ನಿಮ್ಮ ಹಳೆಯ ಬೈಕ್ ಹಾಳಾಗಿದಿಯಾ? ಹೊಸ ಬೈಕನ್ನು ಖರೀದಿಸಬೇಕು ಆದರೆ, ಯಾವ ಮಾಡೆಲ್ ಬೈಕ್ ಖರೀದಿಸಬೇಕು ಎನ್ನುವ ಗೊಂದಲ ನಿಮಗಿದಿಯಾ? ಹಾಗಿದ್ದರೆ ಇಲ್ಲಿದೆ ಬೆಸ್ಟ್ ಸೊಲ್ಯೂಷನ್. ಇದೀಗ ಕರ್ನಾಟಕದಲ್ಲಿ ಒಂದಲ್ಲ ಎರೆಡಲ್ಲ ಮೂರು ಮಾಡೆಲ್ ಎಲೆಕ್ಟ್ರಿಕ್ ಬೈಕ್ ಗಳು ಬಿಡುಗಡೆಗೊಂಡಿದೆ.
Electric Bike Bumper Deal on Republic Day Offer
ಈ ಮೂರು ಮಾಡೆಲ್ ಗಳ ಬೈಕುಗಳು ಒಂದಕ್ಕಿಂತ ಒಂದು ಹೆಚ್ಚು ಅತ್ಯಾಕರ್ಷಕ ವಿನ್ಯಾಸವನ್ನು ಹೊಂದಿದ್ದು, ಗ್ರಾಹಕರು ಯಾವ ಬೈಕನ್ನು ಖರೀದಿಸಬೇಕೆಂದು ಗೊಂದಲಕ್ಕೊಳಗಾಗುವುದು ಖಚಿತ.
ದಿನ ಕಳೆಯುತ್ತಿದ್ದಂತೆ ದುಬಾರಿಯಾಗುತ್ತಿರುವ ಪೆಟ್ರೋಲ್ ಬೆಲೆಗೆ ಬೇಸತ್ತ ಜನರು ಈಗೆಲ್ಲಾ ಎಲೆಕ್ಟ್ರಿಕ್ ಬೈಕ್ ಗಳತ್ತ ಗಮನಹರಿಸಿ ಅದನ್ನು ಖರೀದಿಸಲು ಮುಗಿಬಿದ್ದಿದ್ದಾರೆ.
ಅಂತಹವರಿಗಾಗಿಯೇ ಈ ಮೂರು ಮಾಡೆಲ್ ಗಳ ಬೈಕುಗಳನ್ನು ಕರ್ನಾಟಕಕ್ಕೆ ಪರಿಚಯಿಸಿದ್ದು, ರಾಕೆಟ್ ವೇಗವನ್ನು ಹೊಂದಿರುವ ಈ ಎಲೆಕ್ಟ್ರಿಕ್ ಬೈಕುಗಳನ್ನು ಗ್ರಾಹಕರು ಯಾವುದೇ ರೀತಿಯ ಆತಂಕಗಳಿಲ್ಲದೆ ಖರೀದಿಸಬಹುದಾಗಿದೆ.
ಗ್ರಾಹಕರ ಬೇಡಿಕೆಯನ್ನು ಮನಗಂಡ ಕಂಪನಿಗಳು ರಿಪಬ್ಲಿಕ್ ಡೇ ಪ್ರಯುಕ್ತ ಅತ್ಯಾಕರ್ಷಕ ಕೊಡುಗೆಗಳನ್ನು ನೀಡುವ ಮೂಲಕ ಎಲೆಕ್ಟ್ರಿಕ್ ಬೈಕುಗಳ ಕಡೆಗೆ ಗ್ರಾಹಕರನ್ನು ಇನ್ನಷ್ಟು ಗಮನಸೆಳೆಯುವಂತೆ ಮಾಡಿದೆ.
ನೀವು ಕೂಡ ಈ ಎಲೆಕ್ಟ್ರಿಕ್ ಬೈಕನ್ನು ಖರೀದಿಸಬೇಕಾ? ಹಾಗಿದ್ದರೆ ಈ ಎಲ್ಲಾ ಆಫರ್ ಗಳ ಜೊತೆಗೆ ಎಲೆಕ್ಟ್ರಿಕ್ ಬೈಕುಗಳನ್ನು ತಮ್ಮದಾಗಿಸಿಕೊಳ್ಳಬೇಕಾದರೆ ಇಂದೇ ನಿಮ್ಮ ಹತ್ತಿರದ ಶೋರೂಮ್ ಗೆ ಭೇಟಿ ನೀಡಿ ಬುಕಿಂಗ್ ಮಾಡಿಕೊಳ್ಳಿ.
ಮೋಡೆಲ್ ಬೈಕುಗಳ ಕಿರು ಪರಿಚಯ:
| ಮಾಡೆಲ್ ಹೆಸರು | ಹೈ ಸ್ಪೀಡ್ |
| ರಿವೋಲ್ಟ್ RV500X | ಪ್ರತಿ ಗಂಟೆಗೆ 130 ಕಿ. ಮೀ |
| ಓಲಾ ರೋಡ್ ಸ್ಟರ್ ಪ್ರೊ | ಪ್ರತಿ ಗಂಟೆಗೆ 150 ಕಿ. ಮೀ |
| ಅಲ್ಟ್ರಾವಯಲೆಟ್ F99 | ಪ್ರತಿ ಗಂಟೆಗೆ 170 ಕಿ. ಮೀ |
ರಿವೋಲ್ಟ್ RV500X:
ರಿವೋಲ್ಟ್ ಕಂಪನಿಯು ಮೊದಲೆಲ್ಲಾ ಗ್ರಾಹಕರಿಗೆ ನೆರವಾಗುವಂತೆ ಕಡಿಮೆ ಬೆಲೆಯ ಬೈಕುಗಳನ್ನು ಪರಿಚಯಿಸಿತ್ತು. ಆದರೆ, ಇದೀಗ ಕಡಿಮೆ ಬೆಲೆಗಳ ಜೊತೆಗೆ ಅತಿವೇಗದ ರಿವೋಲ್ಟ್ RV500X ಎಲೆಕ್ಟ್ರಿಕ್ ಬೈಕ್ ಕರ್ನಾಟಕಕ್ಕೆ ಪರಿಚಯಿಸಿದ್ದು, ಕಾಲೇಜು ಹಾಗೂ ಕೆಲಸಕ್ಕೆ ತೆರೆಳುವವರ ದೈನಂದಿನ ಪ್ರಯಾಣಕ್ಕೆ ಈ ಎಲೆಕ್ಟ್ರಿಕ್ ಬೈಕ್ ಒಳ್ಳೆಯ ಆಯ್ಕೆ.
ರಿವೋಲ್ಟ್ RV500X ಎಲೆಕ್ಟ್ರಿಕ್ ಬೈಕ್ ಆಕರ್ಷಕ ವಿನ್ಯಾಸ, ಭಯಂಕರ ವೇಗ, ಸ್ಮಾರ್ಟ್ ಫೀಚರ್ ಹೊಂದಿರುವ ಜೊತೆಗೆ ಒಂದು ಚೂರು ಹೊಗೆಯನ್ನು ಹೊರಸೂಸದೆ, ಎಕೋ- ಫ್ರೆಂಡ್ಲಿ ಆಗಿರುವುದರಿಂದ ಪರಿಸರ ಪ್ರಜ್ಞೆ ಹೊಂದಿರುವ ಗ್ರಾಹಕರ ಗಮನವನ್ನು ಅತಿ ವೇಗದಲ್ಲಿ ಸೆಳೆಯುವುದು ಪಕ್ಕ.
ರಿವೋಲ್ಟ್ RV500X ಎಲೆಕ್ಟ್ರಿಕ್ ಬೈಕ್ ಪ್ರತಿ ಗಂಟೆಗೆ 130 ಕಿ. ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದ್ದು, 3.24kWh ಸಾಮರ್ಥ್ಯದ ಅಯಾನ್ ಮತ್ತು ಲಿಥಿಯಂ ನಿಂದ ಕೂಡಿರುವ ಬ್ಯಾಟರಿಯನ್ನು ಹೊಂದಿದ್ದು, ಇದು ಕೇವಲ 80 ನಿಮಿಷದಲ್ಲಿ 0 – 80 % ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ.
ಓಲಾ ರೋಡ್ ಸ್ಟರ್ ಪ್ರೊ:
ಓಲಾ ಕಂಪನಿಯು ಇಲ್ಲಿಯ ವರೆಗೆ ಪರಿಚಯಿಸಿದ ಬೈಕುಗಳಲ್ಲಿ ಓಲಾ ರೋಡ್ ಸ್ಟರ್ ಪ್ರೊ ಎಲೆಕ್ಟ್ರಿಕ್ ಬೈಕ್ ಅತ್ಯಾಧುನಿಕ ವೈಶಿಷ್ಟ್ಯತೆಯನ್ನು ಹೊಂದಿರುವ ಬೈಕ್ ಆಗಿದೆ. ಟೆಕ್ನಾಲಜಿ ಕಿಂಗ್ ಅಂತಲೇ ಪ್ರಸಿದ್ದಿ ಪಡೆದ ಈ ಬೈಕ್ ಪ್ರತಿ ಗಂಟೆಗೆ 150 ಕಿ. ಮೀ ವೇಗದಲ್ಲಿ ಚಲಿಸುವ ಮೂಲಕ ಗ್ರಾಹಕರನ್ನು ಇನ್ನಷ್ಟು ಆಕರ್ಷಿಸುವಂತೆ ಮಾಡಿದೆ.
ಓಲಾ ರೋಡ್ ಸ್ಟರ್ ಪ್ರೊ ಎಲೆಕ್ಟ್ರಿಕ್ ಬೈಕ್ ಗೆ ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ 579 ಕಿ. ಮೀ ವರೆಗಿನ ಭಯಂಕರ ರೆಂಜನ್ನು ಹೊಂದಿದ್ದು, ಥ್ರಿಲ್ ಇಷ್ಟ ಪಡುವ ಜನರಿಗೆ ಈ ಬೈಕ್ ಹೇಳಿಮಾಡಿಸಿದಂತಿರುತ್ತದೆ. ಪೆಟ್ರೋಲ್ ಬೈಕುಗಳಿಗೆ ಹೋಲಿಸಿದರೆ ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ಪರಿಸರ ಸ್ನೇಹಿಯಾಗಿರುವ ಈ ಬೈಕ್ ಗ್ರಾಹಕರ ನೋಟವನ್ನು ಈ ಬೈಕ್ ಮೇಲೆಯೇ ಕೇಂದ್ರೀಕರಿಸುವಂತೆ ಮಾಡಿದೆ.
ಅಲ್ಟ್ರಾವಯಲೆಟ್ F99:
ಅಲ್ಟ್ರಾವಯಲೆಟ್ ಆಟೋಮೋಟಿವ್ ಕಂಪನಿಯು ಪರಿಚಯಿಸಿದ ಅಲ್ಟ್ರಾವಯಲೆಟ್ F99 ಎಲೆಕ್ಟ್ರಿಕ್ ಬೈಕ್ ಅತ್ಯಂತ ವೇಗದ ಹಾಗೂ ಶಕ್ತಿಶಾಲಿ ಬೈಕ್ ಮಾತ್ರವಲ್ಲದೆ ತಂತ್ರಜ್ಞಾನದ ಅದ್ಬುತ ಅಂತಾನೆ ಹೇಳಬಹುದು. ಈ ಬೈಕ್ ಪ್ರತಿ ಗಂಟೆಗೆ 170 ಕಿ. ಮೀ ವೇಗವನ್ನು ಹೊಂದಿದ್ದು, 90kW ಶಕ್ತಿಯನ್ನು ಉತ್ಪಾದಿಸುವ ಲಿಕ್ವಿಡ್- ಕೂಲ್ಡ್ ಮೋಟಾರ್ ಅನ್ನು ಹೊಂದಿದೆ.
ಅಲ್ಟ್ರಾವಯಲೆಟ್ F99 ಎಲೆಕ್ಟ್ರಿಕ್ ಬೈಕ್ ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ, 265 ಕೀ.ಮೀ ರಾಕೆಟ್ ವೇಗವನ್ನು ಹೊಂದಿದ್ದು, ಇದು ರಾಕೆಟ್ ರಾಕ್ಷಸ ಅಂತಲೇ ಪ್ರಸಿದ್ದಿಯಾಗಿದೆ. ರೇಸಿಂಗ್ ಟ್ರಾಕ್ ಗಳಲ್ಲಿ ಬೈಕನ್ನು ವೇಗವಾಗಿ ಓಡಿಸಲು ಬಯಸುವ ರೇಸಿಂಗ್ ಪ್ರಿಯರಿಗೆ ಈ ಬೈಕ್ ಉತ್ತಮ ಆಯ್ಕೆ.
ವಿಶೇಷ ಸೂಚನೆ:
| ಗಣರಾಜ್ಯೋತ್ಸವಕ್ಕೆ ಹೊಸ ಎಲೆಕ್ಟ್ರಿಕ್ ವಾಹನವನ್ನು ಖರೀದಿ ಮಾಡುವ ಖರೀದಿ ಮಾಡುವವರಿಗೆ ಕೆಲವೊಂದಿಷ್ಟು ಶರತುಗಳು ಇದ್ದು ಈ ಎಲ್ಲಾ ಶರತುಗಳಿಗೆ ಅನ್ವಯವಾಗಿ ನೀವು ವಾಹನವನ್ನು ಖರೀದಿ ಮಾಡಬೇಕಾಗುತ್ತದೆ ನೀವು ಇದರ ಬಗ್ಗೆ ಎಲ್ಲಾ ಮಾಹಿತಿಯನ್ನು ತಿಳಿದುಕೊಂಡು ವಾಹನವನ್ನು ಖರೀದಿಸಿ |
ಮೂರು ಮಾಡೆಲ್ ಬೈಕುಗಳು ಇದೀಗ ಕರ್ನಾಟಕಕ್ಕೆ:
ಸಾಕಷ್ಟು ಕಂಪನಿಗಳು ಗ್ರಾಹಕರಿಗೆ ಅನುಕೂಲವಾಗುವಂತೆ ಹಾಗೂ ಅವರು ಬಯಸುವಂತೆ ಅತ್ಯಂತ ವೇಗ ಹಾಗೂ ಮಾಡ್ರನ್ ಯುಗಕ್ಕೆ ಮಾಡ್ರನ್ ಶೈಲಿಯ ಎಲೆಕ್ಟ್ರಿಕ್ ಬೈಕುಗಳನ್ನು ಕೆಲವು ರಾಜ್ಯಗಳಲ್ಲಿ ಈಗಾಗಲೇ ಪರಿಚಯಿಸಿದ್ದು, ಇದೀಗ ಕರ್ನಾಟದಲ್ಲೂ ಕೂಡ ಕೆಲವು ಜಿಲ್ಲೆಗಳಲ್ಲಿ ಪರಿಚಯಿಸಿದೆ.
ಬೆಂಗಳೂರು, ಮೈಸೂರು, ಶಿವಮೊಗ್ಗ, ಮಂಗಳೂರಿನಲ್ಲಿ ಈ ಮೂರು ಮಾಡೆಲ್ ಗಳ ಎಲೆಕ್ಟ್ರಿಕ್ ಬೈಕುಗಳನ್ನು ಪರಿಚಯಿಸಿದ್ದು, ರಿಪಬ್ಲಿಕ್ ಡೇ ಪ್ರಯುಕ್ತ ಆಕರ್ಷಕ ಕೊಡುಗೆಗಳೊಂದಿಗೆ, ಬಾರಿ ರಿಯಾಯಿತಿ ದರದಲ್ಲಿ ಎಲೆಕ್ಟ್ರಿಕ್ ಬೈಕುಗಳನ್ನು ಕೊಳ್ಳಲು ಗ್ರಾಹಕರಿಗೆ ಅವಕಾಶ ಕಲ್ಪಿಸಿದ್ದು, ಈಗಾಗಲೇ ಬಾರಿ ಸಂಖ್ಯೆಯಲ್ಲಿ ಗ್ರಾಹಕರು ಈ ಬೈಕ್ ಗಳನ್ನು ಕೊಳ್ಳಲು ಮುಗಿಬಿದ್ದಿದ್ದಾರೆ. ನೀವು ಕೂಡ ನಿಮ್ಮ ಇಚ್ಛೆಯ ಎಲೆಕ್ಟ್ರಿಕ್ ಬೈಕನ್ನು ಕೊಳ್ಳಬೇಕಾದರೆ ನಿಮ್ಮ ಹತ್ತಿರದ ಶೋರೂಮ್ ಗೆ ಭೇಟಿ ನೀಡಿ ಬುಕ್ಕಿಂಗ್ ಮಾಡಿಕೊಳ್ಳಿ.
ಆಕರ್ಷಕ ಕೊಡುಗೆಗಳೊಂದಿಗೆ ಬಾರಿ ರಿಯಾಯಿತಿ ದರದಲ್ಲಿ ಬೈಕುಗಳು ನಿಮಗಾಗಿ:
ಗಣರಾಜ್ಯೋತ್ಸವದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್ ಗಳನ್ನು ನೀಡುವುದರ ಜೊತೆಗೆ ಹೆಚ್ಚಿನ ರಿಯಾಯಿತಿ ಯನ್ನು ನೀಡುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಗ್ರಾಹಕರಿಗೂ ಕಡಿಮೆ ದರದಲ್ಲಿ ಆಕರ್ಷಕ ವಿನ್ಯಾಸವನ್ನು ಹೊಂದಿರುವ ಎಲೆಕ್ಟ್ರಿಕ್ ಬೈಕುಗಳನ್ನು ಕೊಳ್ಳಲು ಕಂಪನಿಯು ಅನುವುಮಾಡಿಕೊಟ್ಟಿದೆ. ಈ ಎಲ್ಲಾ ಆಫರ್ ಗಳು ಹೀಗಿವೆ,
ಎಲೆಕ್ಟ್ರಿಕ್ ಬೈಕುಗಳ ಒಟ್ಟು ಮೊತ್ತದ ಮೇಲೆ ₹10,000 ದ ವರೆಗೆ ರಿಯಾಯಿತಿಯನ್ನು ನೀಡಿದ್ದು, ಇದರ ಜೊತೆಗೆ ಬೈಕ್ ಎಕ್ಸ್ಚೇಂಜ್ ಬೋನಸ್, ಉಚಿತ ಹೋಂ ಚಾರ್ಜರ್ ಸ್ಥಾಪನೆ, ಚಾರ್ಜಿಂಗ್ ಪರಿಕರಗಳ ಮೇಲೆ ಹೆಚ್ಚಿನ ರಿಯಾಯಿತಿ ಹಾಗೂ ಶೂನ್ಯ ಡೌನ್ ಪೇಮೆಂಟ್ ಸೌಲಭ್ಯಗಳು ಲಭ್ಯವಿದೆ.
ಕೊನೆಯ ನುಡಿ:
ಕರ್ನಾಟಕಕ್ಕೆ ರಿವೋಲ್ಟ್ RV500X, ಓಲಾ ರೋಡ್ ಸ್ಟರ್ ಪ್ರೊ, ಅಲ್ಟ್ರಾವಯಲೆಟ್ F99 ಎನ್ನುವ ಮೂರು ಮಾಡೆಲ್ ಬೈಕುಗಳನ್ನು ಈಗಾಗಲೇ ಪರಿಚಯಿಸಿದ್ದು, ಇವುಗಳ ವಿನ್ಯಾಸಕ್ಕೆ ಬೆರಗಾಗಿ ಸಾಕಷ್ಟು ಗ್ರಾಹಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಬೈಕುಗಳನ್ನು ಖರೀದಿಸುತ್ತಿದ್ದಾರೆ. ರಿಪಬ್ಲಿಕ್ ಡೇ ಪ್ರಯುಕ್ತ ಅತ್ಯಾಕರ್ಷಕ ಕೊಡುಗೆಗಳನ್ನು ನೀಡುತ್ತಿರುವುದರಿಂದ ನೀವು ಈ ಎಲೆಕ್ಟ್ರಿಕ್ ಬೈಕ್ ಅನ್ನು ಖರೀದಿಸಲು ಸರಿಯಾದ ಸಮಯ.







