯ ಸಲಿಪಯೋಗ ಪಡೆದ ಹಿರಿಯ ನಾಗರಿಕರ ಆರೋಗ್ಯ ಮತ್ತು ಆತ್ಮ ವಿಶ್ವಾಸ ಇನ್ನೂ ಹೆಚ್ಚಾಗುತ್ತದೆ.

ವೈದ್ಯಕೀಯ ತಪಾಸಣೆ ನಡೆಸುವ ಕ್ರಮ ಹೀಗಿರುತ್ತದೆ :-

  • ಸರ್ಕಾರಿ ದಂತ ವೈದ್ಯರು ನಿಮ್ಮ ಹಲ್ಲು ಅಥವಾ ವಸಡನ್ನು ಪರಿಶೀಲನೆ ಮಾಡುತ್ತಾರೆ ನೀವು ಕೃತಕ ಹಲ್ಲಿಗೆ ಅರ್ಹರಾಗಿದ್ದರೆ ನಿಮ್ಮ ಹೆಸರನ್ನು ಯೋಜನೆಯಲ್ಲಿ ಬರೆಸುತ್ತಾರೆ.
  • ಸಂಬಂಧ ಪಟ್ಟ ಡಾಕ್ಟಾರ್ ನಿಮ್ಮ ಬಾಯಿಯ ಅಳತೆಯನ್ನು ತೆಗೆದುಕೊಳ್ಳುತ್ತಾರೆ ಜಿಲ್ಲಾ ಆಸ್ಪತ್ರೆಯಲ್ಲಿ ಲ್ಯಾಬ್ ಇಲ್ಲದಿದ್ದರೆ ಹತ್ತಿರದ ಸರ್ಕಾರಿ ಒಪ್ಪಂದದ ದಂತ ವೈದ್ಯಕೀಯ ಕಾಲೇಜಿಗೆ ಶಿಫಾರಸು ಪತ್ರದೊಂದಿಗೆ ನಿಮ್ಮನ್ನು ಕಳುಹಿಸುತ್ತಾರೆ.
  • ನಂತರ ಅಳತೆ ನೀಡಿದ ಸುಮಾರು 15 ರಿಂದ 25 ದಿನದ ನಂತರ ನಿಮ್ಮ ಕೃತಕ ಹಲ್ಲುಗಳ ಸಿದ್ಧವಾಗಿರುತ್ತದೆ. ಆಗ ಆಸ್ಪತ್ರೆಯಿಂದ ನಿಮಗೆ ಮಾಹಿತಿಯನ್ನು ನೀಡಲಾಗುತ್ತದೆ. ಅಂದು ಹೋಗಿ ನೀವು ಉಚಿತವಾಗಿ ಕೃತಕ ಹಲ್ಲನ್ನು ಅಳವಡಿಸಿಕೊಂಡು ಬರಬಹುದು.

ಪ್ರಮುಖ ಮಾಹಿತಿ :

ನಿಮ್ಮ ಕುಟುಂಬದಲ್ಲಿ ಇರುವ ಹಿರಿಯ ನಾಗರಿಕರಿಗೆ ಹಲ್ಲುಗಳು ಬಿದ್ದು ಹೋದಲ್ಲಿ ಹಿಂದೆ ನಿಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ದಂತ ಭಾಗ್ಯ ಯೋಜನೆಯನ್ನ ಸದುಪಯೋಗ ಪಡಿಸಿಕೊಳ್ಳಿ.


ಅಂತಿಮ ತೀರ್ಮಾನ :

ಯೋಜನೆ ಅಡಿ ಯಾವುದೇ ರೀತಿಯ ಸಹಾಯಧನ ಸಿಗುವುದಿಲ್ಲ ಸರ್ಕಾರದಿಂದ ಅಭ್ಯರ್ಥಿಗಳ ಹೆಸರಿನಲ್ಲಿ ಮೂರು ಸಾವಿರ ಹಣ ಆಸ್ಪತ್ರೆಯ ಖಾತೆಗೆ ಜಮಾ ಆಗುತ್ತದೆ. ಫಲಾನುಭವಿಗಳು ನೀವು ಚಿಕಿತ್ಸೆಗಾಗಿ ಒಂದು ರೂಪಾಯಿ ಹಣವನ್ನು ಪಾವತಿ ಮಾಡುವುದು ಬೇಡ ಸರ್ಕಾರವೇ ಪೂರ್ತಿ ಪ್ರಮಾಣದಲ್ಲಿ ಉಚಿತವಾಗಿ ಸೌಲಭ್ಯವನ್ನು ನಿಮಗೆ ಒದಗಿಸುತ್ತದೆ. ಈ ಯೋಚನೆಯ ಬಗ್ಗೆ ನೀವು ಸಂಪೂರ್ಣವಾಗಿ ತಿಳಿದುಕೊಂಡಿದ್ದೀರಾ ಎಂದು ಭಾವಿಸುತ್ತೇನೆ ಹಾಗೆಯೇ ನಿಮ್ಮ ಮನೆಯಲ್ಲಿ ಇರುವಂತಹ ವಯಸ್ಸಾದವರನ್ನು ಇದೇ ತಕ್ಷಣ ನಿಮ್ಮ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸರ್ಕಾರ ಕೊಡುತ್ತಿರುವ ಉಚಿತ ಸೇವೆಯ ಉಪಯೋಗ ಪಡೆಯಿರಿ.

ಇತರೆ ಸರ್ಕಾರಿ ಯೋಜನೆಗಳ ಲಿಂಕುಗಳು:


Join WhatsApp

Join Now

Join Telegram

Join Now

Leave a Comment