ಭಾರತದ ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ಉದ್ಯೋಗಾವಕಾಶದ ಹಕ್ಕನ್ನು ಸೃಷ್ಟಿಸಿ ಅವರಿಗೆ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯ ಭರವಸೆಯನ್ನು ನೀಡಲು 2005 ರಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಯನ್ನು ಜಾರಿಗೊಳಿಸಿತು.
VB-G RAM G Scheme Details in kannada
ಆದರೆ ಕೇಂದ್ರ ಸರ್ಕಾರವು ಈ ಯೋಜನೆಯನ್ನು 2025 ರ ಡಿಸೆಂಬರ್ ತಿಂಗಳಲ್ಲಿ ರದ್ದುಗೊಳಿಸಿ, ಈ ಯೋಜನೆಯ ಬದಲಿಗೆ ವಿಕಾಸ ಭಾರತ – ಗ್ರಾಮೀಣ ಉದ್ಯೋಗ ಮತ್ತು ಜೀವನೋಪಾಯ ಮಿಷನ್ (VB-G RAM G) ಎಂಬ ನವ ಕಾನೂನನ್ನು ಜಾರಿಗೊಳಿಸಿತು.
ಎಂ ಜಿ ನರೇಗಾ ಕಾಯ್ದೆಯನ್ನು ಏಕೆ ರದ್ದುಗೊಳಿಸಲಾಯಿತು? ವಿಬಿ-ಜಿ ರಾಮ್ ಜಿ ಕಾಯ್ದೆಯಲ್ಲಿ ಏನೆಲ್ಲಾ ಬದಲಾವಣೆ ಮಾಡಲಾಯಿತು? ಎನ್ನುವ ಬಗ್ಗೆ ಈ ಕೆಳಗಿನ ಹಂತದಲ್ಲಿ ತಿಳಿಯುತ್ತಾ ಹೋಗೋಣ. ಈ ಒಂದು ಕಾಯ್ದೆಯ ಬದಲಾವಣೆಯ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ನಮ್ಮ ವೆಬ್ ಸೈಟ್ ಉದ್ಯೋಗ ಸಲಹೆ ಗೆ ಭೇಟಿ ನೀಡಿ.
| ಇಲ್ಲಿ ಗಮನಿಸಿ, “ಕೇಂದ್ರ ಸರ್ಕಾರವು ಮೊದಲು ನರೇಗಾ ಕಾಯ್ದೆಯ ಹೆಸರನ್ನು ಬದಲಾವಣೆ ಮಾಡಿ “ಪೂಜ್ಯ ಬಾಪು ಗ್ರಾಮೀಣ ರೋಜ್ಗಾರ್ ಯೋಜನೆ” ಎಂಬ ಹೆಸರನ್ನು ಇಡಲು ತೀರ್ಮಾನಿಸಿತು. ಆದರೆ, ಕೊನೆಯದಾಗಿ ಕೇಂದ್ರ ಸರ್ಕಾರವು ನರೇಗಾ ಕಾಯ್ದೆಯನ್ನೇ ರದ್ದು ಗೊಳಿಸಿತು.“ |
ಎಂ ಜಿ ನರೇಗಾ ಕಾಯ್ದೆಯನ್ನು ರದ್ದುಗೊಳಿಸಲು ಕಾರಣವೇನು?
ಎಂ ಜಿ ನರೇಗಾ ಕಾಯ್ದೆಯನ್ನು ಕೇಂದ್ರ ಸರ್ಕಾರವು ರದ್ದುಗೊಳಿಸಲು ಈ ಕೆಳಕಂಡ ಅಂಶಗಳು ಕಾರಣವಾಗಿದೆ. ಆ ಕಾರಣಗಳು ಏನೆಂಬುದನ್ನು ತಿಳಿದು ಕೊಳ್ಳೋಣ ಬನ್ನಿ,
- ಕೃಷಿ ಕಾರ್ಮಿಕರ ಅಭಾವ:
ನರೇಗಾ ಕೆಲಸದಿಂದಾಗಿ ಬಿತ್ತನೆ, ಕೊಯ್ಲಿನಂತಹ ಕೃಷಿ ಚಟುವಟಿಕೆಯನ್ನು ನಡೆಸುವ ಕಾಲಘಟ್ಟಗಳಲ್ಲಿ ರೈತರಿಗೆ ಕೃಷಿ ಕಾರ್ಮಿಕರ ಕೊರತೆಯಾಗುತ್ತಿತ್ತು. ಇದನ್ನು ಸರಿಪಡಿಸುವ ಉದ್ದೇಶದಿಂದ ಈ ಕಾಯ್ದೆಯನ್ನು ರದ್ದು ಪಡಿಸಲಾಯಿತು.
- ಹಣಕಾಸಿನ ದುರ್ಬಳಕೆ ಮತ್ತು ಭ್ರಷ್ಟಾಚಾರ:
ನರೇಗಾ ಕಾಯ್ದೆಯಲ್ಲಿ ಹಣವನ್ನು ವ್ಯಾಪಕವಾಗಿ ದುರ್ಬಳಕೆ ಮಾಡಲಾಗುತ್ತಿತ್ತು, ಹೆಚ್ಚಿನ ಭ್ರಷ್ಟಾಚಾರ ನಡೆಯುತ್ತಿತ್ತು ಹಾಗೂ ನಕಲಿ ಫಲಾನುಭವಿಗಳ ಸಂಖ್ಯೆ ಹೆಚ್ಚಿತ್ತು. ನರೇಗಾ ಯೋಜನೆಯನ್ನು ರದ್ದು ಗೊಳಿಸಲು ಇದೊಂದು ಮೂಖ್ಯ ಕಾರಣವಾಗಿದೆ.
- ವೇತನದಲ್ಲಿ ಕಡಿತ:
ಸರ್ಕಾರವು ಈ ಒಂದು ಕಾಯ್ದೆಯಡಿಯಲ್ಲಿ ಕಾರ್ಮಿಕರಿಗೆ ನೀಡುತ್ತಿದ್ದ ವೇತನದಲ್ಲಿ ಅರ್ಧವನ್ನು ಕಮಿಷನ್ ರೂಪದಲ್ಲಿ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಪಡೆದುಕೊಳ್ಳುತ್ತಿದ್ದರು. ಇದರಿಂದಾಗಿ ಕಾರ್ಮಿಕರು ನಿರೀಕ್ಷಿತ ವೇತನವನ್ನು ಪಡೆಯಲು ಆಗುತ್ತಿರಲಿಲ್ಲ.
- ಯಂತ್ರೋಪಕರಣಗಳ ಬಳಕೆ:
ನರೇಗಾ ಕಾಯ್ದೆಯಡಿಯಲ್ಲಿ ಯಂತ್ರಗಳನ್ನು ಬಳಸದೆ ಕಾರ್ಮಿಕರೇ ಕೆಲಸವನ್ನು ಮಾಡಬೇಕಿತ್ತು ಆದರೆ ಕಾರ್ಮಿಕರು ಯಂತ್ರಗಳನ್ನು ಬಳಸಿ ಕಳಪೆ ಕಾಮಗಾರಿಯನ್ನು ಮಾಡುತ್ತಿದ್ದರು.
- ಬಿಲ್ ಗಳಲ್ಲಿ ನಕಲಿ:
ಕಾಮಗಾರಿಗೆ ಬೇಕಾದ ವಸ್ತುಗಳ ಬೆಳೆಗಳನ್ನು ಮಾರುಕಟ್ಟೆಯ ಬೆಲೆಗಿಂತ ಹೆಚ್ಚಿಗೆ ತೋರಿಸಿ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಿ ಉಳಿದ ಹಣವನ್ನು ದುರುಪಯೋಗ ಮಾಡುತ್ತಿದ್ದರು.
ವಿಬಿ-ಜಿ ರಾಮ್ ಜಿ ಕಾಯ್ದೆಯಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ?
ಹೊಸ ಕಾಯ್ದೆ ವಿಬಿ-ಜಿ ರಾಮ್ ಜಿ ಯಲ್ಲಿ ಏನೆಲ್ಲಾ ಬದಲಾವಣೆ ಆಗಿದೆ ಎನ್ನುವ ಬಗ್ಗೆ ಈ ಕೆಳಗಿನ ಹಂತದಲ್ಲಿ ಸಂಕ್ಷಿಪ್ತವಾಗಿ ನೀಡಲಾಗಿದೆ.
| ವಿಭಾಗಗಳು | ಎಂ ಜಿ ನರೇಗಾ ಕಾಯ್ದೆ | ವಿಬಿ-ಜಿ ರಾಮ್ ಜಿ ಕಾಯ್ದೆ (VB-G RAM G) |
| ಸೇವಾ ಅವಧಿ | ಎಂಜಿ ನರೇಗಾ ಕಾಯ್ದೆಯಡಿಯಲ್ಲಿ, ಪ್ರತಿ ವರ್ಷ ಗ್ರಾಮೀಣ ಭಾಗದ ಪ್ರತಿ ಮನೆಗೆ ಕನಿಷ್ಠ 100 ದಿನಗಳ ಉದ್ಯೋಗ ಅವಧಿಯನ್ನು ನೀಡಲಾಗಿತ್ತು | ವಿಬಿ-ಜಿ ರಾಮ್ ಜಿ ಕಾಯ್ದೆಯಡಿಯಲ್ಲಿ, ಗ್ರಾಮೀಣ ಭಾಗದ ಪ್ರತಿ ಮನೆಗೆ ಪ್ರತಿ ವರ್ಷ 125 ದಿನಗಳ ವರೆಗೆ ಉದ್ಯೋಗ ಅವಧಿಯನ್ನು ವಿಸ್ತರಿಸಲಾಯಿತು. |
| ಉದ್ಯೋಗ ಭದ್ರತಾ ಸ್ವರೂಪ | ಎಂ ಜಿ ನರೇಗಾ ಕಾಯ್ದೆಯಡಿಯಲ್ಲಿ, ಕಾರ್ಮಿಕರು ತಮ್ಮ ಇಚ್ಛೆಯ ಕೆಲಸವನ್ನು ಕೇಳಿದಾಗ ನೀಡಬೇಕಿತ್ತು. (ಬೇಡಿಕೆ ಆಧಾರಿತ) | ವಿಬಿ-ಜಿ ರಾಮ್ ಜಿ (VB-G RAM G)ಕಾಯ್ದೆಯಡಿಯಲ್ಲಿ, ಬಜೆಟ್ ಮತ್ತು ಮಾರ್ಗಸೂಚಿಗಳ ಮಿತಿಯೊಳಗೆ ಕೆಲಸವನ್ನು ನೀಡಲಾಗುತ್ತದೆ. (ಪೂರೈಕೆ ಆಧಾರಿತ) |
| ಉದ್ಯೋಗದ ಅವಧಿ | ಎಂ ಜಿ ನರೇಗಾ ಕಾಯ್ದೆಯಡಿಯಲ್ಲಿ, ಕಾರ್ಮಿಕರು ವರ್ಷ ಪೂರ್ತಿ ಕೆಲಸವನ್ನು ಮಾಡಬೇಕಿತ್ತು | ವಿಬಿ-ಜಿ ರಾಮ್ ಜಿ (VB-G RAM G0ಕಾಯ್ದೆಯಡಿಯಲ್ಲಿ, ಕಾರ್ಮಿಕರು 60 ದಿನಗಳ ವರೆಗೆ ಕೆಲಸದಲ್ಲಿ ವಿರಾಮವನ್ನು ಪಡೆಯಬಹುದು. |
| ಹಣಕಾಸಿನ ಹಂಚಿಕೆ | ಎಂ ಜಿ ನರೇಗಾ ಕಾಯ್ದೆಯಡಿಯಲ್ಲಿ, ಕೇಂದ್ರ ಸರ್ಕಾರವು ವೇತನದ ಸಂಪೂರ್ಣ ವೆಚ್ಚವನ್ನು (100%) ಭರಿಸಬೇಕಿತ್ತು | ವಿಬಿ-ಜಿ ರಾಮ್ ಜಿ (VB-G RAM G0ಕಾಯ್ದೆಯಡಿಯಲ್ಲಿ, ಕೇಂದ್ರ ಸರ್ಕಾರ ವೇತನದ 60% ವೆಚ್ಚವನ್ನು ಹಾಗೂ ರಾಜ್ಯ ಸರ್ಕಾರವು 40% ವೆಚ್ಚವನ್ನು ಭರಿಸಬೇಕು. |
| ಉದ್ಯೋಗದ ಆಯ್ಕೆ | ಎಂ ಜಿ ನರೇಗಾ ಕಾಯ್ದೆಯಡಿಯಲ್ಲಿ, ಹಳ್ಳಿಗೆ ಯಾವ ಕೆಲಸ ಬೇಕು ಎಂದು ಗ್ರಾಮಸ್ಥರೇ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬಹುದಿತ್ತು. | ವಿಬಿ-ಜಿ ರಾಮ್ ಜಿ (VB-G RAM G)ಕಾಯ್ದೆಯಡಿಯಲ್ಲಿ, ಕೇಂದ್ರ ಸರ್ಕಾರ ನಿಗಧಿಪಡಿಸಿದ ವಲಯದಲ್ಲೇ ಕಾರ್ಯ ನಿರ್ವಹಿಸಬೇಕು. |
| ತಂತ್ರಜ್ಞಾನ ಬಳಕೆ | ಎಂ ಜಿ ನರೇಗಾ ಕಾಯ್ದೆಯಡಿಯಲ್ಲಿ, ಡಿಜಿಟಲ್ ಸೇವೆಗಳ ಬಳಕೆಯು ಕಡಿಮೆ ಮಟ್ಟದಲ್ಲಿತ್ತು. | ವಿಬಿ-ಜಿ ರಾಮ್ ಜಿ (VB-G RAM G0ಕಾಯ್ದೆಯಡಿಯಲ್ಲಿ, ಜಿಪಿಎಸ್, ಬಯೊಮೀಟ್ರಿಕ್ ಮತ್ತು ಎಐ ಬಳಕೆ ಕಡ್ಡಾಯವಾಗಿದೆ. |
ಏಕೆ ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೆ ತರಲಾಯಿತು?
- ಗ್ರಾಮೀಣ ಜೀವನದ ಬದಲಾವಣೆ:
ನರೇಗಾ ಯೋಜನೆ ಜಾರಿಗೆ ಬಂದ ಸಂದರ್ಭದಲ್ಲಿ ಬಡತನ ಪ್ರಮಾಣವು ಹೆಚ್ಚಿತ್ತು ಆದರೆ ಈಗಿನ ಕಾಲದಲ್ಲಿ ಹಲವಾರು ತಂತ್ರಜ್ಞಾನಗಳು ಜಾರಿಗೆ ಬಂದಿರುವುದರಿಂದ ಆರ್ಥಿಕ ಪರಿಸ್ಥಿತಿಯನ್ನು ಬದಲಾಯಿಸಲು ನರೇಗಾ ಕಾಯ್ದೆಯನ್ನು ತಿದ್ದುಪಡಿ ಮಾಡಿ, ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೆ ತರಲಾಯಿತು.
- ಭ್ರಷ್ಟಾಚಾರವನ್ನು ತಡೆಗಟ್ಟಲು:
ನರೇಗಾ ಕಾಯ್ದೆಯಡಿಯಲ್ಲಿ ಹಣಕಾಸಿನ ದುರುಪಯೋಗ ಬಹಳ ಆಗುತ್ತಿತ್ತು ಜೊತೆಗೆ ಕಳಪೆ ಕಾಮಗಾರಿಗಳನ್ನು ಮಾಡಲಾಗುತ್ತಿತ್ತು. ವಿಬಿ-ಜಿ ರಾಮ್ ಜಿ ಕಾಯ್ದೆಯಡಿಯಲ್ಲಿ ಹೆಚ್ಚಿನ ತಂತ್ರಜ್ಞಾನವನ್ನು ಬಳಸಿ ಭ್ರಷ್ಟಾಚಾರವನ್ನು ತಡೆಯಬಹುದಾಗಿದೆ.
- ಹಣಕಾಸು ನಿಯಂತ್ರಣ:
ನರೇಗಾ ಕಾಯ್ದೆಯಡಿಯಲ್ಲಿ, ಕೇಂದ್ರ ಸರ್ಕಾರವೇ ವೇತನದ ಎಲ್ಲ ವೆಚ್ಚವನ್ನು ಭರಿಸಬೇಕಿತ್ತು. ಇದರಿಂದಾಗಿ ಕೇಂದ್ರ ಸರ್ಕಾರಕ್ಕೆ ಆರ್ಥಿಕ ಹೊರೆ ಹೆಚ್ಚುತ್ತಿತ್ತು. ವಿಬಿ-ಜಿ ರಾಮ್ ಜಿ ಕಾಯ್ದೆಯಡಿಯಲ್ಲಿ, ವೇತನದ ವೆಚ್ಚವನ್ನು ಕೇಂದ್ರ ಸರ್ಕಾರ 60% ಹಾಗೂ ರಾಜ್ಯ ಸರ್ಕಾರ 40% ಭರಿಸಬೇಕು.
ಈ ಒಂದು ಬದಲಾವಣೆಯಿಂದಾಗಿ ರೈತರಿಗಾಗುವ ಪ್ರಯೋಜನಗಳೇನು?
- ರೈತರಿಗೆ ಕೃಷಿ ಚಟುವಟಿಕೆಗಳನ್ನು ನಡೆಸಲು ಕಾರ್ಮಿಕರ ಅವಶ್ಯಕತೆ ಇದ್ದು, ಈ ಒಂದು ಕಾಯ್ದೆಯ ಬದಲಾವಣೆಯಿಂದಾಗಿ ಕಾರ್ಮಿಕರಿಗೆ ಬಿತ್ತನೆ ಹಾಗೂ ಕೊಯ್ಲಿನ ಸಂದರ್ಭದಲ್ಲಿ ಕೆಲಸವನ್ನು ಸ್ಥಗಿತಗೊಳಿಸಿ ರೈತರಿಗೆ ಸಕಾಲಕ್ಕೆ ಕೃಷಿ ಕಾರ್ಮಿಕರು ಲಭ್ಯವಾಗುವಂತೆ ಮಾಡಿದೆ.
- ಯಾವುದೇ ಮಧ್ಯವರ್ತಿಗಳ ನೆರವಿಲ್ಲದೆ ರೈತರು ತಮ್ಮ ಕೃಷಿಭೂಮಿಯನ್ನು ನಡೆಯುವ ಕಾಮಗಾರಿಯಲ್ಲಿ ಗಳಿಸಿದ ಹಣವನ್ನು ನೇರವಾಗಿ ರೈತರ ಖಾತೆಗೆ ಜಮಾ ಆಗುವುದರಿಂದ ಸಮಸ್ಯೆ ಉಂಟಾಗುವುದಿಲ್ಲ.
- ಈ ಒಂದು ಯೋಜನೆಯಡಿಯಲ್ಲಿ ರೈತರಿಗೆ ತಮ್ಮ ಜಮೀನಿನಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಹಾಗೂ ಕುರಿ ಕೋಳಿ ಇತ್ಯಾದಿಗಳನ್ನು ಸಾಕಾಣಿಕೆ ಮಾಡಲು ಸಹಾಯಧನವನ್ನು ನೀಡುತ್ತದೆ.
ಇದರ ಹಿಂದಿನ ಉದ್ದೇಶಗಳೇನು?
- ಕೇವಲ ಗುಂಡಿ ತೆಗೆಯುವ ಕೆಲಸಕ್ಕಿಂತ ಹೆಚ್ಚಿನ ಕಾಲ ಬಾಳಿಕೆ ಬರುವ ರಸ್ತೆ ಮತ್ತು ಕೆರೆ ನಿರ್ಮಾಣಕ್ಕೆ ಒಟ್ಟು ನೀಡುವುದು.
- ಸರಿಯಾದ ಸಮಯದಲ್ಲಿ ಕೃಷಿ ಚಟುವಟಿಕೆಗಳು ನಡೆಯುವಂತೆ ನೋಡಿಕೊಳ್ಳುವುದು.
- ಕಾರ್ಮಿಕರಿಗೆ ಹೆಚ್ಚುವರಿಯಾಗಿ 25 ದಿನಗಳು ಕೆಲಸಮಾಡಲು ಅವಕಾಶ ಕಲ್ಪಿಸುವುದು.
- ಕೇಂದ್ರ ಸರ್ಕಾರಕ್ಕಿರುವ ಹಣಕಾಸಿನ ಹೊರೆಯನ್ನು ಕಡಿಮೆ ಮಾಡುವುದು.
ರೈತರು ಕಡ್ಡಾಯವಾಗಿ ಪಾಲಿಸಬೇಕಾದ ವಿಶೇಷ ಸೂಚನೆ:
- ಕಾರ್ಮಿಕರು ತಮ್ಮ ಬ್ಯಾಂಕ್ ಖಾತೆಯನ್ನು ಕಡ್ಡಾಯವಾಗಿ ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿಸಿರಬೇಕು.
- ಈ ಯೋಜನೆಯಡಿಯಲ್ಲಿ ಕಾರ್ಮಿಕರಿಗೆ ಕೆಲಸ ಮುಗಿಸಿದ 15 ದಿನದ ಒಳಗಾಗಿ ಕೂಲಿ ಪಾವತಿಯಾಗಬೇಕು. ಒಂದು ವೇಳೆ ನಿಗದಿತ ದಿನಾಂಕದೊಳಗೆ ಪಾವತಿಯಾಗದಿದ್ದಲ್ಲಿ ಪಾವತಿ ವಿಳಂಬ ಪರಿಹಾರವನ್ನು ನೀಡುವ ಅವಕಾಶವಿದೆ.
- ದಿನ ಕೂಲಿ ಪಡೆಯಲು ಕಾರ್ಮಿಕರು ಕಡ್ಡಾಯವಾಗಿ ದಿನಕ್ಕೆ ಎರಡು ಬಾರಿ ಆಪ್ ಮೂಲಕ ಫೋಟೋ ಸಹಿತ ಡಿಜಿಟಲ್ ಹಾಜರಾತಿ ನೀಡುವುದು ಕಡ್ಡಾಯವಾಗಿದೆ.
ತೀರ್ಮಾನ:
ಕೇಂದ್ರ ಸರ್ಕಾರವು ಎಂ ಜಿ ನರೇಗಾ ಯೋಜನೆಯನ್ನು ರದ್ದುಗೊಳಿಸಿ ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೆ ತಂದಿದೆ. ಭ್ರಷ್ಟಾಚಾರ ರಹಿತ ಮತ್ತು ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಕೇಂದ್ರ ಸರ್ಕಾರದ ಮುಖ್ಯ ನಿಲುವಾಗಿದೆ. ಆದರೆ ರಾಜ್ಯ ಸರ್ಕಾರವು ಈ ಒಂದು ಕಾಯ್ದೆಯ ಜಾರಿಗೆ ಸಂಪೂರ್ಣ ಒಪ್ಪಿಗೆ ಸೂಚಿಸಿಲ್ಲ. ಈ ಒಂದು ಕಾಯ್ದೆಯಡಿಯಲ್ಲಿ ರೈತರಿಗೆ ಕೃಷಿ ಚಟುವಟಿಕೆ ನಡೆಸುವ ಸಮಯದಲ್ಲಿ ಕಾರ್ಮಿಕರ ಕೊರತೆ ನೀಗಿಸಲು 60 ದಿನಗಳ ಕಡ್ಡಾಯ ವಿರಾಮವನ್ನು ಕಾರ್ಮಿಕರಿಗೆ ನೀಡುವ ಮೂಲಕ ರೈತರ ಜೇವನಕ್ಕೆ ಹೆಚ್ಚಿನ ನೆಮ್ಮದಿ ದೊರೆತಿದೆ.







