ಮಕ್ಕಳ ಶಾಲೆಯ ಫೀಸ್ ಚಿಂತೆಗೆ ಗುಡ್ ಬೈ JK ಟೈರ್ಸ್ ಕೊಡ್ತಿದೆ ₹1 ಲಕ್ಷ ಸ್ಕಾಲರ್ಶಿಪ್! ನಮಸ್ಕಾರ ಕರ್ನಾಟಕ ನಮ್ಮ ಕರ್ನಾಟಕದಲ್ಲಿ ತುಂಬ ಚುರುಕಾಗಿ ಓದುವ ಮಕ್ಕಳಿಗೆ ಫೀಸ್ ಕಟ್ಟಲಾಗದೆ ಶಿಕ್ಷಣ ನಿಲ್ಲಿಸಬೇಕಾ ಅಂತ ತಲೆ ಕೆಡಿಸಿಕೊಂಡಿದ್ದೀರಾ ? ಇನ್ ನಿಮ್ಮಗೆ ಆ ಚಿಂತೆ ಬೇಡ ಯಾಕಂದ್ರೆ ಭಾರತದಲ್ಲೇ ಪ್ರತಿಷ್ಠಿತ ಕಂಪನಿಯಾದ JK ಟೈರ್ಸ್ ‘ಶಿಕ್ಷಾ ಸಾರಥಿ ಸ್ಕಾಲರ್ಶಿಪ್’ ಯೋಜನೆ ಅಡಿ 10th, 12th, ಐಟಿಐ, ಡಿಪ್ಲೊಮಾ, ಡಿಗ್ರಿ, ಇಂಜಿನಿಯರಿಂಗ್, ಮೆಡಿಕಲ್ ಯಾವುದೇ ಕೋರ್ಸ್ ಓದುತ್ತಾ ಇದ್ರೆ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಸಿಗುತ್ತೆ “ಭರ್ಜರಿ 1 ಲಕ್ಷ” ವಿದ್ಯಾರ್ಥಿ ವೇತನ.
JK ಟೈರ್ ಶಿಕ್ಷಾ ಸಾರಥಿ ವಿದ್ಯಾರ್ಥಿವೇತನ ಕಾರ್ಯಕ್ರಮ 2026 JK Tyre Shiksha Sarthi Scholarship 2026
ಇತ್ತೀಚಿನ ದಿನಗಳಲ್ಲಿ ಮಕ್ಕಳು ಓದುತ್ತವೋ ಎಲ್ಲವೊ ಗೊತ್ತಿಲ್ಲ ಆದರೆ ಪ್ರೈಮರಿ ಶಾಲೆಯಿಂದ ಹಿಡಿದು ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳವರೆಗೆ ಶುಲ್ಕಗಳು ಲಕ್ಷಾಂತರ ರೂಪಾಯಿಗಳನ್ನು ತಲುಪುತ್ತಿವೆ ಆದರೂ ಕೂಡ ಇಂದಿನ ಪೋಷಕರು ಸರ್ಕಾರೀ ಶಾಲೆ ಕಾಲೇಜ್ ಗಳು ಬಿಟ್ಟು ಸಾಲ ಮಾಡಿ ಖಾಸಗಿ ಸಂಸ್ಥೆಯಲ್ಲಿ ಶಿಕ್ಷಣವನ್ನ ಕೊಡಿಸುವ ತಂದೆ ತಾಯಿಗಳು ನಮ್ಮ ನಿಮ್ಮ ಕಣ್ಣ್ ಮುಂದೆ ದಿನ ನಿತ್ಯ ಅಲ್ಲಿ ಇಲ್ಲಿ ನೋಡ್ತಿರ್ತೀವಿ. ಇದು ಯಾವ ತಂದೆ ತಾಯಿ ತಪ್ಪಲ್ಲ ಮಗ ಅಥವಾ ಮಗಳು ಓದಬೇಕು ಉತ್ತಮ ಶಿಕ್ಷಣ ತಾಗ್ಬೇಕು ಬೇಗ ದೊಡ್ಡವನಾಗಿ ಒಳ್ಳೆಯ ಉದ್ಯೋಗ ಹಿಡಿಬೇಕು ಎನ್ನುವುದು ಪ್ರತಿಯೊಬ್ಬ ಅಪ್ಪ ಅಮ್ಮನ ಆಶೆಯವಾಗಿರುತ್ತದೆ.
ಆದರೇ,,,, ಇವತ್ತಿನ ಒಂದು ದಿನಗಳಲ್ಲಿ ಶಿಕ್ಷಣ ಎನ್ನುವುದು ಬಡ ಕುಟುಂಬಗಳಿಗೆ ಅತಿದೊಡ್ಡ ಸವಾಲಾಗಿ ಪರಿಣಮಿಸಿದೆ ಯಾಕಂದ್ರೆ ಬಡವರ ಮಕ್ಕಳಲ್ಲಿ ಓದುವ ಛಲ ಹಾಗೆ ವಿದ್ಯೆ ಕೂಡ ಅವರ ಬಳಿ ಇರುತ್ತೆ ಹಣ ವಿಲ್ಲದೆ ತಾನು ಓದಬೇಕು ಸಮಾಜದಲ್ಲಿ ನಾನು ಒಬ್ಬ ಅಧಿಕಾರಿ ಯಾಗಿ ಸೇವೆ ಸಲ್ಲಿಸಬೇಕು ಎನ್ನುವ ಕನಸು ಅನೇಕರಿಗೆ ಹಣದ ಕೊರತೆಯಿಂದಲೇ ಮುರಿದು ಬೀಳುತ್ತಿದೆ.
ವಿದ್ಯಾರ್ಥಿ ವೇತನದ ಬಗ್ಗೆ :- JK Tyre Shiksha Sarthi Scholarship
ಇಂತಹ ವಿದ್ಯಾರ್ಥಿಗಳ ಸಮಸ್ಯೆ ಯನ್ನ ಮನಗೊಂಡ ಭಾರತದ ಉತ್ತಮ ಸಂಸ್ಥೆಗಳು ವಿದ್ಯಾರ್ಥಿಗಳ ಆರ್ಥಿಕ ತೊಂದರೆಯಿಂದ ಶಿಕ್ಷಣ ಕೈಬಿಡಬಾರದು ಎಂಬ ಉದ್ದೇಶದಿಂದ ಖಾಸಗಿ ಕಂಪನಿಗಳು ಕೆಲವೊಂದು ಮಹತ್ವದ ನಿರ್ಧಾರವನ್ನ ತೆಗೆದುಕೊಂಡು ಮುಂದೆ ಬರುವುದು ಭಾರತದಂತ ದೇಶದಲ್ಲಿ ಉತ್ತಮ ಸಂಗತಿ ಅಂತಾನೆ ಹೇಳಬಹುದು ಹೇಗಂದರೆ ಈ ಸಂಸ್ಥೆ ಬಡ ಮತ್ತು ಮಾಧ್ಯಮ ವರ್ಗಗಳ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅವರು ಮುಂದು ವಾರೆವ ತನಕ ಇಂತಸ್ಕಾಲರ್ಶಿಪ್ ಗಳು ಅನೇಕ ಕಂಪನಿಗಳು ಕೊಡುವುದರಿಂದ ಮಕ್ಕಳಿಗೆ ಆರ್ಥಿಕವಾಗಿ ಬೆಂಬಲ ಸಿಕ್ಕಂತಾಗುತದ್ದೆ ಯಾವ ವಿದ್ಯಾರ್ಥಿ ಕೂಡ ಶೈಕ್ಷಣದಿಂದ ವಂಚಿತರಾಗುವುದಿಲ್ಲ.
ಈ ಒಂದು ಸ್ಕಾಲರ್ಶಿಪ್ ಬಗ್ಗೆ ಸಂಬಂಧಿಸಿದಂತೆ ನಮ್ಮ ವೆಬ್ ಸೈಟ್ ಉದ್ಯೋಗ ಸಲಹೆ ಯಲ್ಲಿ ಸಂಪೂರ್ಣ ಮಾಹಿತಿಯನ್ನು ನೋಡಬಹುದು. ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವ ಮೊದಲು ಸ್ಕಾಲರ್ಶಿಪ್ ಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ಅಗತ್ಯ ದಾಖಲೆಗಳು, ಅರ್ಹತಾ ಮಾನದಂಡ ಹಾಗೂ ಇನ್ನಿತರೆ ಮಾಹಿತಿಗಳ ಬಗ್ಗೆ ಸಂಪೂರ್ಣವಾಗಿ ಕೆಳಗೆ ನೀಡಿರುತ್ತೇವೆ ಅದನ್ನು ಓದಿಕೊಂಡು ನಂತರ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.
ಈ ವಿದ್ಯಾರ್ಥಿ ವೇತನಕ್ಕೆ ವಿದ್ಯಾರ್ಹತೆ ಏನು ? ಎಷ್ಟು ಸ್ಕೋಲಶಿಪ್ ಸಿಗುತ್ತೆ ? ಅರ್ಜಿ ಸಲ್ಲಿಸೋದು ಹೇಗೆ ? JK Tyre Shiksha Sarthi Scholarship
| ಸ್ಕಾಲರ್ಶಿಪ್ ಹೆಸರು | ಜೆಕೆ ಟೈರ್ಸ್ ಸ್ಕಾಲರ್ಶಿಪ್ (‘ಶಿಕ್ಷಾ ಸಾರಥಿ ಸ್ಕಾಲರ್ಶಿಪ್’ ) |
| ಒಟ್ಟು ಸ್ಕ್ಯಾಲರ್ಶಿಪ್ ಹಣ | ರೂ. 1,00,000/- ದ ವರೆಗೆ ಸ್ಕಾಲರ್ಶಿಪ್ |
| ಅರ್ಜಿ ವಿಧಾನ | ಒನ್ಲೈನ್ ಮೂಲಕ ಅರ್ಜಿ ಸಲ್ಲಿಸಿ |
| ಆಯ್ಕೆ ವಿಧಾನ | ಅಂಕಗಳು, ಆದಾಯ ಆಧಾರಿತ |
| ಅರ್ಜಿ ಶುಲ್ಕ | ಯಾವುದೇ ಅರ್ಜಿ ಶುಲ್ಕ ನಿಗದಿಪಡಿಸಿಲ್ಲ |
ಸಂಕ್ಷಿಪ್ತ ಮಾಹಿತಿ:
ಜೆಕೆ ಟೈರ್ಸ್ ಸ್ಕಾಲರ್ಶಿಪ್ (‘ಶಿಕ್ಷಾ ಸಾರಥಿ ಸ್ಕಾಲರ್ಶಿಪ್’ ) ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನ ಮೂಲಕ ರೂ. 1,00,000 ವರೆಗೆ ಸಹಾಯಧನವನ್ನು ನೀಡುತ್ತಿದ್ದು, 10th, 12th, ಐಟಿಐ, ಡಿಪ್ಲೊಮಾ, ಡಿಗ್ರಿ, ಇಂಜಿನಿಯರಿಂಗ್, ಮೆಡಿಕಲ್ ಯಾವುದೇ ಕೋರ್ಸ್ ಓದ್ತಾ ಇದ್ರೆ ಒಕೆ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇಂತ ಸ್ಕ್ಯಾರ್ಶಿಪ್ ವಿದ್ಯಾರಿಗಳಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚು ಹೆಚ್ಚು ತಮ್ಮನ್ನ ತಾವು ತೊಡಗಿಸಿಕೊಳ್ಳಲು ಪ್ರೋತ್ಸಹಿಸುತ್ತವೆ ಎಂದರೆ ತಪ್ಪಾಗಲಾರದು.
ಈ ಸ್ಕಾಲರ್ಶಿಪ್ ಮೊತ್ತ ಮೊದಲು ನಮ್ಮ ಭಾರತ ದೇಶದಲ್ಲಿ ಜೆಕೆ ಟೈರ್ ಅವರ ‘ಶಿಕ್ಷಾ ಸಾರಥಿ ಸ್ಕಾಲರ್ಶಿಪ್’ ಯೋಜನೆಯು ಮೊದಲು 2023 ರಲ್ಲಿ ಪ್ರಾರಂಭವಾಯಿತು. 2026ರ ಸಾಲಿಗೆ ಈ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲಾಗಿದ್ದು, ಸುಮಾರು 500 ಅರ್ಹ ವಿದ್ಯಾರ್ಥಿನಿಯರಿಗೆ ನೆರವು ನೀಡಬೇಕೆಂಬ ಪ್ರಮುಖ ಉದ್ದೇಶವನ್ನ ಒಳಗೊಂಡಿದೆ.
ಮತ್ ಯಾಕೆ ತಡ ಮಾಡುವುದು ಈ ಸ್ಕೊಲಶಿಪ್ ನ ಬಗ್ಗೆ ಸಂಪೂರ್ಣವಾಗಿ ಮುಂದಿನ ಹಂತದಲ್ಲಿ ತಿಳ್ಸ್ಕೊತಾ ಹೋಗ್ತೀನಿ ಬನ್ನಿ…
ಶೈಕ್ಷಣಿಕ ಅರ್ಹತೆ:- JK Tyre Shiksha Sarthi Scholarship
- 10th, 12th, ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
- ಪದವಿ, ಡಿಪ್ಲೊಮಾ, ಐಟಿಐ ಓದುತ್ತಿರುವ ವಿದ್ಯಾರ್ಥಿಗಳು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
- ವೃತ್ತಿಪರ ಕೋರ್ಸ್ ಅಂದರೆ ಇಂಜಿನಿಯರಿಂಗ್, ಮೆಡಿಕಲ್, MBA ಎಲ್ಲ ವಿದ್ಯಾರ್ಥಿಗಳು ಕೂಡ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಸಹಾಯಧನದ ವಿವರ:-JK Tyre Shiksha Sarthi Scholarship
| ಅರ್ಹ ವಿದ್ಯಾರ್ಥಿಗಳು | ಒಟ್ಟು ಸಹಾಯಧನ |
| 11ನೇ ತರಗತಿ, 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು | ಈ ಯೋಜನೆ ಮುಖ್ಯವಾಗಿ ಉನ್ನತ ಶಿಕ್ಷಣಕ್ಕೆ ಮಾತ್ರ (ಪದವಿ ಮತ್ತು ಡಿಪ್ಲೋಮಾ) ಆದ್ಯತೆ ನೀಡುತ್ತದೆ. ಕೆಲವು ಸಮಯದಲ್ಲಿ ಮಾತ್ರ ವಿಶೇಷ ಸ್ಕ್ಯಾಲರ್ಶಿಪ್ ನ ಅಡಿ ಶಾಲಾ ವಿದ್ಯಾರ್ಥಿಗಳಿಗೂ ಕೂಡ ಆರ್ಥಿಕ ನೆರವು ಸಿಗುವ ಸಾಧ್ಯತೆ ಇರುತ್ತದೆ. ಪದವಿ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಮಾತ್ರ ಸರಿಯಾಗಿ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. |
| ಇಂಜಿನಿಯರಿಂಗ್ ಮತ್ತು ಮೆಡಿಕಲ್ ಬಿ.ಇ, ಬಿ.ಟೆಕ್, ಬಿ.ಎಸ್ಸಿ ನರ್ಸಿಂಗ್, ನಂತಹ ವೃತ್ತಿಪರ ಪದವಿಗಳಿಗೆ ವರ್ಷಕ್ಕೆ ₹25,000 ವಿದ್ಯಾರ್ಥಿ ವೇತನ ನೀಡಲಾಗುತ್ತದೆ. | ₹25,000 |
| ಪದವಿ B.A, B.Com, B.Sc, B.B.A, B.C.A, ಸಾಮಾನ್ಯ ಪದವಿ ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹15,000 ವಿದ್ಯಾರ್ಥಿ ವೇತನ ನೀಡಲಾಗುತ್ತದೆ. | ₹15,000 |
| ಡಿಪ್ಲೋಮಾ ಮತ್ತು ಐಟಿಐ ಡಿಪ್ಲೋಮಾ ಅಥವಾ ಐಟಿಐ ಕೋರ್ಸ್ ಓದುತ್ತಿರುವವರಿಗೆ ವರ್ಷಕ್ಕೆ ₹15,000 ಸಹಾಯಧನ ದೊರೆಯುತ್ತದೆ. | ₹15,000 |
ಯಾರು ಅರ್ಹರು ?
- ಈ ವಿದ್ಯಾರ್ಥಿ ವೇತನ ಪಡೆಯುವ ಅರ್ಹತೆ ಹೊಂದಿರುವವರು ಹೆಣ್ಣುಮಕ್ಕಳು ಮಾತ್ರ
- ಅರ್ಜಿದಾರರ ತಂದೆ/ತಾಯಿ ಹೆವಿ ಮೋಟಾರ್ ವೆಹಿಕಲ್ (HMV) ವಾಹನ ಚಾಲಕರಾಗಿರಬೇಕು ಅಂದರೆ ಮೇಲೆ ಮಾತ್ರ ಈ ಸ್ಕೊಲಶಿಪ್ ಪಡೆಯಬಹು ದಾಗಿರುತ್ತದೆ.
- ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ, ತಮಿಳುನಾಡು, ರಾಜಸ್ಥಾನ, ಮಧ್ಯಪ್ರದೇಶ ಅಥವಾ ಉತ್ತರಾಖಂಡ ರಾಜ್ಯದ ಕಾಯಂ ನಿವಾಸಿ ಯಾಗಿದ್ದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
- ವಿದ್ಯಾರ್ಥಿಗಳು ಯಾವುದೇ ಮಾನ್ಯತೆ ಪಡೆದ ಕಾಲೇಜಿನಲ್ಲಿ ಸಾಮಾನ್ಯ ಪದವಿ, ವೃತ್ತಿಪರ ಪದವಿ, ಅಥವಾ ಡಿಪ್ಲೋಮಾ ಕೋರ್ಸ್ಗೆ ದಾಖಲಾಗಿರ ಬೇಕಾಗುತ್ತದೆ.
- ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 55% ರಷ್ಟು ಅಂಕಗಳನ್ನು ಪಡೆದಿರಬೇಕು.
- ಕುಟುಂಬದ ಒಟ್ಟು ವರ್ಷದ ಆದಾಯ ₹5,00,000 (5 ಲಕ್ಷ) ಅಥವಾ ಅದಕ್ಕಿಂತ ಕಡಿಮೆ ಇರಬೇಕು.
ಪ್ರಮುಖ ಸೂಚನೆ : ಜೆಕೆ ಟೈರ್ ಅಥವಾ ktyre’ ಸಂಸ್ಥೆಯ ಉದ್ಯೋಗ ಮಾಡುತ್ತಿರುವ ಮಕ್ಕಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಆಗುವುದಿಲ್ಲ.
ವಿದ್ಯಾರ್ಥಿಗಳ ಅಗತ್ಯ ದಾಖಲೆಗಳು:
- ಶೈಕ್ಷಣಿಕ ಅಂಕಪಟ್ಟಿ
- ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಛಾಯಾಚಿತ್ರ
- 10 ನೇ ತರಗತಿ ಮತ್ತು 12 ನೇ ತರಗತಿಯ ಅಂಕಪಟ್ಟಿ
- ಆಧಾರ್ ಕಾರ್ಡ್
- ಕಾಲೇಜ್ ನ ಪ್ರಸ್ತುತ ಪ್ರವೇಶ ಪುರಾವೆ
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಹಿಂದಿನ ವರ್ಷದ ಅಂಕಪಟ್ಟಿ
- ಬೋಧನಾ ಶುಲ್ಕಗಳು, ಹಾಸ್ಟೆಲ್ ಶುಲ್ಕಗಳು, ಪುಸ್ತಕಗಳು ಶುಲ್ಕ, ಇತ್ಯಾದಿ
- ಬ್ಯಾಂಕ್ ಪಾಸ್ ಬುಕ್
- ಇಮೇಲ್ ಐಡಿ
- ಪೋಷಕರ ವೃತ್ತಿಯನ್ನು ಪರಿಶೀಲಿಸಲು ಈ ಕೆಳಗಿನ ಯಾವುದೇ ದಾಖಲೆಗಳನ್ನು ಒದಗಿಸಿ, ಶ್ರಮಿಕ್ ಕಾರ್ಡ್,ಹೆವಿ ಮೋಟಾರ್ ವೆಹಿಕಲ್ ಡ್ರೈವಿಂಗ್ ಪರವನಿಗೆ.
- ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವ ಸರಳ ವಿಧಾನ: JK Tyre Shiksha Sarthi Scholarship
- ಮೊದಲು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಪೋರ್ಟಲ್ ಗೆ ಭೇಟಿನೀಡಿ.
- ನಂತರ ನೀವು ಈ ಸಂಸ್ಥೆ ಅಡಿಯಲ್ಲಿ ಮೊದಲ ಬಾರಿಗೆ ಅರ್ಜಿ ಸಲ್ಲಿಸುತ್ತಿದ್ದರೆ, ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಅಥವಾ ಗೂಗಲ್ ಖಾತೆಯನ್ನು ಬಳಸಿ ಹೊಸ ಖಾತೆಯನ್ನು ರಚಿಸಿಕೊಳ್ಳಿ.
- ನಂತರ ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿಮಾಡಿ.
- ನಿಮ್ಮ ನೋಂದಾಯಿತ ವಿವರಗಳೊಂದಿಗೆ ಲಾಗಿನ್ ಆದ ನಂತರ, ‘JK Tyre Shiksha Sarthi Scholarship Program’ ಅರ್ಜಿ ನಮೂನೆ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ.
- ಅರ್ಜಿ ಪ್ರಕ್ರಿಯೇ ಆರಂಭಿಸಲು Start Application ಬಟನ್ ಮೇಲೆ ಕ್ಲಿಕ್ ಮಾಡಿ.
- ಶೈಕ್ಷಣಿಕ ವಿವರಗಳು, ವೈಯಕ್ತಿಕ ಮಾಹಿತಿ ಮತ್ತು ಪೋಷಕರ ಉದ್ಯೋಗದ ವಿವರಗಳನ್ನು ಕೇಳುವ ಯಲ್ಲ ದಾಖಲೆಯನ್ನ ಸರಿಯಾಗಿ ಭರ್ತಿ ಮಾಡಿ.
- ಆಧಾರ್ ಕಾರ್ಡ್, ಹಿಂದಿನ ಸಾಲಿನ ಅಂಕಪಟ್ಟಿ, ಪ್ರಸಕ್ತ ಸಾಲಿನ ಪ್ರವೇಶಾತಿ ದಾಖಲೆ ಮತ್ತು ತಂದೆಯ ವಾಣಿಜ್ಯ ಡ್ರೈವಿಂಗ್ ಲೈಸೆನ್ಸ್ (HMV) ಸೇರಿದಂತೆ ಅಗತ್ಯ ಇರುವಂತಹ ದಾಖಲೆಗಳನ್ನ ಭರ್ತಿ ಮಾಡಿ ಅಪ್ಲೋಡ್ ಮಾಡಿ.
- ಅಗತ್ಯ ದಾಖಲೆಗಳನ್ನು ಎಲ್ಲವನ್ನ ಸರಿಯಾಗಿ ಆನ್ಲೈನ್ ಮೂಲಕ ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಲು ಕೆಲವು ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಂಡು ‘Submit’ ಬಟನ್ ಮೇಲೆ ಒತ್ತಿ.
| ಈ ವಿದ್ಯಾರ್ಥಿ ಪ್ರೋತ್ಸಹ ದನದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ Buddy4Study ಅಧಿಕೃತ ಪುಟದಲ್ಲಿ ನಿಯಮಿತವಾಗಿ ಪರಿಶೀಲಿಸಿ. |
ಅಂತಿಮ ತೀರ್ಮಾನ: JK Tyre Shiksha Sarthi Scholarship 2026
ಈ ಜೆಕೆ ಟೈರ್ ‘ಶಿಕ್ಷಾ ಸಾರಥಿ ಸ್ಕಾಲರ್ಶಿಪ್‘ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ₹1 ಲಕ್ಷದವರೆಗೆ ಸ್ಕಾಲರ್ಶಿಪ್ ನೀಡುವ ಅತ್ಯುತ್ತಮ ಸಂಸ್ಥೆ ಅಂತಾನೆ ಹೇಳ ಬಹುದು, ಈ ಒಂದು ವಿದ್ಯಾರ್ಥಿ ವೇತನದಿಂದ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುವುದಿಲ್ಲ ಭಾರತದಂತ ದೇಶದಲ್ಲಿ ಎಲ್ಲ ಸ್ಥಾನದಲ್ಲೂ ಕೂಡ ಗಂಡಿಗೆ ಸರಿ ಸಮಾನವಾಗಿ ಸಮಾಜದಲ್ಲಿ ಉತ್ತಮ ಹೆಸರಿನೊಂದಿಗೆ ಅಧಿಕಾರಿಯಾಗಿ ಬೆಳೆಯಬಹುದು.
| ಹೇಗೆ ಅನೇಕ ಪ್ರೋತ್ಸಹ ದನಗಳು ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಸಿಗಬೇಕು ಕಂಪನಿಗಳು ಕೊಡುವ ಸ್ಕ್ಯಾಲರ್ಶಿಪ್ ನಿಂದ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಓದುವ ಆಸಕ್ತಿ ಕೂಡ ಹೆಚ್ಚಾಗುತ್ತದೆ ಎನ್ನುವುದು ನನ್ನದೊಂದು ಅಭಿಪ್ರಾಯ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. |





