ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನವು ಕರ್ನಾಟಕದ ಪ್ರಮುಖ ಪ್ರವಾಸೋದ್ಯಮ ಮತ್ತು ವನ್ಯಜೀವಿ ಸಂರಕ್ಷಣಾ ಕೇಂದ್ರದಲ್ಲಿ ಒಂದಾಗಿದ್ದು, ವನ್ಯಜೀವಿಗಳ ಸಂರಕ್ಷಣೆ, ಪೋಷಣೆ ಮತ್ತು ವನ್ಯಜೀವಿಗಳು ವಾಸಸ್ಥಳದ ಉತ್ತಮ ನಿರ್ವಹಣೆಗಾಗಿ ಸಿಬ್ಬಂದಿಗಳ ಅಗತ್ಯವಿದೆ. ಹಾಗಾಗಿ 2026 ನೇ ಸಾಲಿನಲ್ಲಿ ಪ್ರಾಣಿ ಪಾಲಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಂದೇ ಅರ್ಜಿ ಸಲ್ಲಿಸಿ.
Bannerghatta Biological Park Recruitment 2026
ಈ ಹುದ್ದೆಗಳಿಗೆ ಸಂಬಂಧಿಸಿದಂತೆ ನಮ್ಮ ವೆಬ್ ಸೈಟ್ ಉದ್ಯೋಗ ಸಲಹೆ ಯಲ್ಲಿ ಸಂಪೂರ್ಣ ಮಾಹಿತಿಯನ್ನು ನೋಡಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಿ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ, ಅರ್ಹತಾ ಮಾನದಂಡ, ಅಗತ್ಯ ದಾಖಲೆಗಳು ಹಾಗೂ ಇನ್ನಿತರೆ ಮಾಹಿತಿಗಳ ಬಗ್ಗೆ ಸಂಪೂರ್ಣವಾಗಿ ಕೆಳಗೆ ನೀಡಿರುತ್ತೇವೆ ಅದನ್ನು ಓದಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ.
ಹುದ್ದೆಗಳ ಅವಲೋಕನ: (Bannerghatta Biological Park Recruitment 2026)
| ಸಂಸ್ಥೆಯ ಹೆಸರು | ಬನ್ನೇರುಘಟ್ಟ ಜೈವಿಕ ಉದ್ಯಾನವನ |
| ಹುದ್ದೆಯ ಹೆಸರು | ಪ್ರಾಣಿ ಪಾಲಕ |
| ಹುದ್ದೆಯ ಸಂಖ್ಯೆ | 05 |
| ಉದ್ಯೋಗ ಸ್ಥಳ | ಬೆಂಗಳೂರು |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 08-01-2026 |
ಸಂಕ್ಷಿಪ್ತ ಮಾಹಿತಿ:
Bannerughatta Biological Park Recruitment 2026 : ಬೆಂಗಳೂರಿನಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನವು ಒಟ್ಟು 05 ಪ್ರಾಣಿ ಪಾಲಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಈ ಹುದ್ದೆಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ. ಪ್ರಾಣಿ ಪಾಲಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ರೂ. 30,000 ದ ವರೆಗೆ ವೇತನವನ್ನು ಪಡೆದುಕೊಳ್ಳಬಹುದು. ಪ್ರಾಣಿ ಸಂಗ್ರಹಾಲಯದಲ್ಲಿ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಮತ್ತು ಪ್ರಾಣಿಗಳನ್ನು ಪೋಷಿಸಲು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣವಕಾಶ. ಪ್ರಕೃತಿ ಮತ್ತು ವನ್ಯ ಜೀವಿಗಳ ಜೊತೆಗೆ ಕೆಲಸ ಮಾಡಲು ಬಯಸಿವವರಿಗೆ ಇದೊಂದು ಉತ್ತಮ ವೇದಿಕೆಯಾಗಿದೆ.
ಹುದ್ದೆಗಳ ವಿವರ:
ಒಟ್ಟು 05 ಪ್ರಾಣಿ ಪಾಲಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಅಭ್ಯರ್ಥಿಗಳನ್ನು ಈ ಒಂದು ಹುದ್ದೆಗೆ ಮೆರಿಟ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
ಶೈಕ್ಷಣಿಕ ಅರ್ಹತೆ: Bannerghatta Biological Park Recruitment 2026
- ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಲೈಫ್ ಸೈನ್ಸ್ ವಿಷಯದಲ್ಲಿ ಬಿ.ಎಸ್ಸಿ ಪದವಿಯನ್ನು ಹೊಂದಿರಬೇಕು.
- ಪ್ರಾಣಿಗಳ ನಡವಳಿಕೆ ಮತ್ತು ಆರೈಕೆಗಳ ಬಗ್ಗೆ ಸ್ವಲ್ಪ ತಿಳುವಳಿಕೆ ಇರುವವರಿಗೆ ಮೊದಲ ಆದ್ಯತೆ ನೀಡಲಾಗುವುದು.
ವಯೋಮಿತಿ:
- ಕರ್ನಾಟಕ ಸರ್ಕಾರಗಳ ನಿಯಮದ ಪ್ರಕಾರ ಬನ್ನೇರುಘಟ್ಟ ಜೈವಿಕ ವಿದ್ಯಾನವನ ಸಂಸ್ಥೆಯ ಪ್ರಾಣಿ ಪಾಲಕ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ರಿಂದ ಗರಿಷ್ಠ 35 ವರ್ಷ ವಯೋಮಿತಿಯನ್ನು ಹೊಂದಿರಬೇಕು.

ವಯೋಮಿತಿ ಸಡಿಲಿಕೆ:
- ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪ್ರಾಣಿ ಪಾಲಕ ಹುದ್ದೆಗಳ ನೇಮಕಾತಿ ಅಧಿಸೂಚನೆಯಲ್ಲಿ ಯಾವುದೇ ರೀತಿಯ ವಯೋಮಿತಿ ಸಡಿಲಿಕೆಯ ಬಗ್ಗೆ ಮಾಹಿತಿಯನ್ನು ನೀಡಿಲ್ಲ.
ಅರ್ಜಿ ಶುಲ್ಕ: Bannerghatta Biological Park Recruitment 2026
ಬನ್ನೇರುಘಟ್ಟ ಜೈವಿಕ ಉದ್ಯಾನವನ ಇಲಾಖೆಯ ಪ್ರಾಣಿ ಪಾಲಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ. ಅಭ್ಯರ್ಥಿಗಳು ತಮ್ಮ ವಯಕ್ತಿಕ ವಿವರಗಳೊಂದಿಗೆ ನೇರವಾಗಿ ಸಂದರ್ಶನನದಲ್ಲಿ ಭಾಗಿಯಾಗಬಹುದು.
ವೇತನ ಶ್ರೇಣಿ:
- ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನ ಇಲಾಖೆಯ ನಿಯಮಗಳ ಅನುಸಾರ ಮಾಸಿಕ ರೂ. 30,000 ದ ವರೆಗೆ ನೀಡಲಾಗುವುದು.
ಅಗತ್ಯ ದಾಖಲೆಗಳು:
- ಶೈಕ್ಷಣಿಕ ಪ್ರಮಾಣಪತ್ರ
- ರೆಸ್ಯೂಮ್
- ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಆದಾಯ ಮತ್ತು ಜಾತಿ ಪ್ರಮಾಣಪತ್ರ
- ಓಟರ್ ಐಡಿ
ಅರ್ಜಿ ಸಲ್ಲಿಸುವ ವಿಧಾನ: Bannerghatta Biological Park Recruitment 2026
- ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ವೈಯಕ್ತಿಕ ವಿವರಗಳನ್ನು ಸಿದ್ದ ಪಡಿಸಿಕೊಳ್ಳಬೇಕು.
- ಸಿದ್ದ ಪಡಿಸಿದ ವಿವರಗಳನ್ನು ದಿನಾಂಕ 08-01-2026 ರ ಒಳಗೆ ಇಮೇಲ್ ಐಡಿ ed@bannerughattabiopark.org ಗೆ ಕಳುಹಿಸಬೇಕು.
- ಅಭ್ಯರ್ಥಿಗಳು ಇಮೇಲ್ ಕಳುಹಿಸಿದ ನಂತರ, ದಿನಾಂಕ 09-01-2026 ರಂದು ನೇರಸಂದರ್ಶನಕ್ಕೆ ಹಾಜರಿರಬೇಕು.
- ಅಭ್ಯರ್ಥಿಗಳು ಸಂದರ್ಶನದ ದಿನದಂದು ಎಲ್ಲ ಮೂಲ ಶೈಕ್ಷಣಿಕ ದಾಖಲೆಗಳು ಹಾಗೂ ಗುರುತಿನ ಚೀಟಿಯ ಪ್ರತಿಯನ್ನು ತರಬೇಕು.
| ಸಂದರ್ಶನ ನಡೆಯುವ ಸ್ಥಳ: “ಕಾರ್ಯ ನಿರ್ವಾಹಕ ನಿರ್ದೇಶಕ ಕಚೇರಿ, ಬನ್ನೇರುಘಟ್ಟ ಜೈವಿಕ ಉದ್ಯಾನವನ, ಬೆಂಗಳೂರು -560083 |
ಪ್ರಮುಖ ದಿನಾಂಕಗಳು:
| ವಿವರಗಳು | ದಿನಾಂಕಗಳು |
| ಇಮೇಲ್ ಮೂಲಕ ವಿವರ ಸಲ್ಲಿಸಲು ಕೊನೆಯ ದಿನಾಂಕ | 08-01-2026 |
| ನೇರ ಸಂದರ್ಶನದ ದಿನಾಂಕ | 09-01-2026 |
ಆಯ್ಕೆ ಪ್ರಕ್ರಿಯೆ:
- ದಾಖಲಾತಿ ಪರಿಶೀಲನೆ
- ವೈಯಕ್ತಿಕ ಸಂದರ್ಶನ
ಪ್ರಮುಖ ಲಿಂಕ್ ಗಳು:
| ಅಧಿಸೂಚನೆಯ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್ ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಇಮೇಲ್ ಮೂಲಕ ಅರ್ಜಿ ಸಲ್ಲಿಸಲು | ed@bannerughattabiopark.org |
ತೀರ್ಮಾನ:
ಕರ್ನಾಟಕ ಅರಣ್ಯ ಇಲಾಖೆಯ ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪ್ರಾಣಿ ಪಾಲಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ಒಂದು ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ಅರಣ್ಯ ಇಲಾಖೆ SSR ನಿಯಮಗಳ ಪ್ರಕಾರ ಅರೆ ಕೌಶಲ್ಯ ವೇತನ ನೀಡಲಾಗುವುದು. ಈ ಒಂದು ಹುದ್ದೆಯ ನೇಮಕಾತಿಯು ನೇರ ಸಂದರ್ಶನದ ಮೂಲಕ ನಡೆಯಲಿದ್ದು ನಿಗದಿತ ಕೊನೆಯ ದಿನಾಂಕದೊಳಗಾಗಿ ಇಮೇಲ್ ಮೂಲಕ ಅರ್ಜಿ ಸಲ್ಲಿಸಿ ಈ ಹುದ್ದೆಯನ್ನು ತಮ್ಮದಾಗಿಸಿಕೊಳ್ಳಿ.





