ಆಶ್ರಯ ವಸತಿ ಯೋಜನೆ 2026 | Ashraya Scheme In Karnataka

On: Thursday, January 1, 2026 2:54 PM
ಆಶ್ರಯ ವಸತಿ ಯೋಜನೆ 2026 | Ashraya Scheme In Karnataka

ಕರ್ನಾಟಕದಲ್ಲಿ ಅದೆಷ್ಟೋ ವರ್ಷಗಳಿಂದ ವಾಸ ಮಾಡುತ್ತಿರುವ ಜನರಿಗೆ ನಮ್ಮಗೂ ಒಂದು ಸ್ವಂತವಾಗಿ ಮನೆ ಇರಬಹುದಿತ್ತು,,, ಎನ್ನುವ ಹಂಬಲ ಅನೇಕ ಕುಟುಂಬಳು ನಮ್ಮ ಕರ್ನಾಟಕದಂತ ರಾಜ್ಯದಲ್ಲಿ ಬಹಷ್ಟು ಇವೇ. ಹಾಗಾಗಿ ಇಂತವರಿಗಾಗಿ ಕಮ್ಮ ಕರ್ನಾಟಕ ಸರ್ಕಾರ ಹೊಚ್ಚ ಹೊಸ ಯೋಜನೆಯನ್ನ ಜಾರಿ ತಂದಿದೆ ಇದೆ ನೋಡಿ “ಆಶ್ರಯ ವಸತಿ ಯೋಜನೆ” (ಬಸವ ವಸತಿ ಯೋಜನೆ) ಈ ಒಂದು ಯೋಜನೆ ಅಡಿಯಲ್ಲಿ ನೀವು ಬಡ ರೇಖೆಗಿಂತ ಕೆಳಗಿದ್ದಲ್ಲಿ(BPL) ಹಾಗೆ ನಿಮ್ಮಗೊಂಡು ಸ್ವಂತ ಮನೆ ಇಲ್ಲದಿದ್ದಲ್ಲಿ ನಿಮ್ಮ ಸ್ವಂತ ಮನೆ ಕಟ್ಟುವ ಕನಸನ್ನ ನನಸು ಮಾಡಲು ಸರ್ಕಾರದ ಕಡೆಯಿಂದ ಹಣಕಾಸಿನ ಆರ್ಥಿಕ ನೆರವು ಸಿಗುತ್ತದೆ.

Ashraya Scheme In Karnataka

ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತದಾದ್ಯಂತ ಇಂತ ಒಂದು ಯೋಜನೆಗಳು ಜನಸಾಮಾನ್ಯರ ನೆರವಿಗಾಗಿ ಜಾರಿ ಬರಬೇಕಿವೆ. ಇಂತ ಅನೇಕ ಅಧ್ಬುತ ಯೋಜನೆಗಳಿಂದ ಬಡವರಿಗೆ ಸಮಾಜದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಜನಸಾಮಾನ್ಯರ ಜೀವನ ಮಟ್ಟವು ಸುಧಾರಿಸುತ್ತದೆ.

ಈ ಒಂದು ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ನಮ್ಮ https://udyogasalahe.in ವೆಬ್ ಸೈಟ್ ಗೆ ಭೇಟಿ ನೀಡಿ. ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಹ ಅರ್ಜಿದಾರರು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಯೋಜನೆಯ “ಉದ್ದೇಶ, ಯೋಜನೆಯ ಪ್ರಯೋಜನ, ಅಗತ್ಯ ದಾಖಲೆಗಳು” ಇನ್ನಷ್ಟು ಮಾಹಿತಿಯನ್ನು ಕೆಳಗಿನ ಹಂತದಲ್ಲಿ ನೀಡಿದ್ದು ಅದನ್ನು ಓದಿಕೊಂಡು ಅರ್ಜಿ ಸಲ್ಲಿಸಿ.

ಯೋಜನೆಯ ಅವಲೋಕನ:(Ashraya Scheme In Karnataka)

ಯೋಜನೆಯ ಹೆಸರು“ಆಶ್ರಯ ವಸತಿ ಯೋಜನೆ” (ಬಸವ ವಸತಿ ಯೋಜನೆ)
ಅರ್ಹ ಫಲಾನುಭವಿಗಳುನಿಮ್ಮಗೊಂಡು ಸ್ವಂತ ಮನೆ ಇಲ್ಲದಿದ್ದಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟು ಪ್ರೋತ್ಸಾಹಧನರೂ. ₹1.20/- ಲಕ್ಷದಿಂದ ₹2 ಲಕ್ಷದವರೆಗೆ ತಲಾ ಒಂದು ಕುಟುಂಬಕ್ಕೆ.
ಅರ್ಜಿಸಲ್ಲಿಸುವ ರಾಜ್ಯಕರ್ನಾಟಕ
ಅರ್ಜಿ ಸಲ್ಲಿಸುವ ವಿಧಾನಆನ್ಲೈನ್ ಮೂಲಕ ಅರ್ಜಿ

Ashraya Scheme In Karnataka

ಸಂಕ್ಷಿಪ್ತ ಮಾಹಿತಿ:

ನೀವಿಲ್ಲಿ ನೋಡಬಹುದು ಕರ್ನಾಟಕದಲ್ಲಿ ಈ ಯೋಜನೆಯು ಸುಮಾರು 1991-92 ರಲ್ಲಿ ರಚನೆ ಯಾಗಿದ್ದು, ರಾಜ್ಯದ ಬಡ ಮತ್ತು ಮನೆ ಇಲ್ಲದ ಕುಟುಂಬಗಳಿಗೆ ಸ್ವಂತ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡುವ ಬಹು ದೊಡ್ಡ ಯೋಜನೆ ಇದಾಗಿದೆ. 2000 ವರ್ಷದಲ್ಲಿ ಈ ಯೋಜನೇ ಗಳನ್ನ ರಾಜೀವ್ ಗಾಂಧಿ ವಸತಿ ನಿಗಮ ಎಂದು ಮರು ನಾಮಕರ್ಣ ಗೊಂಡಿತು.

ಈ ಯೋಜನೆ ನಮ್ಮ ರಾಜ್ಯ ಸರ್ಕಾರ ಜಾರಿಗೆ ತಂದ ಪ್ರಮುಖ ಯೋಜನೆಗಳಲ್ಲಿ ಇದು ಕೂಡ ಒಂದು. ಈ ಯೋಜನೆಯಲ್ಲಿ, ಕೆಲವು ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು 2026ರಲ್ಲಿ ಪ್ರತಿಯೊಬ್ಬ ಮನುಷ್ಯನು ತನ್ನದೇ ಆದ ಸ್ವಂತ ಮನೆಯನ್ನು ಕಟ್ಟಿಕೊಂಡಿರಬೇಕು ಎನ್ನುವ ಆಸೆ ಇರುತ್ತದೆ ಹಾಗೆ ಪ್ರತಿಯೊಬ್ಬರ ಜೀವನದಲ್ಲೂ ಬಹು ದೊಡ್ಡ ಕನಸಾಗಿರುತ್ತದೆ. ಸ್ವಂತ ಮನೆಯ ಕನಸನ್ನು ನನಸಾಗಿಸಿಕೊಳ್ಳಲು ಸರ್ಕಾರವು ಆರ್ಥಿಕ ಸಹಾಯಧನವನ್ನು ನೀಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಮುಂದಿನ ಹಂತ ಹಂತಗಳಲ್ಲಿ ಏನಿದು ಆಶ್ರಯ ವಸತಿ ಯೋಜನೆ ? ಈ ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ದೊರೆಯುವ ಸಹಾಯಧನ ಎಷ್ಟು ಹಾಗೆ ಅರ್ಜಿ ಸಲ್ಲಿಸೋದು ಹೇಗೆ ? 

ಹಂತ ಹಂತವಾಗಿ ಕೆಳಗೆ ನೋಡ್ತಾ ಹೋಗೋಣ ಬನ್ನಿ…

ಏನಿದು ಆಶ್ರಯ ವಸತಿ ಯೋಜನೆ ? Ashraya Scheme In Karnataka

ಕರ್ನಾಟಕ ಸರ್ಕಾರ ಜಾರಿ ತಂದಿರುವ ಯೋಜನೆಯ ಬಗ್ಗೆ ಕೆಲವೇ ಕೆಲವು ಜನಮಾನ್ಯರಿಗೆ ಮಾತ್ರನೇ ತಿಳಿದಿದೆ ಹಾಗಾಗಿ ಈ ಒಂದು ಸಾಮಾಜಿಕ ಜಾಲತಾಣದ ಮೂಲಕ ಪ್ರತಿಯೊಬ್ಬರಿಗೂ ತಲುಪಿಸುವ ನಮ್ಮದೊಂದು ಉದ್ದೇಶ. ವಸತಿ ರಹಿತ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ಸ್ವಂತ ಮನೆ ನಿರ್ಮಿಸಿಕೊಳ್ಳಲು ಆರ್ಥಿಕ ಸಹಾಯ ಧನ ಒದಗಿಸುವ ಉದ್ದೇಶ ಈ ಯೋಜನೆಯ ಪ್ರಮುಖ ಗುರಿಯಾಗಿದೆ. 

ನನ್ನ ಒಂದೇ ಮಾತಿನಲ್ಲಿ ಹೇಳುವುದಾದರೆ, ಆರ್ಥಿಕವಾಗಿ ಸಮಾಜದಲ್ಲಿ ಹಿಂದುಳಿದ ಕುಟುಂಬಗಳಿಗೆ ಸರ್ಕಾರ ನೀಡುವ ಮಹತ್ವದ ಆರ್ಥಿಕ ಬೆಂಬಲವೇ ಈ ಯೋಜನೆಯಾಗಿದೆ.

ಯೋಜನೆಯ ಉದ್ದೇಶ: Ashraya Scheme In Karnataka

  • ಈ ಯೋಜನೆ ಅಡಿಯಲ್ಲಿ ಪ್ರಮುಖ ಉದ್ದೇಶ ನೋಡುವುದಾದರೆ ವಸತಿ ರಹಿತ ಮನೆ ಕಟ್ಟಲು ಕರ್ನಾಟಕ ಸರ್ಕಾರದಿಂದ ಆರ್ಥಿಕ ನಿರವು.
  •  ಬಡವರಿಗೆ ಮನೆ ನಿರ್ಮಾಣಕ್ಕೆ ಅಗತ್ಯವಾದ ಹಣಕಾಸಿನ ಸಹಾಯಧನದ ರೂಪದಲ್ಲಿ ನೇರವಾಗಿ ಅರ್ಜದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
  • ಸಮಾಜದಲ್ಲಿ ಪ್ರತಿಯೊಬ್ಬರೂ ಕೂಡ ಸಮಾನತೆ ಇಂದ ಜೀವನ ನಡೆಸಬೇಕು. ಯಾವುದೇ ರೀತಿಯ ಮೇಲು ಕೇಳು ಅಂದ್ರೆ ಭಾವನೆ ಇರಬಾರದು ಎಂಬ ಪ್ರಮುಖ ಉದ್ದೇಶ
  • ಕೇವಲ ಒಂದು ನಗರ ಪ್ರದೇಶದಲ್ಲಿ ಮಾತ್ರವಲ್ಲದೆ ಹಳ್ಳಿ ಭಾಗದ ಸಾಮಾನ್ಯ ಕುಟುಂಬಗಳಿಗೂಅಂದ್ರೆ ರಾಜ್ಯದ ಮೂಲೆ ಮೂಲೆಯಲ್ಲಿರುವ ಗ್ರಾಮೀಣ ಪ್ರದೇಶದ ಬಡವರಿಗೂ ವಸತಿ ಸೌಲಭ್ಯ ಇರಲೇ ಬೇಕು ಎನ್ನುವುದು.

ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಗ್ರಾಮ ಪಂಚಾಯತ್ಕಾರ್ಯಾಲಯ ಅಥವಾ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದು.

ಯೋಜನೆ ಮೂಲಕ ಹಣ ಎಷ್ಟು ಸಿಗುತ್ತದೆ :-

ಸರ್ಕಾರವು ರೂ. ₹1.20/- ಲಕ್ಷದಿಂದ ₹2 ಲಕ್ಷದವರೆಗೆ ತಲಾ ಒಂದು ಕುಟುಂಬಕ್ಕೆ ಜಾತಿ ಮತ್ತು ಆಯಾ ಪ್ರದೇಶಕ್ಕೆ ಅನುಗುಣವಾಗಿ ಈ ಸಹಾಯಧನವನ್ನ ನಿಗದಿಪಡಿಸಿದ್ದೆ. ಹಳ್ಳಿ ಬಾಗದ ಜನ ಸಾಮಾನ್ಯರಿಗೆ ಒಂದು ಮೊತ್ತ ಹಾಗೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹೆಚ್ಚಿನ ಹಣ ನೀಡಲಾಗುತ್ತದ.

ಅರ್ಜಿ ದಾರರ ವರ್ಗ ಪ್ರದೇಶ ಸಹಾಯಧನ
ಸಾಮಾನ್ಯ ವರ್ಗಗ್ರಾಮೀಣ  ₹1.20 ಲಕ್ಷ ಸಹಾಯಧನ
SC/ST Categoryಗ್ರಾಮೀಣ ₹1.75 ಲಕ್ಷ ಸಹಾಯಧನ
SC/ST Categoryನಗರ ₹2.00 ಲಕ್ಷ
Ashraya Scheme In Karnataka

ಯೋಜನೆ ಲಾಭ ಪಡೆಯಲು ಯಾರೆಲ್ಲಾ ಅರ್ಹರು?

  • ಯಾರೇ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು.
  • ಕುಟುಂಬದ ಯಾವುದೇ ವೆಕ್ತಿಯ ಹೆಸರಿನಲ್ಲಿ ಕರ್ನಾಟಕ ಅಥವಾ ಯಾವುದೇ ದೇಶದ ಭಾಗದಲ್ಲಿ ಸ್ವಂತವಾಗೀನು ಮನೆ ಇರಬಾರದು.
  • ಕುಟುಂಬದ ವರ್ಷದ ಆದಾಯವು  ₹1.2 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ಅರ್ಜಿದಾರರು ಕನಿಷ್ಠ 18 ವರ್ಷ ಮೇಲಿನವರಾಗಿದ್ದಲ್ಲಿ ಮಾತ್ರನೇ ಅವಕಾಶ.
  • ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ನೀವು ರಾಜೀವ್ ಗಾಂಧಿ ವಸತಿ ನಿಗಮದ (Ashraya Portal) ಅಧಿಕೃತ ಪೋರ್ಟಲ್ ನಲ್ಲಿ ತಿಳಿಯಬಹುದು.

ಹಣದ ಕಂತುಗಳ ಸಂಪೂರ್ಣ ವಿವರ :- Ashraya Scheme In Karnataka

ಮೊದಲ ಕಂತುಗಳ ಮಾಹಿತಿ:

  • ಅಡಿಪಾಯ (Foundation) ಹಾಕಿದ ನಂತರ ಮೊದಲ ಕಂತು ನೇರವಾಗಿ ಅರ್ಜಿ ಹಾಕುವ ಖಾತೆಗೆ ವರ್ಗಾವಣೆ ಆಗುತ್ತದೆ.
  •  ಗೋಡೆಗಳು ಲಿಂಟಲ್ ಮಟ್ಟಕ್ಕೆ (Lintel Level) ಬಂದಾಗ.
  •  ಮನೆಯ ಛಾವಣಿ (Roof) ಹಾಕಿದ ನಂತರ.
  • ಮನೆ ಸಂಪೂರ್ಣವಾಗಿ ಪೂರ್ಣಗೊಂಡು (Completion) ಪೇಂಟಿಂಗ್ ಮತ್ತು ಶೌಚಾಲಯ ನಿರ್ಮಾಣವಾದ ನಂತರ.
  • ಈ ಮೇಲಿನ ನಾಲ್ಕು ಹಂತದಲ್ಲಿ ಬರುತ್ತದೆ.

ಯೋಜನೆಯ ಪ್ರಯೋಜನ ಏನಾಗಿರುತ್ತೆ ತಿಳಿಯೋಣ :

  • ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿಸುವವರು ತಮ್ಮದೇ ಆದ ಸ್ವಂತ ಮನೆ ನಿಂಸಿಕೊಳ್ಳಬಹುದು.
  • ಬಡವರಿಗೆ ಮನೆ ನಿರ್ಮಾಣದ ಕೆಲಸ ಹೊರೆ ಯಾಗದೆ ಮನೆ ನಿರ್ಮಾಣಕ್ಕಾಗಿ ಸರ್ಕಾರದಿಂದ ₹1.20 ಲಕ್ಷದಿಂದ ₹2.0 ಲಕ್ಷದವರೆಗೆ ನೇರ ಸಹಾಯಧನ ಸಿಗುತ್ತದೆ.
  • ಸರ್ಕಾರದಿಂದ ಬಡ ಕುಟುಂಬಕ್ಕೆ ಭದ್ರತೆ, ಉತ್ತಮ ಆರೋಗ್ಯ ಹಾಗೆ ನೈರ್ಮಲ್ಯದ ವಾತಾವರಣ ನಿರ್ಮಾಣ ಗೊಳ್ಳುತ್ತದೆ.
  • ಕೆಲವು ಸಂದರ್ಭಗಳಲ್ಲಿ ಸಾಮಾನ್ಯ ಜನರು ಮನೆ ನಿರ್ಮಾಣಕ್ಕಾಗಿ ಬ್ಯಾಂಕ್‌ಗಳಿಂದ ಸಾಲದ ಮೊರೆ ಹೋಗುತ್ತಾರೆ ಇದು ದೊಡ್ಡ ಹೊರೆಯಾಗಿ ಕಂಡು ಬರುತ್ತದೆ.

ಯೋಜನೆಯ ಅನುಕೂಲಗಳು : Ashraya Scheme In Karnataka

  • ಈ ಯೋಜನೆಯು ಪ್ರಮುಖವಾಗಿ ಮಳೆ, ಗಾಳಿ, ಚಳಿ ಮತ್ತು ಬಿಸಿಲಿನಿಂದ ಜನಸಾಮಾನ್ಯರಿಗೆ ರಕ್ಷಣೆ ಕೊಡುತ್ತದೆ.
  • ಮನೆ ನಿರ್ಮಾಣಕ್ಕಾಗಿ ಕೆಲವರು ಹಣವನ್ನ ಕೂಡಿಡುತ್ತಾರೆ ಅಂತವರ ಹಣವನ್ನ ಈ ಯೋಜನೆ ಉಳಿಸುತ್ತದೆ ಅಷ್ಟೇ ಮಾತ್ರ ವಲ್ಲದೆ ಸ್ವಂತ ಮನೆ ಹೊಂದುವುದರಿಂದ ಪ್ರತಿ ತಿಂಗಳು ನೀಡಬೇಕಿದ್ದ ಬಾಡಿಗೆ ಹಣವನ್ನ ಉಳಿತಾಯ ಮಾಡಿಕೊಳ್ಳಬಹುದು.
  • ಸ್ವಂತ ಮನೆ ಇಂದಾಗಿ ಸಮಾಜದಲ್ಲಿ ಬಡವರಿಗೂ ಒಂದು ಘನತೆ ಗೌರವ ದೊರೆಯುತ್ತದೆ.
  • ಸಹಾಯಧನವು ನೇರವಾಗಿ ಅರ್ಜಿ ಹಾಕುವವರ ಬ್ಯಾಂಕ್ ಖಾತೆಗೆ ಜಮೆಯಾಗುವುದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿ, ಈ ಯೋಜನೆಗೆ ಆನ್ಲೈನ್ ಮುಕಾಂತರ ಅರ್ಜಿ ಸಲ್ಲಿಸಿ.

ಅಗತ್ಯ ದಾಖಲೆಗಳು: Ashraya Scheme In Karnataka

  • BPL ಪಡಿತರ ಚೀಟಿ
  • ಆದಾಯ ಪ್ರಮಾಣಪತ್ರ 
  • ನಿವೇಶನದ ದಾಖಲೆಗಳು
  • ನಿರಾಕ್ಷೇಪಣಾ ಪತ್ರ
  • ಆಧಾರ್ ಕಾರ್ಡ್
  • ಭಾವಚಿತ್ರ 
  • ವಿಶೇಷ ಪ್ರಮಾಣಪತ್ರಗಳು
  • ಬ್ಯಾಂಕ್ ಪಾಸ್‌ಬುಕ್

ಅರ್ಜಿ ಸಲ್ಲಿಸುವ ವಿಧಾನ: Ashraya Scheme In Karnataka

ಈ ಯೋಜನೆಗೆ ಎರೆಡು ಹಂತದಲ್ಲಿ ಅರ್ಜಿಯನ್ನ ಸಲ್ಲಿಸಬಹುದು ಆನ್ಲೈನ್ ಹಾಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಅಗತ್ಯ ದಾಖಲಾತಿಗಳನ್ನು ತೆಗೆದಿಟ್ಟುಕೊಳ್ಳಬೇಕು. ನಂತರ ನಿಮ್ಮ ಫೋನ್ ಅಥವಾ ಕಂಪ್ಯೂಟರ್‌ನಲ್ಲಿ “Ashraya Yojane Online Application” ಲಿಂಕ್ ಮೇಲೆ ಕ್ಲಿಕ್ ಮಾಡಿ
    ರಾಜೀವ್ ಗಾಂಧಿ ನಿಗಮ ನಿಯಮಿತದ ಅಧಿಕೃತ ಜಾಲತಾಣವನ್ನು ಪ್ರವೇಶಿಸಬೇಕು.
  • ವೆಬ್‌ಸೈಟ್ ಓಪನ್ ಮಾಡಿದ ನಂತರ, ಈ ಕೆಳಗಿನ ಮಾಹಿತಿಗಳನ್ನು ಆಯ್ಕೆ ಮಾಡಬೇಕು
  • ಜಿಲ್ಲೆ
  • ತಾಲ್ಲೂಕು
  • ಹೋಬಳಿ
  • ಗ್ರಾಮ
  • ಪಿನ್ ಕೋಡ್
  • ಆಯ್ಕೆ ಮಡಿದ ನಂತರ ಮುಂದುವರೆಸಿ ಅನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ 12 ಅಂಕಿಯ ಆಧಾರ್ ಕಾರ್ಡ್ ಸಂಖ್ಯೆ ಅನ್ನು ನಮೂದಿಸಬೇಕು.
    ಆಧಾರ್ ಕಾರ್ಡ್‌ನಲ್ಲಿರುವಂತೆ ಹೆಸರು ಅನ್ನು ಸರಿಯಾಗಿ ನಮೂದಿಸಿ
  • ನಂತರ ನಿಮ್ಮ ಅಗತ್ಯ ದಾಖಲೆಗಳನ್ನ ಜಾಗರೂಕತೆಯಿಂದ ಭರ್ತಿ ಮಾಡಬೇಕು.
  • ಭರ್ತಿ ಮಾಡಿದ ದಾಖಲೆಗಳು ಸರಿ ಎಡಿಎ ಎಂದು ಪರಿಶೀಲಿಸಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನ ಸಲ್ಲಿಸಿ.

ತೀರ್ಮಾನ:-

ನಿಮ್ಮಗೆ ಸ್ವಂತ ಮನೆ ಇಲ್ಲದಿದ್ದಲ್ಲಿ ಮೊದಲು ಕೆ ಯೋಜನೆಗೆ ಅರ್ಜಿ ಸಲ್ಲಿಸಿ ಯಾಯೋಜನೆಯಾ ಲಾಭ ಪಡೆಯಿರಿ ಹಾಗೆ ನಿಮ್ಮ ಸ್ವಂತ ಮನೆಯ ಕನಸನ್ನು ನನಸು ಮಾಡಿಕೊಳ್ಳಲು ಉತ್ತಮ ಅವಕಾಶವಾಗಿದೆ. ವಾರ್ಷಿಕ ಆದಾಯ ₹1.20 ಲಕ್ಷದ ಒಳಗಿದ್ದರೆ, ಇದ್ದವರು ಕಂಡಿತವಾಗಿಯೂ ಈ ಯೋಜನೆಗೆ ಒನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಗ್ರಾಮ ಪಂಚಾಯತ್ಕಾರ್ಯಾಲಯ ಅಥವಾ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದು.

ಇತರ ಯೋಜನೆಯ ಲಿಂಕುಗಳು :


Join WhatsApp

Join Now

Join Telegram

Join Now

Leave a Comment