ನಮಸ್ಕಾರ ಸ್ನೇಹಿತರೆ, ನಮ್ಮ ದೇಶದ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆಯನ್ನು ಜಾರಿಗೆ ತಂದಿದೆ ಮತ್ತು ಅವುಗಳು ಯಶಸ್ವಿ ಯುತವಾಗಿ ಸಾಗುತ್ತಿವೆ ಹಾಗೆ 2026ರ ಸಾಲಿನಲ್ಲಿ ಸರ್ಕಾರದಿಂದ ಕೆಲವು ಪ್ರಮುಖ ಸೌಲಭ್ಯಗಳು ಲಭ್ಯವಿವೆ ಅವುಗಳಬಗ್ಗೆ ಈ ಕೆಳಗಿನ ಮಾಹಿತಿಯಲ್ಲಿ ನೀಡಲಾಗಿದ್ದು ಅಭ್ಯರ್ಥಿಗಳು ಎಲ್ಲ ಮಾಹಿತಿಯನ್ನು ಓದಿಕೊಂಡು ಇಂದೇ ಆನ್ಲೈನ್ ಅಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
Pradhan Mantri Matsya Sampada Yojana In Kannada
ನಾವು ಯಾವುದಾರೂ ಒಂದು ಉದ್ಯೋಗ ಮಾಡಬೇಕು ಆದರೆ ನಮ್ಮ ಬಳಿ ಯಾವುದೇ ಹಣವಿಲ್ಲ ಎಂಬ ಚಿಂತೆ ನಿಮಗಿದೆಯೇ ? ಆ ಚಿಂತೆ ಇಂದ ಮುಕ್ತಿ ಬೇಕಾ ಹಾಗಾದ್ರೆ ಇಲ್ಲಿ ನೋಡಿ. ಸರ್ಕಾರ ನಿಮಗೊಂದು ಸಿಹಿ ಸುದ್ದಿನೀಡಿದೆ.
ಕೇಂದ್ರ ಸರ್ಕಾರ ಹೊಸ ವರ್ಷದಿಂದ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಹಾಗಿದ್ರೆ ಇದು ಯಾವ ಯೋಜನೆ? ಇದರಿಂದ ನಿಮಗೆ ಅನುಕೂಲವಾಗುತ್ತದೆಯೇ? ನೀವು ಅರ್ಜಿ ಸಲ್ಲಿಸಬಹುದೇ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳೋಣ ಬನ್ನಿ.
ಗ್ರಾಮೀಣ ಭಾಗದ ಜನರಿಗೆ ಯಾವದೇ ವಿದ್ಯಾಭ್ಯಾಸ ಇಲ್ಲ ನಾವು ಮುಂದೆ ಏನು ಮಾಡಬೇಕು ಎಂದು ತಲೆ ಕೆಡಿಸಿಕೊಂಡಿದೀರಾ? ಆ ಯೋಚನೆಯನ್ನು ನಿಮ್ಮ ತಲೆಯಿಂದ ತೆಗೆದು ಈಗ ಹಾಕಿ ಹೌದು ನಮ್ಮ ಸರ್ಕಾರ ಮತ್ಸ್ಯ ಸಂಪದ ಯೋಜನೆಯ ಮೂಲಕ ಉಚಿತವಾಗಿ ಮೀನು ಮತ್ತು ಆಹಾರವನ್ನು ಸಹ ಕೊಡಲು ನಿರ್ಧರಿಸಿದೆ.
ಸಂಪೂರ್ಣ ಮಾಹಿತಿ :-
ಭಾರತದಲ್ಲಿ ಮೀನುಗಾರಿಕೆ ಮತ್ತು ಮೀನು ಕೃಷಿಯನ್ನು ಉತ್ತೇಜಿಸಲು ಮತ್ತು ಯುವಕ ಯುವತಿಯರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಇಂದಿಂದ ಅರ್ಜಿಸನ್ನು ಬಿಡುಗಡೆ ಮಾಡಿದೆ ನೀವು ಇದರ ಲಾಭ ಪಡೆಯಬೇಕೆ ಹಾಗಾದ್ರೆ ಇಂದೇ ಹೋಗಿ ಅರ್ಜಿಸಲ್ಲಿ ನೀವು ಸದುಪಯೋಗ ಪಡಿಸಿಕೊಳ್ಳಿ. ನೀವು ಅರ್ಜಿ ಹಾಕಿದ್ದಲ್ಲಿ ಕಂಡಿತಾ ನಿಮಗೂ ಸಿಕ್ಕೇ ಸಿಗುತ್ತದೆ.
ಹಲವಾರು ಜನ ರೈತರು ಕೃಷಿಯಲ್ಲಿ ಉತ್ತಮ ಬೆಳೆಯನ್ನು ಬೆಳೆದು ಆರ್ಥಿಕವಾಗಿ ಸದೃಢರಾದರು ಸಹ ಅದೆಷ್ಟೋ ಜನ ರೈತರು ಕೃಷಿ ಮಾಡಿಕೊಂಡು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ ಇಂಥಹ ರೈತರು ಮಿಶ್ರ ಕೃಷಿ ಮಾಡಿ ಸಾಲದ ಸುಳಿಯಿಂದ ಆಚೆ ಬರಬಹುದು ಅದಕ್ಕೆ ಹನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಸರ್ಕಾರ ಜಾರಿಗೆ ತಂದಿರುವ ಹೊಸ ಯೋಜನೆ ಇದಾಗಿದೆ.
ಈ ಒಂದು ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ನಮ್ಮ ಉದ್ಯೋಗ https://udyogasalahe.in/ ಗೆ ಸಲಹೆ ವೆಬ್ ಸೈಟ್ ಗೆ ಭೇಟಿ ನೀಡಿ. ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಹ ಅರ್ಜಿದಾರರು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಯೋಜನೆಯ “ಉದ್ದೇಶ, ಯೋಜನೆಯ ಪ್ರಯೋಜನ, ಅಗತ್ಯ ದಾಖಲೆಗಳು” ಇನ್ನಷ್ಟು ಮಾಹಿತಿಯನ್ನು ಕೆಳಗಿನ ಹಂತದಲ್ಲಿ ನೀಡಿದ್ದು ಅದನ್ನು ಓದಿಕೊಂಡು ಅರ್ಜಿ ಸಲ್ಲಿಸಿ. ಇಂತಹ ಅಧ್ಭುತ ಯೋಜನೆಯ ಲಾಭ ಪಡೆದುಕೊಳ್ಳಿ
ಏನಿದು ಮತ್ಸ್ಯ ಸಂಪದ ಯೋಜನೆ?
ಭಾರತ ಸರ್ಕಾರದ ಮೀನುಗಾರಿಕೆ ಮತ್ತು ಹೈನುಗಾರಿಕೆ ಸಚಿವಾಲಯವು ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಜಾರಿಗೊಳಿಸಿದ್ದು ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸುವ ಮೂಲಕ ನಿಲಿಕ್ರಾಂತಿ ಯನ್ನು ತರುವ ಹಿನ್ನೆಲೆ ಈ ಯೋಜನರೆಯನ್ನು ಅನುಷ್ಠಾನಗೊಳಿಸು ಗೊಳಿಸಲಾಗಿದೆ.ಈ ಯೋಜನೆಯು ಮೊದಲು 2020 ರಲ್ಲಿ ಪ್ರಾರಂಭವಾಗಿದ್ದು ಸತತವಾಗಿ 5 ವರ್ಷ ಪೂರ್ಣಗೊಳಿಸಿದೆ ಸರ್ಕಾರ 2026 ರಲ್ಲಿ ಈ ಯೋಜನೆಯ ಸಬ್ಸಿಡಿಯಲ್ಲಿ ಹೊಸ ಬದಲಾವಣೆ ತಂದಿದೆ
ಈ ಯೋಜನೆಯ ಉದ್ದೇಶ:-
ರೈತರಿಗೆ ಉಪಯೋಗವಾಗುವಂತಹ ಪಶು ಸಂಗೋಪನೆ ಬೆಳೆ ವಿಮೆ P M ಕಿಸಾನ್ ಹೀಗೆ ರೈತರ ಜೀವನವನ್ನು ಉದ್ಧಾರಮಾಡುವುದಕ್ಕಾಗಿ ರೈತರಿಗೆ ತಮ್ಮ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಹಾಗೆ ನಮ್ಮ ಮೀನುಗಾರರಿಗೂ ಸಹ ಪ್ರೋತ್ಸಾಹ ನೀಡಬೇಕು ಅ ಅವರ ಜೀವನವನ್ನು ಉತ್ತಮಗೊಳಿಸಬೇಕು ಎಂಬ ಸರ್ಕಾರದ ಈ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ
ಕರ್ನಾಟಕದ ರೈತರು ಕೃಷಿಯನ್ನು ಮಾತ್ರ ನಂಬಿಕೊಂಡು ಜೀವನವನ್ನು ಮಾಡಬಾರದು ಎಂದು ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಈ ಯೋಜನೆಯ ಮೂಲಕ ಅದೆಷ್ಟೋ ರೈತರು ಆರ್ಥಿಕವಾಗಿ ಸದೃಢರಾಗಲು ಸಹಾಯವಾಗುತ್ತದೆ. ತಮ್ಮ ಸ್ವಂತ ಜಮೀನಿನಲ್ಲೇ ಕೆರೆ ಕೊಳವೆ ಬಾವಿಗಳು ಇದ್ದರು ಇದನ್ನು ಉಪಯೋಗಿಸಿ ಕೊಳ್ಳದೆ ಉದ್ಯೋಗಾಗಿ ಹುಡುಕುತ್ತಾ ಇರುತ್ತಾರೆ ಅಂತವರು ಈ ಯೋಜನೆಯನ್ನು ಬಳಸಿಕೊಂಡು ಲಕ್ಷ ಲಕ್ಷ ಆದಾಯವನ್ನು ಗಳಿಸಿ ತಮ್ಮ ಕುಟುಂಬವನ್ನು ಸದೃಢರಾಗಿಸಿಕೊಳ್ಳಲು ಉತ್ತಮ ಯೋಜನೆಯಾಗಿದೆ
- ಮೀನುಗಾರರ ಮತ್ತು ಮೀನುಗಾರಿಕೆ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದು
- ಮೀನು ಉತ್ಪಾದನೆಯನ್ನು ಹೆಚ್ಚಿಸಿ ಹಲವು ಜನರಿಗೆ ಮೀನುಗಾರಿಕೆ ಕ್ಷೆತ್ರದಲ್ಲಿ ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ಉದ್ಯೋಗವನ್ನು ಸೃಷ್ಟಿ ಮಾಡುವ ಉದ್ದೇಶವನ್ನು ಇಟ್ಟುಕೊಂಡಿದೆ
- ಮೀನು ಹಿಡಿದ ನಂತರ ಸರಿಯಾದ ಶೇಖರಣೆ ವ್ಯವಸ್ಥೆ ಇಲ್ಲದೆ ಬಹಳಷ್ಟು ಮೀನುಗಳು ಹಾಳಾಗುತ್ತವೆ ಇದನ್ನು ತಪ್ಪಿಸಲು ಮಾರುಕಟ್ಟೆ ವ್ಯವಸ್ಥೆಯನ್ನು ಬಲಪಡಿಸುವುದು
- ಮೀನುಗಳ ಸಂತತಿ ಕಡಿಮೆಯಾಗದಂತೆ ನೋಡಿಕೊಳ್ಳುವುದು ಮತ್ತು ಸರಿಯಾದ ನಿರ್ವಹಣೆ ಮಾಡುವುದು
- ರೈತರ ಆದಾಯವನ್ನು ದ್ವಿಗುಣ ಮಾಡುವುದು ಸರ್ಕಾರದ ಪ್ರೌಕ ಉದ್ದೇಶವಾಗಿದೆ
- ಅಷ್ಟೇ ಅಲ್ಲದೆ ಕೃಷಿಯ ಜೊತೆಗೆ ಆದುನಿಕ ಹೈನುಗಾರಿಕೆಗೆ ಸರ್ಕಾರದಿಂದ ಪ್ರೋತ್ಸಹ ಧನ ನೀಡಿ ರೈತರನ್ನು ಹೈನುಗಾರಿಕೆಯತ್ತ ಕೊಂಡೊಯ್ಯುವ ಉದ್ದೇಶವಾಗಿದೆ
ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಮೀನು ಸಾಕಾಣಿಕೆ ಕೇಂದ್ರವನ್ನು ಸಂಪರ್ಕಿಸಬಹುದು.
ಅವಲೋಕನಗಳು
| ಯೋಜನೆಯ ಹೆಸರು | ಮತ್ಸ್ಯ ಸಂಪದ ಯೋಜನೆ |
| ಅರ್ಹ ಫಲಾನುಭವಿಗಳು | ಬಡ ಮತ್ತು ಸಣ್ಣ ರೈತರು |
| ಒಟ್ಟು ಪ್ರೋತ್ಸಾಹಧನ | ರೂ. ₹3,00,000 ರಿಂದ 4,00,000 ದವರೆಗೆ ಸಾಲ ಮತ್ತು ಸಬ್ಸಿಡಿ. |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ ಮತ್ತು ಆಫ್ ಲೈನ್ ಮೂಲಕ ಅರ್ಜಿ |
ಮತ್ಸ್ಯ ಸಂಪದ ಯೋಜನೆಗೆ ನೀವು ಅರ್ಜಿ ಸಲ್ಲಿಸಬಹುದೇ? ಎಂಬ ನಿಮ್ಮ ಗೊಂದಲಕ್ಕೆ ಉತ್ತರ
ಹಲವಾರು ಜನ ರೈತರು ಕೃಷಿಯಲ್ಲಿ ಉತ್ತಮ ಬೆಳೆಯನ್ನು ಬೆಳೆದು ಆರ್ಥಿಕವಾಗಿ ಸದೃಢರಾದರು ಸಹ ಅದೆಷ್ಟೋ ಜನ ರೈತರು ಕೃಷಿ ಮಾಡಿಕೊಂಡು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ ಇಂಥಹ ರೈತರು ಮಿಶ್ರ ಕೃಷಿ ಮಾಡಿ ಸಾಲದ ಸುಳಿಯಿಂದ ಆಚೆ ಬರಬಹುದು ಅದಕ್ಕೆ ಹನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಸರ್ಕಾರ ಜಾರಿಗೆ ತಂದಿರುವ ಹೊಸ ಯೋಜನೆ ಇದಾಗಿದೆ.
- ಯಾರೇ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದ ಖಾಯಂ ನಿವಾಸಿಯಾಗಿರಬೇಕು.
- ಸಣ್ಣ ಮತ್ತು ಅತಿಸಣ್ಣ ರೈತರು ಈ ಯೋಜನೆಯ ಲಾಭವನ್ನು ಪಡೆಯಬಹುದು
- ಮೀನುಗಾರು, ಮೀನು ಕೃಷಿಕರು, ಮಹಿಳೆಯರು, ಮೀನುಗಾರಿಕೆ ಒಕ್ಕೂಟ
- ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 65 ವರ್ಷ ವಯಸ್ಸಿನೊಳಗಿರಬೇಕು.
ಯಾರಿಗೆ ಎಷ್ಟು ಸಹಾಯಧನ ಸಿಗಲಿದೆ
| ಅರ್ಹ ವರ್ಗಗಳು | ಸಬ್ಸಿಡಿ ಮೊತ್ತ |
| ಸಾಮಾನ್ಯ ವರ್ಗ | 40% |
| ಮಹಿಳೆಯರು | 60% |
| ಪರಿಶಿಷ್ಟ ಜಾತಿ | 60% |
| ಪರಿಶಿಷ್ಟ ಪಂಗಡ | 60% |
ಈ ಯೋಜನೆಯಿಂದಾಗಿ ಯಾವ ಯಾವ ಲಾಭಗಳನ್ನು ಪಡೆಯಬಹುದು
ನಮ್ಮ ಮೋದಿ ಸರ್ಕಾರ ಮೀನುಗಾರರಿಗೆ ಯಾವ ಸೌಲಭ್ಯಗಳನ್ನೂ ಕೊಡುತ್ತಿದೆ ನೋಡೋಣ ಬನ್ನಿ
1,ಪ್ರೋತ್ಸಹದನ:-
ಸಾಮಾನ್ಯ ವರ್ಗದವರಿಗೆ -₹2,50,000/-
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ– ₹4,40,000/-
2,ಉಚಿತ ಮೀನುಗಳು:-
ಮೀನುಗಾರಿಕೆ ಇಲಾಖೆಯಿಂದ ಯಾವುದೇ ಹಣವವನು ಕಟ್ಟದೆ ಉಚಿತವಾಗಿ 2,000 ದಿಂದ 3,000 ಮೀನಿನ ಮರಿಗಳನ್ನು ಪಡೆಯಬಹುದು.
3, ಮೀನಿಗೆ ಉಚಿತ ಆಹಾರ:-
ಕೇವಲ ಮೀನು ಮಾತ್ರವಲ್ಲದೆ ಇದರ ಜೊತೆ ಮೀನಿಗೆ ಆಹಾರವನ್ನು ಸಹ ಒದಗಿಸುತ್ತದೆ ನಿಮ್ಮ ಹತ್ತಿರದ ಮೀನುಗಾರಿಕೆ ಇಲಾಖೆಯಿಂದ
ಅಗತ್ಯ ದಾಖಲೆಗಳು:
- ಪಹಣಿ (RTC) ಅಥವಾ ಕೆರೆ / ಕೊಳವೆ ಬಾವಿ ದಾಖಲೆ
- ಮಾತ್ಸ್ಯಗಾರ ಪ್ರಮಾಣ ಪತ್ರ
- ವಯಸ್ಸಿನ ದೃಢೀಕರಣ ಪತ್ರ
- ಆದಾಯ ಪ್ರಮಾಣಪತ್ರ
- ನಿವೇಶನದ ದಾಖಲೆಗಳು
- ಆಧಾರ್ ಕಾರ್ಡ್
- ಭಾವಚಿತ್ರ
- ನಿವಾಸ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ಬುಕ್
ಅರ್ಜಿ ಸಲ್ಲಿಸುವ ವಿಧಾನ:
ಈ ಯೋಜನೆಗೆ ಎರೆಡು ಹಂತದಲ್ಲಿ ಅರ್ಜಿಯನ್ನ ಸಲ್ಲಿಸಬಹುದು ಆನ್ಲೈನ್ ಹಾಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ನೀವು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕೇ?
- ಅರ್ಜಿದಾರರು ನಿಮ್ಮ ರಾಜ್ಯದ ಸಾಕಾಣಿಕೆ ವೆಬ್ ಸೈಟ್ ಗೆ ಭೇಟಿ ನೀಡಿ
- PMMS / ಮೀನುಗಾರ ಅಂತ ಇರುತ್ತೆ ಆ ವೆಬ್ ಸೈಟ್ ಮೇಲೆ ಕ್ಲಿಕ್ ಮಾಡಿ
- ಅಲ್ಲಿ ನಿಮ್ಮ ಫೋನ್ ನಂಬರ್ ಅನ್ನು ಹಾಕಿ ಸರಿಯಾದ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಪಾಸ್ ಬುಕ್ ನಂಬರ್
- ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿಮಾಡಿ ಅಪ್ಲೈ ಆನ್ಲೈನ್ ಮೇಲೆ ಕ್ಲಿಕ್ ಮಾಡಿ
- ಅಪ್ಲಿಕೇಶನ್ ಫಾರಂ ಅನ್ನು ತೆಗೆದುಕೊಳ್ಳಿ
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವಿರಾ
- ನೀವು ನಿಮ್ಮ ಹತ್ತಿರದ ತಾಲೂಕು ಅಥವಾ ಜಿಲ್ಲಾ ಮೀನುಗಾರಿಗೆ ಇಲಾಖೆ ಗೆ ಬೇಡಿ ನೀಡಿ ಅರ್ಜಿಯನ್ನು ಪಡೆದುಕೊಳ್ಳಿ
- ಸಂಬಂಧ ಪಟ್ಟ ಅಧಿಕಾರಿಗಳ ಬಳಿ ಹೋಗಿ ಅರ್ಜಿಯನ್ನು ಪಡೆದುಕೊಳ್ಳಿ ನಂತರ ಅಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನುಪ್ರತಿಗಳನ್ನು ಲಗತ್ತಿಸಿ
- ಸರಿಯಾಗಿದೆಯೇ ಅಂತ ಒಂದು ಸರಿ ಪರಿಶೀಲಿಸಿ ಕಚೇರಿಗೆ ಅರ್ಜಿ ಸಲ್ಲಿಸಿ ಅರ್ಜಿ ಪ್ರತಿ ಯನ್ನು ಪಡೆಯಿರಿ.
ಸೂಚನೆ :-
- ನಿಮಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕಷ್ಟವಾದಲ್ಲಿ ನಿಮ್ಮ ಹತ್ತಿರದ ಕಂಪ್ಯೂಟರ್ ಸೆಂಟರ್ ಗೆ ಭೇಟಿ ನೀಡಿ ಅಥವಾ ನೀವೇ ಸ್ವಂತವಾಗಿ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ತೀರ್ಮಾನ:-
| ಕೈ ಕೆಸರಾದರೆ ಬಾಯಿ ಮೊಸರು ಎಂಬ ಗಾದೆ ಮಾತನ್ನು ಕೇಳಿದ್ದೀರಾ ಅಲ್ಲವೇ ನಾವು ಕಷ್ಟ ಪಟ್ಟು ಕೆಲಸಮಾಡಿದರೆ ಮಾತ್ರ ಅದರಿಂದ ನಾವು ಲಾಭ ನಿರೀಕ್ಷಿಸಬೇಕು ಯುವಕ ಯುವತಿಯರು ಯಾರ ಮೇಲೆಯೂ ಅವಲಂಬಿತರಾಗದೆ ಕೇವಲ ಒಂದು ಚಿಕ್ಕ ಕೆರೆ ಅಥವಾ ಡ್ರಾಮ್ ಅಥವಾ ಟ್ಯಾಂಕ್ ಗಳಲ್ಲಿ ಸಹ ಮೀನು ಸಾಕಾಣಿಕೆ ಮಾಡಿ ಹೆಚ್ಚಿನ ಆದಾಯವನ್ನು ಗಳಿಸಬಹುದು ಸರ್ಕಾರ ನಿಮಗೆ ಅಂತಾನೆ ಈ ಉತ್ತಮ ಯೋಜನೆಯನ್ನು ಜಾರಿಗೆ ತಂದಿದ್ದು ಇಂದೇ ಅರ್ಜಿ ಸಲ್ಲಿಸಿ ಸದುಪಯೋಗ ಪಡೆದುಕೊಳ್ಳಿ ಕೃಷಿಯ ಜೊತೆಗೆ ಹೈನುಗಾರಿಕೆ ಮಾಡಿ ರೈತರು ಆರ್ಥಿಕವಾಗಿ ಮೇಲೆ ಬರಲು ತಂದಿರುವ ಹೊಸ ಯೋಜನೆಯಾಗಿದೆ ಈ ಯೋಜನೆಗೆ ಕೇಂದ್ರ ಸರ್ಕಾರ ಸೇರಿದಂತೆ ರಾಜ್ಯ ಸರ್ಕಾರಗಳು ಧನಸಹಾಯವನ್ನು ಮಾಡುತ್ತವೆ ಈ ಹಣವನ್ನು ಉಪಯೋಗಿಸಿಕೊಂಡು ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಬಹುದು ಅಸ್ಟೆಲ್ಲದೆ ಹೊಸ ಉದ್ಯಮ ಶುರು ಮಾಡಲು ಸಹ ಸರ್ಕಾರದಿಂದ ಆರ್ಥಿಕ ಸಹಾಯಧನವನ್ನು ನೀಡಲಾಗುತ್ತದೆ. |







