K-RIDE Recruitment : ರೂ 2,61,000/- ವೇತನ । ಜನರಲ್ ಮ್ಯಾನೇಜರ್ ಮತ್ತು ಇತರ ಹುದ್ದೆಗಳಿಗೆ ಅರ್ಜಿ ಆಹ್ವಾನ

On: Monday, January 19, 2026 4:44 PM
K-RIDE Recruitment In Kannada 2026

ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಂಪನಿ (ಕರ್ನಾಟಕ) ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಬರ್ತಿಗಾಗಿ ಜನವರಿಯಲ್ಲಿ ಅಧಿಕೃತ ಅಧಿಸೂಚನೆಯೊಂದು ಇದೀಗ ಪ್ರಕಟವಾಗಿದೆ. ಆತ್ಮೀಯರೇ ಇದು ಜನರಲ್ ಮ್ಯಾನೇಜರ್ ಹುದ್ದೆಗಳಾಗಿರುವಂತದ್ದು.ಕರ್ನಾಟಕದ ಬೆಂಗಳೂರಿನಲ್ಲಿ ಸರ್ಕಾರಿ ಉದ್ಯೋಗ ಮಾಡಬೇಕೆಂದು ಬಯಸುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ನಿಗದಿಪಡಿಸಲಾದ ಅಂತಿಮ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಿ.

ಕರ್ನಾಟಕ ರಾಜ್ಯದಲ್ಲಿ ತಮ್ಮ ವಿದ್ಯಾಭ್ಯಾಸ ವನ್ನ ಮುಗಿಸಿ 2026ರಲ್ಲಿ ಆದರೂ ಒಂದು ಸರ್ಕಾರಿ ಉದ್ಯೋಗವನ್ನು ಹಿಡಿಯಬೇಕು ಕಾದು ಕುಳಿತವರು ಅದೆಷ್ಟೋ ಜನ. ಹಾಗೆ ಇನ್ನು ಕೆಲವರು ಸರ್ಕಾರಿ ಉದ್ಯೋಗಕ್ಕಾಗಿ ಎಲ್ಲೆಲ್ಲೋ ಕಷ್ಟ ಪಟ್ಟು ಹಣ ತಂದು ಕೋಚಿಂಗ್ ಸೆಂಟರ್ ಗೆ ಜಾಯಿನ್ ಆಗಿ ಸ್ಟಡಿ ಮಾಡುತ್ತಿದ್ದಾರೆ. ಇಂಥ ಒಂದು ವಿಷಯವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ನಮ್ಮ ರಾಜ್ಯದ ಯುವ ಜನತೆಗೆ ಇದೆ ರೀತಿ ಇನ್ನು ಹೆಚ್ಚಿನ ಉದ್ಯೋಗವನ್ನು ಕಲ್ಪಿಸಿ ಕೊಡಬೇಕೆನ್ನುವುದು ಪ್ರತಿಯೊಬ್ಬರ ಆಶಯವಾಗಿದೆ.

KRIDE ನೇಮಕಾತಿ 2026 :

KRIDE (ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಂಪನಿ (ಕರ್ನಾಟಕ) ಲಿಮಿಟೆಡ್) ಉದ್ಯೋಗ ಮಾಡಬೇಕು ಎನ್ನುವ ಕನಸು ನಿಮಗಿದೆಯೇ ? ಹಾಗಿದ್ದರೆ ಈ ಕೆಳಗೆ ತಿಳಿಸುವ ಮಾಹಿತಿಯನ್ನು ಸಂಪೂರ್ಣವಾಗಿ ಗಮನಿಸಿ.

KRIDE ಯಲ್ಲಿ ಒಟ್ಟು 9 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು ವಿವಿಧ ಹುದ್ದೆಗಳಿಗೆ ವಿವಿಧ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. BE/ B.Tech,ME/M.Tech, ಸ್ನಾತಕೋತ್ತರ ಪದವಿಯನ್ನು ಮುಗಿಸಿಕೊಂಡ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 70,250 ದಿಂದ ರೂ. 2,61,000/- ತಿಂಗಳ ಸಂಬಳವನ್ನು ನಿಗದಿಪಡಿಸಿದ್ದಾರೆ ಆಸಕ್ತ ಅಭ್ಯರ್ಥಿಗಳು 16-ಫೆಬ್ರವರಿ-2026 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಆತ್ಮೀಯರೇ,,, ಇದೇ ರೀತಿ ನಿಮಗೆ ದಿನೇ ದಿನೇ ಉದ್ಯೋಗ, ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ನಮ್ಮ ಉದ್ಯೋಗ ಸಲಹೆ ವೆಬ್ಸೈಟ್ ಫಾಲೋ ಮಾಡಿ.

ಹುದ್ದೆಯ ವಿವರ :-

ಹುದ್ದೆಯ ಹೆಸರುಜನರಲ್ ಮ್ಯಾನೇಜರ್ ಇತ್ಯಾದಿ ಹುದ್ದೆಗಳು
ಸಂಸ್ಥೆಯ ಹೆಸರು ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಂಪನಿ (ಕರ್ನಾಟಕ) ಲಿಮಿಟೆಡ್ (KRIDE)
ಒಟ್ಟು ಹುದ್ದೆಗಳ ಸಂಖ್ಯೆಒಟ್ಟು 09 ಹುದ್ದೆಗಳು
ನೇಮಕಾತಿ ಪ್ರಕ್ರಿಯೆ ನಡೆಯುವ ರೀತಿಆನ್ಲೈನ್ ಅರ್ಜಿ ಪ್ರಕ್ರಿಯೆ

KRIDE ಸಂಸ್ಥೆಯ ಬಗ್ಗೆ ನಿಮಗೆಷ್ಟು ಗೊತ್ತು ?

ನೋಡಿ ಸ್ನೇಹಿತರೆ ಕರ್ನಾಟಕ ರೈನ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಂಪನಿ ಲಿಮಿಟೆಡ್ ಅನ್ನ 2000 ನವೆಂಬರ್ 22 ರಲ್ಲಿ ಸ್ಥಾಪಿಸಲಾಯಿತು. ಇದು ಕರ್ನಾಟಕ ಸರ್ಕಾರ ಮತ್ತು ಭಾರತೀಯ ರೈಲುಗಳ ಸಚಿವಾಲಯದ ಸಹಯೋಗದಲ್ಲಿ ಸ್ಥಾಪಿತವಾದ ಸಂಸ್ಥೆ ಇದಾಗಿದೆ. ಇದರ ಮುಖ್ಯ ಉದ್ದೇಶ ರಾಜ್ಯದಲ್ಲಿ ರೈಲು ಮೂಲತೌಕರ್ಯ ಅಭಿವೃದ್ಧಿಯನ್ನು ಸುಗಮವಾಗಿ ಕೈಗೊಳ್ಳುವುದು. ಅಂದರೆ ಅಭಿವೃದ್ಧಿ ಮತ್ತು ಇದಕ್ಕೆ ಸಂಬಂಧಿತ ಯೋಜನೆಗಳನ್ನು ನಿರ್ವಹಿಸುವುದೇ ಈ ಸಂಸ್ಥೆಯ ಪ್ರಮುಖ ಉದ್ದೇಶವಾಗಿರುತ್ತದೆ.

ಈ ಸಂಸ್ಥೆಯಲ್ಲಿ 2026 ನೇ ಸಾಲಿನಲ್ಲಿ ಇದೆ ಮೊದಲ ಬಾರಿ ಕಾಲಿ ಇರುವ ಹುದ್ದೆಗಳ ಬರ್ತಿಗಾಗಿ ನೇಮಕಾತಿ ನಡಿತಾ ಇರುವಂತದ್ದು. ಈ ಹುದ್ದೆಗಳ ಬಗ್ಗೆ ವಯೋಮಿತಿ, ಆಯ್ಕೆ ಪ್ರಕ್ರಿಯೆ, ವೇತನ, ವಿದ್ಯಾ ಅರ್ಹತೆ, ಹೀಗೆ ಸಂಪೂರ್ಣವಾದ ಮಾಹಿತಿಯನ್ನು ನೋಡ್ತಾ ಹೋಗೋಣ ಬನ್ನಿ.

ಹುದ್ದೆಗೆ ಅರ್ಜಿ ಸಲ್ಲಿಸುವವರು ಹೊಂದಿರಬೇಕಾದ ಶೈಕ್ಷಣಿಕ ಅರ್ಹತೆಗಳೇನು?

ಈ ಹುದ್ದೆಗಳಿಗೆ ವಿವಿಧ ಮಾನದಂಡಗಳ ಅರ್ಹತೆಯನ್ನು ನೀಡಲಾಗಿದ್ದು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನ ನೀಡಲಾಗಿದೆ ಇದನ್ನು ವೀಕ್ಷಿಸಬಹುದು.

ಹುದ್ದೆಗಳ ವಿವರ :-

ಹುದ್ದೆಗಳ ಹೆಸರು ಒಟ್ಟು ಹುದ್ದೆಗಳು
ಜನರಲ್ ಮ್ಯಾನೇಜರ್ (ಸಿವಿಲ್)4 ಹುದ್ದೆಗಳು
ಜಂಟಿ ಜನರಲ್ ಮ್ಯಾನೇಜರ್1 ಹುದ್ದೆ
ಜನರಲ್ ಮ್ಯಾನೇಜರ್1 ಹುದ್ದೆ
ಮ್ಯಾನೇಜರ್ / ಡೆಪ್ಯುಟಿ ಮ್ಯಾನೇಜರ್ (ಡಿಸೈನ್)2 ಹುದ್ದೆಗಳು
ಸೀನಿಯರ್ ಡಿಜಿಎಂ / ಡಿಜಿಎಂ / ಸೀನಿಯರ್ ಮ್ಯಾನೇಜರ್1 ಹುದ್ದೆ

ವಿದ್ಯಾರ್ಹತೆ :-

  • ಜನರಲ್ ಮ್ಯಾನೇಜರ್ (ಸಿವಿಲ್) ಹುದ್ದೆಗಳಿಗೆ ಅಭ್ಯರ್ಥಿಗಳು :

1. ಸಿವಿಲ್ ಇಂಜಿನಿಯರಿಂಗ್ ನಲ್ಲಿ ಬಿಇ /ಬಿ ಟೆಕ್ ಪದವಿ ಇರಬೇಕು

2. ಮೆಟ್ರೋ ಅಥವಾ ರೈಲ್ವೆ ಕ್ಷೇತ್ರದಲ್ಲಿ ಕನಿಷ್ಠ 20 ವರ್ಷ ಅನುಭವ ಇರಬೇಕು.

  • ಜಂಟಿ ಜನರಲ್ ಮ್ಯಾನೇಜರ್ :

1. IRSME ಅಥವಾ IRSEE ಸೇವೆಯಲ್ಲಿ ಕೆಲಸ ಮಾಡಿದ ಅನುಭವ ಇವರುಗಳಿಗೆ ಅಗತ್ಯತೆ ಕನಿಷ್ಠ 8 ವರ್ಷಗಳ ಅನುಭವ ಇರಬೇಕು.

ಜನರಲ್ ಮ್ಯಾನೇಜರ್ :

1. ಎಲೆಕ್ಟ್ರಾನಿಕ್ಸ್ ಟೆಲಿ ಕಮ್ಯುನಿಕೇಶನ್ ಇಂಜಿನಿಯರಿಂಗ್ ಪದವಿ ಇರಬೇಕು.

2. ಒಟ್ಟು 20 ವರ್ಷಗಳ ಕೆಲಸದ ವಿಧವಾಗಿರಬೇಕು.

ಮ್ಯಾನೇಜರ್ / ಡೆಪ್ಯುಟಿ ಮ್ಯಾನೇಜರ್ (ಡಿಸೈನ್) :

1. ಸಿವಿಲ್ ಇಂಜಿಯರಿಂಗ್ ಅಗತ್ಯ.

2. Structural ನಲ್ಲಿ ಎಮ್ ಟೆಕ್ ಇದ್ದರೆ ಹೆಚ್ಚು ಅವಕಾಶ ದೊರೆಯುತ್ತದೆ.

3. ಹುದ್ದೆಗಳಿಗೆ ಅನುಗುಣವಾಗಿ ಐದರಿಂದ 14 ವರ್ಷಗಳ ಅನುಭವ ಇರಬೇಕು.

 ಒಟ್ಟಾರೆಯಾಗಿ ಹೇಳುವುದಾದರೆ BE/ ಬಿ ಟೆಕ್, ME/ ಎಂ ಟೆಕ್, ಸ್ನಾತಕೋತ್ತರ ಪದವಿ ಮುಗಿಸಿಕೊಂಡ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅಂತಿಮ ದಿನದೊಳಗೆ ಅರ್ಜಿಯನ್ನ ಸಲ್ಲಿಸಬಹುದು.

ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮನಸ್ಸು ನಿಮಗಿದ್ದರೆ ಈ ಕೆಳಗಿನ ವಯೋಮಿತಿಯನ್ನು ಹೊಂದಿರಬೇಕಾಗುತ್ತದೆ.

  • ಅಭ್ಯರ್ಥಿಗಳಿಗೆ ಗರಿಷ್ಠ 55 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

ವಯೋಮಿತಿ ಸಡಿಲಿಕೆ:

  • ಒಬಿಸಿ ಅಭ್ಯರ್ಥಿಗಳು
  • ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳು
  • ಪಿಡಬ್ಲ್ಯೂಡಿ ಅಭ್ಯರ್ಥಿಗಳು

ಈ ಒಂದು ಸಂಸ್ಥೆಯು ಅಭ್ಯರ್ಥಿಗಳಿಗೆ ವಯೋಮಿತಿ ತಡಿಲಿಕೆಯನ್ನು ನಿಗದಿಪಡಿಸಿದೆ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ತಿಳಿದುಕೊಳ್ಳಿ.

ವೇತನ ಶ್ರೇಣಿ :-

ಪೋಸ್ಟ್ ಹೆಸರು ವೇತನದ ವಿವರ
ಜನರಲ್ ಮ್ಯಾನೇಜರ್ಮಾಸಿಕ ಒಟ್ಟು ವೇತನ ಅಂದಾಜು ₹2,61,000/- 
ಡಿಜಿಎಂಮಾಸಿಕ ವೇತನ ₹1,47,250/-
ಸೀನಿಯರ್ ಡಿಜಿಎಂಮಾಸಿಕ ಒಟ್ಟು ವೇತನ ₹1,54,000/-
ಮ್ಯಾನೇಜರ್ಮಾಸಿಕ ವೇತನ ₹80,000/-
ಡೆಪ್ಯುಟಿ ಮ್ಯಾನೇಜರ್ ಮಾಸಿಕ ವೇತನ ₹70,250/- 
ಸೀನಿಯರ್ ಮ್ಯಾನೇಜರ್ಮಾಸಿಕ ವೇತನ ₹1,12,000/-

ಅರ್ಜಿ ಶುಲ್ಕ:

  • ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ನಿಗದಿಪಡಿಸಿಲ್ಲ ಅಧಿಕೃತ ಅಧಿಸೂಚನೆಯಲ್ಲಿ ಏನಾದರೂ ಅರ್ಜಿ ಶುಲ್ಕವಿದ್ದರೆ ಪಾವತಿ ಮಾಡಿ.

ಅಗತ್ಯ ದಾಖಲೆಗಳು:

ಸಾಮಾನ್ಯ ನಿಯಮಗಳ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಎಲ್ಲ ದಾಖಲೆಗಳನ್ನು ಹೊಂದಿರುವುದು ಅಗತ್ಯ.

  • ಶೈಕ್ಷಣಿಕ ಪ್ರಮಾಣಪತ್ರ
  • ಅಂಕಪಟ್ಟಿ
  • ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ
  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ಓಟರ್ ಐಡಿ
  • ಜಾತಿ ಮತ್ತು ಆದಾಯ ಪ್ರಮಾಣಪತ್ರ

ಆಯ್ಕೆ ಪ್ರಕ್ರಿಯೆ:

  • ಈ ಸಂಸ್ಥೆಯಲ್ಲಿ ನೀವು ಉದ್ಯೋಗವನ್ನು ಪಡೆಯಬೇಕಾದರೆ ನಿಮ್ಮನ್ನ ಸಂದರ್ಶನಕ್ಕೆ ಒಳಪಡಿಸಿಕೊಳ್ಳುತ್ತಾರೆ.

ಅರ್ಜಿ ಸಲ್ಲಿಸುವ ವಿಧಾನ:

  • ಅಭ್ಯರ್ಥಿಗಳು ಮೊದಲು ಕೆ-ರೈಡ್ ಅಧಿಕೃತ ವೆಬ್‌ಸೈಟ್ https://kride.in ಗೆ ಭೇಟಿ ನೀಡಿ.
  • ವೆಬ್‌ಸೈಟ್‌ನಲ್ಲಿರುವ ‘Careers’ ಭಾಗದ ಮೇಲೆ ಪ್ರೆಸ್ ಮಾಡಿ.
  • ಈಗ ಇರುವ “Notification No: K-RIDE/HR/195/Vacancy Notification/02/2026”  ಅಧಿಕೃತ ಅಧಿಸೂಚನೆಯನ್ನು ಮೊದಲು ಗಮನಿಸಿ.
  • ಅರ್ಜಿಯನ್ನು ಅಭ್ಯರ್ಥಿಗಳು ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನ ಸ್ಪಷ್ಟವಾಗಿ ಓದಿ ಆನಂತರ ನಿಮ್ಮಲ್ಲಿ ಇರುವ ಅರ್ಹತೆಗಳ ಬಗ್ಗೆ ತಿಳಿದುಕೊಳ್ಳಿ.
  • ಆನ್ಲೈನ್ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ ವೈಯಕ್ತಿಕ ಮತ್ತು ವೃತ್ತಿಪರ ವಿವರವನ್ನು ಸರಿಯಾಗಿ ವರ್ತಿ ಮಾಡಿ ನಂತರ ವಿದ್ಯಾರ್ಹತೆ ಪ್ರಮಾಣ ಪತ್ರ ಅನುಭವದ ಪತ್ರ ಇತ್ಯಾದಿ ದಾಖಲೆಗಳನ್ನು ಸ್ಕ್ಯಾನ್ ಮಾಡಿಟ್ಟುಕೊಂಡು ಅಪ್ಲೋಡ್ ಮಾಡಿ
  • ಸಲ್ಲಿಸಿರುವ ಎಲ್ಲಾ ವಿವರಗಳು ಸರಿ ಇದೆಯೇ ಎಂದು ಪರಿಶೀಲಿಸಿ ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
  • ಭವಿಷ್ಯದ ಉಲ್ಲೇಖಕ್ಕಾಗಿ ಬಂದು ಹಾರ್ಡ್ ಪ್ರತಿಯನ್ನ ತೆಗೆದಿಟ್ಟುಕೊಳ್ಳಿ.

ಪ್ರಮುಖ ದಿನಾಂಕಗಳು:

ಆಫ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ16-01-2026
ಆಫ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ16-ಫೆಬ್ರವರಿ-2026

ಅಧಿಸೂಚನೆ ಪ್ರಮುಖ ಲಿಂಕ್‌ಗಳು

ಅಧಿಕೃತ ಅಧಿಸೂಚನೆ PDF ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್kride.in

ತೀರ್ಮಾನ:

ರೈಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಂಪನಿ (ಕರ್ನಾಟಕ) ಲಿಮಿಟೆಡ್ (KRIDE)

ಇತರೆ ಪ್ರಮುಖ ಲಿಂಕ್ ಗಳು:


Join WhatsApp

Join Now

Join Telegram

Join Now

Leave a Comment