ನೀವೇನಾದರೂ ಸ್ವಂತ ಮನೆಯನ್ನು ಪಡೆದುಕೊಳ್ಳಬೇಕೆಂಬ ಆಸೆ, ಕನಸನ್ನು ಹೊತ್ತಿದ್ದೀರಾ? ನೀವು ನಿಮ್ಮ ಈ ಕನಸ್ಸನ್ನು ಜನವರಿ 24 ರಲ್ಲಿ ನನಸು ಮಾಡಿಕೊಳ್ಳಬಹುದು. ಇದು ಹೇಗೆ ಸಾಧ್ಯ? ಎಂದು ಯೋಚಿಸುತ್ತಿದ್ದೀರಾ, ಹಾಗಿದ್ದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.
PMAY : Pradhan Mantri Awas Yojana
ರಾಜ್ಯ ಸರ್ಕಾರವು ಹೊಸವರ್ಷದ ಆರಂಭದಲ್ಲಿಯೇ ವಿಶೇಷ ಯೋಜನೆಗಳನ್ನು, ಕೊಡುಗೆಗಳನ್ನು ನೀಡುವ ಮೂಲಕ ಬಡವರಿಗೆ ಆಸರೆಯಾಗಿ ನಿಂತಿದೆ. ಅಂತೆಯೇ, ಜನವರಿ 24 ರಂದು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಒಂದಲ್ಲಾ, ಎರಡಲ್ಲಾ ಬರೋಬ್ಬರಿ 42,345 ನಿರ್ಮಾಣಗೊಂಡಿರುವ ಮನೆಗಳನ್ನು ಹಂಚಿಕೆ ಮಾಡಲು ಮುಂದಾಗಿದೆ!
ರಾಜ್ಯ ಸರ್ಕಾರದ ಈ ಒಂದು ಯೋಜನೆಯಡಿಯಲ್ಲಿ ಲಾಭವನ್ನು ಪಡೆದುಕೊಳ್ಳಬಹುದಾದ ಫಲಾನುಭವಿಗಳ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ನಿಮ್ಮ ಜಿಲ್ಲೆಯು ಈ ಒಂದು ಯೋಜನೆಯಡಿಯಲ್ಲಿ ಅರ್ಹವಾಗಿದೆಯೇ? ಎನ್ನುವ ಪ್ರೆಶ್ನೆಗೆ ಇಲ್ಲಿದೆ ಉತ್ತರ.
ಮನೆ ಹಂಚಿಕೆಯ ಕುರಿತು ಕಿರು ವಿಮರ್ಶೆ:
| ಯೋಜನೆಯ ಹೆಸರು | ಪ್ರಧಾನ ಮಂತ್ರಿ ಆವಾಸ್ ಯೋಜನೆ |
| ಹಂಚಿಕೆಯಾಗಲ್ಪಡುವ ಒಟ್ಟು ಮನೆಗಳು | 42,345 |
| ಕಾರ್ಯಕ್ರಮ ನಡೆಯುವ ಸ್ಥಳ | ಹುಬ್ಬಳ್ಳಿ |
| ಕಾರ್ಯಕ್ರಮ ನಡೆಯುವ ದಿನಾಂಕ | 24-01-2026 ಬೆಳಿಗ್ಗೆ 11 ಗಂಟೆಗೆ |
ಯಾಕೆ ಇಷ್ಟೊಂದು ಮನೆಗಳನ್ನು ಉಚಿತವಾಗಿ ನೀಡುತ್ತಿರುವುದು?
2026 ರ ಅವಧಿಯಲ್ಲಿ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಪ್ರತಿಯೊಬ್ಬರಿಗೂ ಸ್ವಂತ ಮನೆಯನ್ನು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು 42,345 ಉಚಿತ ಮನೆ ನೀಡುವುದಾಗಿ ತಿಳಿಸಿದ್ದು, ವಸತಿ ಸಚಿವ ಜಮೀರ್ ಅಹ್ಮದ್ ಅವರು ಈ ಒಂದು ವಿಷಯದ ಕುರಿತು ಹುಬ್ಬಳ್ಳಿಯಲ್ಲಿ ಘೋಷಣೆ ಮಾಡಿದ್ದು, ಬಡ ಕುಟುಂಬಗಳ ಆರ್ಥಿಕ ಹೊರೆಯನ್ನು ತಗ್ಗಿಸುವ ಸರ್ಕಾರದ ದೃಢನಿರ್ಧಾರ ಎಂದು ತಿಳಿಸಿದ್ದಾರೆ.
ಅದ್ದೂರಿ ಸಂಭ್ರಮದಲ್ಲಿ ಗಣ್ಯರ ದಂಡು:
ಜನವರಿ 24, 2026 ರಲ್ಲಿ, ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ನಡೆಯಲಿರುವ ಅದ್ದೂರಿ ಕಾರ್ಯಕ್ರಮವು ಬೆಳಿಗ್ಗೆ 11 ಗಂಟೆಗೆ ಪ್ರಾರಂಭಗೊಳ್ಳಲಿದ್ದು, ರಾಜ್ಯಾದ್ಯಂತ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ಸಿಗಲಿದೆ.
ಈ ಅದ್ದೂರಿ ಕಾರ್ಯಕ್ರಮವು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಉಪಸ್ಥಿತಿಯಲ್ಲಿ ನಡೆಯಲಿದ್ದು, ಜಮೀರ್ ಅಹ್ಮದ್ ಹಾಗೂ ಸಂತೋಷ್ ಲಾಡ್ ಈ ಕಾರ್ಯಕ್ರಮದ ಪೂರ್ವ ಸಿದ್ದತೆಯನ್ನು ಮಾಡಿಸುತ್ತಿದ್ದು, ಇವರು ಕೂಡ ಈ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ, 2,00,000 ಕ್ಕೂ ಹೆಚ್ಚು ಜನಸಾಮಾನ್ಯರು ಭಾಗಿಯಾಗುವ ಸಾಧ್ಯತೆಗಳಿವೆ.
ಯಾವ ವರ್ಗಗಳಿಗೆ ಎಷ್ಟೆಷ್ಟು ಉಚಿತ ಮನೆ?
ಅದ್ದೂರಿ ಕಾರ್ಯಕ್ರಮ ಯಾವಾಗ ನಡೆಯಲಿದೆ ಎನ್ನುವ ಮಾಹಿತಿ ಈಗಾಗಲೇ ಎಲ್ಲರಿಗೂ ತಿಳಿದಿದೆ. ಆದರೆ, ಉಚಿತ ಮನೆಗಳನ್ನು ವರ್ಗವಾರು ಹೇಗೆ ಹಂಚಿಕೆ ಮಾಡುತ್ತಾರೆ? ಎನ್ನುವ ಗೊಂದಲ ಉಂಟಾಗುವುದು ಸಹಜ. ಈ ಎಲ್ಲಾ ಗೊಂದಲಗಳ ನಿವಾರಣೆಗಾಗಿ ಈ ಕೆಳಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಅದನ್ನು ಓದಿಕೊಳ್ಳಿ.
ರಾಜ್ಯ ಸರ್ಕಾರವು ಉಚಿತ ಮನೆಯನ್ನು ನೀಡುವುದಾಗಿ ಈಗಾಗಲೇ ಘೋಷಣೆಮಾಡಿದ್ದು, ಹಂಚಿಕೆಯಾಗಲಿರುವ ಒಟ್ಟು ಮನೆಗಳಲ್ಲಿ, 20,312 ಮನೆಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅರ್ಹ ಫಲಾನುಭವಿಗಳಿಗೆ ನೀಡಲಾಗುತ್ತದೆ.
ಉಳಿದ ಮನೆಗಳನ್ನು ಇತರೆ ವರ್ಗಗಳ ಅರ್ಹ ಫಲಾನುಭವಿಗಳಿಗೆ ನೀಡಲಾಗುತ್ತದೆ. ಹುಬ್ಬಳ್ಳಿ ಜಿಲ್ಲೆಯಲ್ಲಿ ಅರ್ಹ ಫಲಾನುಭವಿಗಳಿಗೆ 1008 ಮನೆಗಳನ್ನು ಹಾಗೂ ಧಾರವಾಡ ಜಿಲ್ಲೆಯಲ್ಲಿ ಅರ್ಹ ಫಲಾನುಭವಿಗಳಿಗೆ 2767 ಮನೆಗಳನ್ನು ಹಸ್ತಾಂತರಿಸಲಾಗುವುದು. ಕೇವಲ ಹುಬ್ಬಳ್ಳಿಯಲ್ಲಿ ಮಾತ್ರವಲ್ಲದೆ, ಏಕಕಾಲಕ್ಕೆ 28 ಜಿಲ್ಲೆಗಳಲ್ಲಿಯೂ ಸಹ ಮನೆಯನ್ನು ಹಂಚಿಕೆ ಮಾಡಲಾಗುವುದು.
ಉಚಿತ ಮನೆ ಪಡೆಯಲು ಫಲಾನುಭವಿಗಳ ಪಾಲೆಷ್ಟು?
ಪ್ರತಿ ಮನೆಯ ಅಂದಾಜು ವೆಚ್ಚ ₹7.5 ಲಕ್ಷ ಮೌಲ್ಯದ್ದಾಗಿದ್ದು, ಅರ್ಹ ಫಲಾನುಭವಿಗಳು ಕೇವಲ ₹1 ಲಕ್ಷ ಹಣವನ್ನು ಪಾವತಿ ಮಾಡಿದರೆ ಸಾಕು ಉಳಿದ ಎಲ್ಲಾ ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರವೇ ಭರಿಸುತ್ತದೆ.
ಈಗಾಗಲೇ ನಿರ್ಮಾಣಗೊಂಡ ಮನೆಗಳ ವಿನ್ಯಾಸ:
ಹುಬ್ಬಳ್ಳಿಯ ಮಂಟೂರು ರಸ್ತೆಯ ಕೊಳಗೇರಿ ನಿವಾಸಿಗಳಿಗಾಗಿ ಈಗಾಗಲೇ 1008 ಮನೆಗಳನ್ನು ನಿರ್ಮಿಸಲಾಗಿದೆ . ಪ್ರತಿ ಮನೆಯು ಅಂದಾಜು 30 ಚದರ ಮೀಟರ್ ಪ್ರದೇಶವನ್ನು ಹೊಂದಿದ್ದು, ಒಂದು ಲಿವಿಂಗ್ ರೂಮ್, ಒಂದು ಮಲಗುವ ಕೋಣೆ, ಅಡುಗೆ ಮನೆ ಹಾಗೂ ಪ್ರತ್ಯೇಕ ಶೌಚಾಲಯ ಹಾಗೂ ಸ್ನಾನಗೃಹಗಳನ್ನೊಳಗೊಂಡಿದೆ. ಎಲ್ಲಾ ಮನೆಗಳು ನೋಡಲು RCC ಫ್ರೇಮ್ಡ್ ಸ್ಟ್ರಕ್ಚರ್ ಮಾದರಿಯಲ್ಲಿದೆ.
ಜಿಲ್ಲಾವಾರು ಫಲಾನುಭವಿಗಳ ಪಟ್ಟಿಯನ್ನು ವೀಕ್ಷಿಸುವುದು ಹೇಗೆ:
- ಮೊದಲು ರಾಜೀವ್ ಗಾಂಧಿ ವಸತಿ ನಿಗಮದ ಅಧಿಕೃತ ವೆಬ್ಸೈಟ್ http://ashraya.karnataka.gov.in/ ಗೆ ಭೇಟಿನೀಡಿ.
- ಮುಖಪುಟದಲ್ಲಿ ನೀಡಲಾದ ಫಲಾನುಭವಿಗಳ ಮಾಹಿತಿ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ.
- ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಹಾಗೂ ವಾರ್ಡ್ ಅನ್ನು ಆಯ್ಕೆ ಮಾಡಿ
- ಅರ್ಜಿ ಸಂಖ್ಯೆಯನ್ನು ನಮೂದಿಸಿ, ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಇದೆಯೇ? ಎಂದು ಪರಿಶೀಲಿಸಿ.
ಕೊನೆಯ ನುಡಿ:
ಕರ್ನಾಟಕ ಸರ್ಕಾರವು ಜನವರಿ 24, 2026 ರಂದು ಹುಬ್ಬಳ್ಳಿಯಲ್ಲಿ ಅದ್ದೂರಿ ಕಾರ್ಯಕ್ರಮವನ್ನು ಮಾಡುವ ಮೂಲಕ ಅರ್ಹ ಫಲಾನುಭವಿಗಳಿಗೆ 42,345 ಮನೆಗಳನ್ನು ಹಂಚಿಕೆ ಮಾಡಲು ನಿರ್ಧರಿಸಿದ್ದು, ಉಚಿತ ಮನೆ ಸಿಗದ ಅಭ್ಯರ್ಥಿಗಳು ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ, ಇದು ಕೇವಲ ಎರಡನೇ ಹಂತವಾಗಿದ್ದು, ಸರ್ಕಾರವು ಏಪ್ರಿಲ್ -ಮೇ ತಿಂಗಳಲ್ಲಿ ಮೂರನೇ ಹಂತದಲ್ಲಿ ಒಟ್ಟು 30,000 ಮನೆಗಳನ್ನು ಹಂಚಿಕೆ ಮಾಡಲು ಭರ್ಜರಿ ಸಿದ್ಧತೆ ನಡೆಸಿದೆ.







