ST Interest Subsidy : ರೂ 1 ಕೋಟಿ ಸಹಾಯಧನ : ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಭರ್ಜರಿ ಯೋಜನೆ! ಅರ್ಜಿ ಸಲ್ಲಿಕೆ ಹೇಗೆ?

On: Monday, January 19, 2026 12:15 PM
Interest Subsidy Scheme for ST Entrepreneurs

Join WhatsApp

Join Now

Join Telegram

Join Now

ಎಲ್ಲರಿಗೂ ನಮಸ್ಕಾರ,,, ಪರಿಶಿಷ್ಟ ಪಂಗಡದ ಯುವ ಉದ್ಯಮಿಗಳಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್, ನಿಮ್ಮ ಕನಸಿನ ಸ್ವಂತ ಉದ್ಯಮವನ್ನು ಇದೀಗ ಕರ್ನಾಟಕದಲ್ಲಿ ಶುರು ಮಾಡಲು ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಯ ಜಾರಿಗೊಳಿಸಿದ್ದು, 1 ಕೋಟಿ ವರೆಗಿನ ಸಾಲಕ್ಕೆ ಕೇವಲ 4 ಪರ್ಸೆಂಟ್ ಬಡ್ಡಿ ಮಾತ್ರ. ಉಳಿದ ಬಡ್ಡಿಯನ್ನು ಸರ್ಕಾರವೇ ತುಂಬುತ್ತದೆ.

ಕೈಗಾರಿಕೆ, ಐಟಿ ,ಆರೋಗ್ಯ, ಪ್ರವಾಸೋದ್ಯಮ ಹೀಗೆ ಯಾವುದೇ ಕ್ಷೇತ್ರದಲ್ಲಿ ನೀವು ನವ ಉದ್ಯಮವನ್ನು ಶುರು ಮಾಡಲು ಸುವರ್ಣ ಅವಕಾಶ.

Interest Subsidy Scheme for ST Entrepreneurs

ತುಂಬಾ ಜನ ಒಂದು ಸ್ವಂತ ಉದ್ಯಮವನ್ನು ಶುರು ಮಾಡಿ ಅದರಿಂದ ಒಳ್ಳೆಯ ಲಾಭಗಳಿಸಿ, ಜೀವನವನ್ನ ಸೆಟಲ್ ಮಾಡಿಕೊಳ್ಳಬೇಕು ಅಂತ ಕಾಯುತ್ತಿರುತ್ತಾರೆ ಆದರೆ ಇವರಿಗೆ ಬಿಸಿನೆಸ್ ಮಾಡೋದಕ್ಕೆ ಬಂಡವಾಳದ ಸಮಸ್ಯೆಯಿಂದಾಗಿ ಯಾವುದೇ ಒಂದು ಬಿಸಿನೆಸ್ ಅನ್ನ ಶುರು ಮಾಡುವುದಕ್ಕೆ ತುಂಬಾನೇ ಕಷ್ಟ ಪಡುತ್ತಿರುತ್ತಾರೆ ಹಾಗಾಗಿ ಇದೀಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಸರ್ಕಾರದ ವತಿಯಿಂದ ಸಾಕಷ್ಟು ಸಾಲ ಸೌಲಭ್ಯ ದೊರಕುತ್ತಿದ್ದು ಈ ಯೋಜನೆಯ ಮೂಲಕ ನೀವು ಸಾಲ ಸೌಲಭ್ಯವನ್ನು ಪಡೆದು ಸ್ವಂತ ಉದ್ಯಮವನ್ನು ಶುರು ಮಾಡಬಹುದು ಅದು ಕೂಡ ಕಡಿಮೆ ಬಡ್ಡಿ ದರದಲ್ಲಿ.

ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಬಡ್ಡಿ ಸಹಾಯಧನ ಯೋಜನೆ:

ಸರ್ಕಾರದಿಂದ ಕೋಟಿಗಟ್ಟಲೆ ಸಾಲ ನಿಮಗೆ ಸಿಗುತ್ತಿದೆ ಈ ಸಾಲವನ್ನು ಯಾವ ರೀತಿ ಪಡೆದುಕೊಳ್ಳಲು ಪಡೆದುಕೊಳ್ಳುವುದು ಹಾಗೂ ಇದಕ್ಕೆ ಬೇಕಾಗಿರುವ ಅಗತ್ಯ ದಾಖಲೆಗಳು ಯಾವುವು ಅರ್ಜಿ ಸಲ್ಲಿಸುವ ವಿಧಾನ ಹೇಗೆ ಯಾವ ರೀತಿಯಾದ ಬಡ್ಡಿದರವನ್ನು ವಿಧಿಸುತ್ತಾರೆ ಎಂದು ಬಡ್ಡಿ ಸಹಾಯಧನ ಯೋಜನೆ ಎಲ್ಲಾ ಮಾಹಿತಿಯನ್ನು ಕೆಳಗೆ ತಿಳಿಸಿಕೊಡುತ್ತೇವೆ ಎಲ್ಲ ಮಾಹಿತಿನ ಓದಿಕೊಂಡು ನೀವು ಸಹ ಅರ್ಜಿಯನ್ನು ಸಲ್ಲಿಸಬಹುದು.

ಯೋಜನೆಯ ಮುಖ್ಯ ಉದ್ದೇಶವೇನು?

ಈ ಯೋಜನೆಯಿಂದ ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಕೈಗೆಟುವ ದರದಲ್ಲಿ ಬಂಡವಾಳವನ್ನು ಒದಗಿಸುವುದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಪ್ರೋತ್ಸಾಹಿಸುವುದು ಮತ್ತು ಸೇವಾ ವಲಯಗಳಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಅಷ್ಟೇ ಅಲ್ಲದೆ ಇನ್ನು ನವ ಉದ್ಯಮಿಗಳಿಗೆ ಈ ಒಂದು ಯೋಜನೆಯ ಮೂಲಕ ಸಾಕಷ್ಟು ಪ್ರಯೋಜನವಾಗಲು ಸರಕಾರ ಇಂತಹ ಯೋಜನೆಯನ್ನು ಜಾರಿಗೆ ತಂದಿದೆ.


ಬಡ್ಡಿ ಸಹಾಯಧನ ಯೋಜನೆಯ ಅಂದ್ರೆ ಏನು?

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಪರಿಶಿಷ್ಟ ಪಂಗಡದ ನವ ಉದ್ಯಮಿಗಳಿಗೆ ಆರ್ಥಿಕವಾಗಿ ಸಬಲೀಕರಣಕ್ಕಾಗಿ ಸರ್ಕಾರದ ವತಿಯಿಂದ ಕಡಿಮೆ ಬಡ್ಡಿ ದರದಲ್ಲಿ ಸಹಾಯಧನವನ್ನು ನೀಡಲಾಗುತ್ತಿದೆ. ನವ ಉದ್ಯಮ ಶುರು ಮಾಡಬೇಕು ಎಂದು ಕನಸು ಕಂಡವರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಹಣಕಾಸು ನೆರವನ್ನ ಒದಗಿಸುವಂತಹ ಮುಖ್ಯ ಉದ್ದೇಶವನ್ನು ಹೊಂದಿದೆ.

1 ಕೋಟಿಯವರೆಗಿನ ಸಾಲಕ್ಕೆ ಕೇವಲ 4 ಪರ್ಸೆಂಟ್ ಬಡ್ಡಿ ಹಾಕಲಾಗುತ್ತದೆ ಇನ್ನೂ ಉಳಿದ ಬಡ್ಡಿಯನ್ನು ಸರ್ಕಾರವೇ ಬರಿಸುತ್ತದೆ ಪರಿಶಿಷ್ಟ ಪಂಗಡದ ಸಮುದಾಯದವರೆ ಆಗಿರಬೇಕು ಎಂಬ ಷರತ್ತಿನೊಂದಿಗೆ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದು ಸಾಲವನ್ನು ಪಡೆದ 5 ವರ್ಷಗಳ ಅವಧಿಯಲ್ಲಿ ಮರುಪಾವತಿಸಲು ಅವಕಾಶವಿರುತ್ತದೆ ಇದು ಪರಿಶಿಷ್ಟ ಪಂಗಡದ ಸಮುದಾಯದ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಅಂತಾನೆ ಹೇಳಬಹುದು.

ಯಾವೆಲ್ಲಾ ಉದ್ಯಮಗಳಿಗೆ ಸಾಲ ಸಿಗುತ್ತದೆ?

ಯಾವೆಲ್ಲ ಉದ್ಯಮಗಳಿಗೆ ಸಾಲ ಸೌಲಭ್ಯಗಳು ಸಿಗುತ್ತದೆ ಅನ್ನುವಂತ ಮಾಹಿತಿಯನ್ನು ಈ ಕೆಳಗೆ ಸಂಪೂರ್ಣವಾಗಿ ನೀಡಲಾಗಿದ್ದು , ಬೇರೆ ಬೇರೆ ಉದ್ಯಮಗಳಿಗೆ ಈ ಯೋಜನೆಯ ಲಾಭವನ್ನು ಬಳಸಿಕೊಂಡು ಉದ್ಯಮವನ್ನ ಇನ್ನಷ್ಟು ಎತ್ತರಕ್ಕೆ ಬೆಳೆಸಬಹುದು ಹಾಗೂ ಈ ಯೋಜನೆಯಿಂದ ಬಂದಿರುವಂತಹ ಹಣದಿಂದ ಹೊಸ ಉದ್ಯಮವನ್ನು ಸಹ ಶುರು ಮಾಡಬಹುದು ಇದರ ಕೆಳಗೆ ಇದರ ಬಗ್ಗೆ ಈ ಕೆಳಗೆ ಸಂಪೂರ್ಣವಾದ ಮಾಹಿತಿಯನ್ನು ನೋಡಿ.

ಕೈಗಾರಿಕಾ ವಲಯ ಮತ್ತು ಉತ್ಪಾದನೆಯ ಭರವಸೆ:

ಹೌದು ಈ ಕ್ಷೇತ್ರದಲ್ಲಿ ನಿಮ್ಮ ಸ್ವಂತ ಘಟಕವನ್ನು ಸ್ಥಾಪಿಸಲು ಸ್ವಾವಲಂಬಿ ಜೀವನವನ್ನು ಸ್ಥಾಪಿಸಿ ಆರಂಭಿಕ ಜೀವನವನ್ನು ನಡೆಸಲು ಆಹಾರ ಸಂಸ್ಕರಣ ಘಟಕ ಸೇರಿದಂತೆ ಜವಳಿ ಮತ್ತು ಸಿದ್ಧ ಉಡುಪುಗಳ ತಯಾರಿಕ ಘಟಕಗಳು ಇಂಜಿನಿಯರಿಂಗ್ ವರ್ಕ್ ಶಾಪ್ಗಳು ಸೇರಿದಂತೆ ಆಟೋಮೊಬೈಲ್ ಬಿಡಿ ಭಾಗಗಳ ತಯಾರಿಕೆಯನ್ನು ಮಾಡಬಹುದು.

ಪ್ರವಾಸೋದ್ಯಮ ಮತ್ತು ಆಥಿತ್ಯ ಕೇಂದ್ರಗಳು :

ಹೋಟೆಲ್ ಗಳು ರೆಸಾರ್ಟ್ಗಳು ಸೇರಿದಂತೆ ರೆಸ್ಟೋರೆಂಟ್ಗಳು ಕ್ಯಾಟರಿಂಗ್ ಸೇವೆಗಳು ಮತ್ತು ಆಹಾರ ಉದ್ಯಮ ವಿನೋದ ಉದ್ಯಾನಗಳು ಮತ್ತು ಪ್ರವಾಸಿ ಏಜೆನ್ಸಿಗಳನ್ನ ಶುರು ಮಾಡುವವರಿಗೆ ಈ ಒಂದು ಸಾಲ ಸೌಲಭ್ಯ ಸಿಗಲಿದೆ.

ಆರೋಗ್ಯ ಸೇವೆಗಳು ಮತ್ತು ಸಮಾಜ ಸೇವೆಯ ಲಾಭದಾಯಕ ವ್ಯವಸ್ಥೆ:

ಉತ್ತಮ ಆದಾಯವನ್ನು ಗಳಿಸಿಕೊಳ್ಳಲು ಸುಸಜ್ಜಿತ ಆಸ್ಪತ್ರೆಗಳು ಸೇರಿದಂತೆ ನರ್ಸಿಂಗ್ ಹೋಮ್ ಗಳು ಎಕ್ಸರೇ ಸ್ಕ್ಯಾನಿಂಗ್ ಲ್ಯಾಬ್ ಸಹಿತ ಡಯಾಗ್ನೋಸ್ಟಿಕ್ ಸೆಂಟರ್ ಗಳನ್ನ ಹಾಗೂ ದಂತ ಚಿಕಿತ್ಸಾಲಯ ಕಣ್ಣಿನ ಆಸ್ಪತ್ರೆಗಳು ಆಧುನಿಕ ವೈದ್ಯಕೀಯ ಉಪಕರಣಗಳನ್ನು ಖರೀದಿ ಮಾಡುವುದಕ್ಕೆ ಈ ಧನ ಸಹಾಯವನ್ನು ಉಪಯೋಗಿಸಿಕೊಳ್ಳಬಹುದು.

ಐಟಿ ಮತ್ತು ಸೇವಾ ವಲಯ ವ್ಯಾಪಾರ ಮತ್ತು ವಾಣಿಜ್ಯ ಸಂಸ್ಥೆಗಳಿಗೆ:

ತಂತ್ರಜ್ಞಾನದ ಜಗತ್ತಿನಲ್ಲಿ ನಿಮ್ಮ ಸ್ಥಾನ ಗಟ್ಟಿಗೊಳಿಸಲು ಇದೊಂದು ಸುವರ್ಣ ಅವಕಾಶ ಸಾಫ್ಟ್ವೇರ್ ಅಭಿವೃದ್ಧಿ ಕೇಂದ್ರಗಳು ಸೇರಿದಂತೆ ಐಟಿ ಆಧಾರಿತ ವಿವಿಧ ಸೇವಾ ಕಂಪನಿಗಳು ಇವೆಂಟ್ ಮ್ಯಾನೇಜ್ಮೆಂಟ್ ರಿಯಲ್ ಅಂಗಡಿ ರಿಟೇಲ್ ಅಂಗಡಿ ಸ್ವಂತ ಫ್ರಾಂಚೈಸ್ ಅಪರ್ಚುನಿಟಿ ಡೀಲರ್ ಶಿಪ್ ಆಪರ್ಚುನಿಟಿ ಹೋಟೆಲ್ ಸೇರಿದಂತೆ ಇನ್ನಿತರ ಉದ್ಯಮವನ್ನು ಶುರು ಮಾಡಲು ಈ ಹಣ ನೆರವಾಗುತ್ತಿದೆ.

ಯೋಜನೆಯ ಪ್ರಯೋಜನಗಳು :

ಈ ಯೋಜನೆಯ ಹಲವಾರು ಪ್ರಯೋಜನಗಳನ್ನು ಹೊಂದಿದ್ದು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನ ಸುಲಭ ರೀತಿಯಲ್ಲಿ ಸಿಗುವಂತೆ ಮಾಡುವುದು

ಗರಿಷ್ಠ ಸಾಲದ ಮಿತಿ ಹೌದು ನವ ಉದ್ಯಾಮ ಸ್ಥಾಪನೆಯನ್ನು ಮಾಡಲು ಹಾಗೂ ವಿಸ್ತರಣೆಯನ್ನು ಮಾಡಲು ಒಂದು ಕೋಟಿಯವರೆಗೆ ಸಾಲ ಸೌಲಭ್ಯವನ್ನು ಪಡೆಯುವ ಅವಕಾಶ ಇಲ್ಲಿದೆ

ಸಾಲ ಒದಗಿಸುವ ಹಣಕಾಸು ಸಂಸ್ಥೆಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಉದ್ಯಮಿಗಳಿಗೆ ಸರ್ಕಾರದಿಂದ ಹಣಕಾಸು ಸಂಸ್ಥೆ ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕುಗಳು ಸೇರಿದಂತೆ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕುಗಳು ಅಥವಾ ಅಪೆಕ್ಸ್ ಸಹಕಾರಿ ಬ್ಯಾಂಕುಗಳಿಂದ ನೀವು ಸಾಲ ಸೌಲಭ್ಯವನ್ನು ಈ ಯೋಜನೆಯ ಮೂಲಕ ಪಡೆಯಬಹುದಾಗಿದೆ

ಸರಳ ಸಾಲ ಮರುಪಾವತಿಗೆ ಕಾಲಾವಕಾಶ ಹೌದು ನೀವು ಪಡೆದಿರುವಂತಹ ಸಾಲವನ್ನು ಸರಳವಾಗಿ ಅಂದರೆ ಸುಲಭವಾಗಿ ಐದು ವರ್ಷಗಳ ಕಾಲಾವಧಿಯ ಒಳಗಡೆ ಸಾಲಮನ್ನಾ ಮರುಪಾವತಿ ಮಾಡಲು ಅವಕಾಶ ಇರುತ್ತದೆ ಅಷ್ಟೇ ಅಲ್ಲದೆ ಇನ್ನ ಸಾಕಷ್ಟು ಪ್ರಯೋಜನಗಳು ಕೂಡ ಈ ಒಂದು ಯೋಜನೆಯ ಮೂಲಕ ಪಡೆದುಕೊಳ್ಳಬಹುದು

ಈ ಯೋಜನೆಗೆ ಅರ್ಹತಾ ಮಾನದಂಡಗಳು:

  • ಅರ್ಜಿದಾರರು ಈ ಹಿಂದೆ ಕರ್ನಾಟಕದ ಯಾವುದೇ ಹಣಕಾಸು ಸಂಸ್ಥೆಗಳಲ್ಲಿ ಅಥವಾ ಬ್ಯಾಂಕುಗಳಲ್ಲಿ ಸಾಲವನ್ನು ಪಡೆದು ಮರುಪಾವತಿ ಮಾಡದೆ ಸುಸ್ತಿದಾರರಾಗಿರಬಾರದು
  • ಉದ್ಯಮವು ಸಂಪೂರ್ಣವಾಗಿ ಪರಿಶಿಷ್ಟ ಪಂಗಡದ ವ್ಯಕ್ತಿಗಳ ಮಾಲೀಕತ್ವದಲ್ಲಿರಬೇಕು ಅಂದರೆ ಪಾಲುದಾರಿಕೆ ಸಂಸ್ಥೆಯಾಗಿದ್ದರೆ ಎಲ್ಲಾ ಪಾಲುದಾರರು ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸೇರಿದವರಾಗಿದ್ದರೆ ಮಾತ್ರ ಅರ್ಹತೆಯನ್ನು ಪಡೆಯುತ್ತಾರೆ
  • ಈ ಹಿಂದೆ ರಾಜ್ಯ ಸರ್ಕಾರದಿಂದ ಅಥವಾ ಕೇಂದ್ರ ಸರ್ಕಾರದಿಂದ ಯಾವುದೇ ಬಡ್ಡಿ ಸಹಾಯಧನ ಯೋಜನೆ ಇಡೀ ಪ್ರಯೋಜನವನ್ನು ಪಡೆದಿರಬಾರದು

ಬೇಕಾಗುವ ಅಗತ್ಯ ದಾಖಲೆಗಳು:

  • ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಇತ್ತೀಚಿಗಿನ ಭಾವಚಿತ್ರ
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆಯ ವಿವರಗಳು
  • ಪ್ರಸ್ತುತ ಉದ್ಯಮದಲ್ಲಿ ಇರುವಂತ ಹಣಕಾಸಿನ ವರದಿಗಳು
  • ಯೋಜನಾ ವರದಿಗಳು
  • ಬಯೋಡೇಟಾ
  • ಆಧಾರ್ ಕಾರ್ಡ್

ಅರ್ಜಿ ಸಲ್ಲಿಸುವುದು ಹೇಗೆ :

ನಿಮ್ಮ ಹತ್ತಿರದ ಸಹಕಾರಿ ಬ್ಯಾಂಕ್ ಅಥವಾ ರಾಷ್ಟ್ರಕೃತ ಬ್ಯಾಂಕುಗಳಲ್ಲಿ ಭೇಟಿ ನೀಡಿ ಬ್ಯಾಂಕುಗಳಿಗೆ ಭೇಟಿ ನೀಡಿ ಈ ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದು ಹಾಗೂ ನೀವು ಶುರು ಮಾಡುತ್ತಿರುವ ನಮ್ಮ ಉದ್ಯಮದ ಬಗ್ಗೆ ಬ್ಯಾಂಕಿನ ಸಿಬ್ಬಂದಿಗೆ ಮಾಹಿತಿಯನ್ನು ನೀಡಿ ಜಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಯೋಜನೆಯ ಲಾಭವನ್ನು ಪಡೆಯಬಹುದು


ಪ್ರಮುಖ ಲಿಂಕುಗಳು:

ಅಧಿಕೃತ ವೆಬ್ಸೈಟ್ ಲಿಂಕು:- ಇಲ್ಲಿ ಕ್ಲಿಕ್ ಮಾಡಿ
ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಲಿಂಕು ಇಲ್ಲಿ ಕ್ಲಿಕ್ ಮಾಡಿ

ಗಮನಿಸಿ:-

ಈ ಯೋಜನೆಯ ಲಾಭವನ್ನು ಪಡೆಯಲು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಾಗಿದ್ದಲ್ಲಿ ಮಾತ್ರ ಈ ಯೋಜನೆಗೆ ಅರ್ಹತೆಯನ್ನು ಪಡೆಯುತ್ತಾರೆ ಇನ್ನುಳಿದ ವರ್ಗದ ಅಭ್ಯರ್ಥಿಗಳಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ

ಹೆಚ್ಚಿನ ಮಾಹಿತಿಗೆ ಸಹಾಯವಾಣಿ :

ಹೆಚ್ಚಿನ ಮಾಹಿತಿಗಾಗಿ ಹಾಗೂ ನಿಮಗೆ ಯಾವುದೇ ಸಂದೇಹವಿದ್ದಲ್ಲಿ ನಿಮ್ಮ ಜಿಲ್ಲೆಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದು ಸಹಾಯವಾಣಿ ಸಂಖ್ಯೆ 080-22261703

ಅಂತಿಮ ಮಾತು:

ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಈ ಒಂದು ಯೋಜನೆಯ ಲಾಭ ಸಿಗಲಿದ್ದು ಹೆಚ್ಚಿನ ಮಾಹಿತಿಗಾಗಿ ಅಥವಾ ಯಾವುದೇ ಸಂಶಯವಿದ್ದಲ್ಲಿ ನಿಮ್ಮ ಜಿಲ್ಲೆಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿಗೆ ಭೇಟಿ ನೀಡಬಹುದು ಅಥವಾ ಈ ಮೇಲೆ ಕೊಟ್ಟಿರುವಂತಹ ಸಹಾಯವಾಣಿ ನಂಬರಿಗೆ ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನು ತೆಗೆದುಕೊಂಡು ಈ ಯೋಜನೆಯ ಲಾಭವನ್ನು ಪಡೆಯಬಹುದು

ಇದನ್ನು ಓದಿರಿ :- Dairy Shed Subsidy


Join WhatsApp

Join Now

Join Telegram

Join Now

Leave a Comment