ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಸಿಹಿಸುದ್ದಿ. ಭಾರತ್ ಹೆವಿ ಎಲೆಕ್ಟ್ರಿಕಲ್ಸ್-2026 ಪ್ರಾಜೆಕ್ಟ್ ಇಂಜಿನಿಯರ್ ಮತ್ತು ಯೋಜನಾ ಮೇಲ್ವಿಚಾರಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.
BHEL Recruitment 2026
ಈ ಹುದ್ದೆಗಳಿಗೆ ಸಂಬಂಧಿಸಿದಂತೆ ನಮ್ಮ ವೆಬ್ ಸೈಟ್ ಉದ್ಯೋಗ ಸಲಹೆ ಯಲ್ಲಿ ಸಂಪೂರ್ಣ ಮಾಹಿತಿಯನ್ನು ನೋಡಬಹುದು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ 22-12-2025 ರಿಂದ 12-01-2026 ರ ವರೆಗೂ ಅವಕಾಶವಿದ್ದು,ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ, ಅರ್ಹತಾ ಮಾನದಂಡ, ಅಗತ್ಯ ದಾಖಲೆಗಳು ಹಾಗೂ ಇನ್ನಿತರೆ ಮಾಹಿತಿಗಳನ್ನು ಸಂಪೂರ್ಣವಾಗಿ ಕೆಳಗೆ ಕೊಡಲಾಗಿರುತ್ತದೆ ನಿಗದಿಪಡಿಸಿದ ದಿನಾಂಕದೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಹುದ್ದೆಗಳ ಅವಲೋಕನ: (BHEL Recruitment 2026)
| ಸಂಸ್ಥೆಯ ಹೆಸರು | ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ |
| ಹುದ್ದೆಯ ಹೆಸರು | ಪ್ರಾಜೆಕ್ಟ್ ಇಂಜಿನಿಯರ್ ಮತ್ತು ಯೋಜನಾ ಮೇಲ್ವಿಚಾರಕರು |
| ಹುದ್ದೆಯ ಸಂಖ್ಯೆ | 20 ಹುದ್ದೆಗಳು |
| ಉದ್ಯೋಗ ಸ್ಥಳ | ಬೆಂಗಳೂರು – ಕರ್ನಾಟಕ |
| ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 22-12-2025 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 12-01-2026 |
ಸಂಕ್ಷಿಪ್ತ ಮಾಹಿತಿ:
ಭಾರತ್ ಹೆವಿ ಎಲೆಕ್ಟ್ರಿಕಲ್ಸ್ 2026 ಒಟ್ಟು 20 ಪ್ರಾಜೆಕ್ಟ್ ಇಂಜಿನಿಯರ್ ಮತ್ತು ಯೋಜನಾ ಮೇಲ್ವಿಚಾರಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿ ಡಿಪ್ಲೊಮಾ, ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ:
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
| ಪ್ರಾಜೆಕ್ಟ್ ಇಂಜಿನಿಯರ್ (FTA ಗ್ರೇಡ್-I) ಎಲೆಕ್ಟ್ರಿಕಲ್ಸ್/ ಎಲೆಕ್ಟ್ರಾನಿಕ್ಸ್/ ಕಂಪ್ಯೂಟರ್ ಸೈನ್ಸ್/ ದೂರಸಂಪರ್ಕ/ ಇನ್ಸ್ಟ್ರುಮೆಂಟೇಷನ್ | 04 |
| ಯೋಜನಾ ಮೇಲ್ವಿಚಾರಕ (FTA ಗ್ರೇಡ್-III) ಎಲೆಕ್ಟ್ರಿಕಲ್ಸ್ | 05 |
| ಯೋಜನಾ ಮೇಲ್ವಿಚಾರಕ (FTA ಗ್ರೇಡ್-III) ಸಿವಿಲ್ | 05 |
| ಯೋಜನಾ ಮೇಲ್ವಿಚಾರಕ (FTA ಗ್ರೇಡ್-III) ಮೆಕ್ಯಾನಿಕಲ್ | 03 |
| ಯೋಜನಾ ಮೇಲ್ವಿಚಾರಕ (FTA ಗ್ರೇಡ್-III) ಸುರಕ್ಷತೆ | 02 |
| ಯೋಜನಾ ಮೇಲ್ವಿಚಾರಕ (FTA ಗ್ರೇಡ್-III) ಗುಣಮಟ್ಟ | 01 |
ಶೈಕ್ಷಣಿಕ ಅರ್ಹತೆ:
ಈ ಕೆಳಗೆ ನೀಡಿರುವ ವಿಷಯಗಳಲ್ಲಿ ಸಾಮಾನ್ಯ/ OBC ಅಭ್ಯರ್ಥಿಗಳು ಕನಿಷ್ಠ 60% ರಷ್ಟು ಅಂಕವನ್ನು ಮತ್ತು SC/ST ಅಭ್ಯರ್ಥಿಗಳು ಕನಿಷ್ಠ 50% ರಷ್ಟು ಅಂಕವನ್ನು ಪಡೆದುಕೊಂಡಿರಬೇಕು.
- ಪ್ರಾಜೆಕ್ಟ್ ಇಂಜಿನಿಯರ್ (FTA ಗ್ರೇಡ್-I) ಹುದ್ದೆಗೆ ಮಾನ್ಯತೆ ಪಡೆದ ಭಾರತೀಯ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಇಂಜಿನಿಯರಿಂಗ್/ ತಂತ್ರಜ್ಞಾನದಲ್ಲಿ ಪದವಿಯನ್ನು ಪೂರ್ಣಗೊಳಿಸಿರಬೇಕು ಅಥವಾ ಎಲೆಕ್ಟ್ರಿಕಲ್ಸ್/ ಎಲೆಕ್ಟ್ರಾನಿಕ್ಸ್/ ಕಂಪ್ಯೂಟರ್ ಸೈನ್ಸ್/ ದೂರಸಂಪರ್ಕ/ ಇನ್ಸ್ಟ್ರುಮೆಂಟೇಷನ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.
- ಯೋಜನಾ ಮೇಲ್ವಿಚಾರಕ (FTA ಗ್ರೇಡ್-III) ಎಲೆಕ್ಟ್ರಿಕಲ್ಸ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಎಲೆಕ್ಟ್ರಿಕಲ್ಸ್ ನಲ್ಲಿ ಪೂರ್ಣಾವಧಿಯ ಇಂಜಿನಿಯರಿಂಗ್/ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
- ಯೋಜನಾ ಮೇಲ್ವಿಚಾರಕ (FTA ಗ್ರೇಡ್-III) ಸಿವಿಲ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಸಿವಿಲ್ ನಲ್ಲಿ ಇಂಜಿನಿಯರಿಂಗ್/ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
- ಯೋಜನಾ ಮೇಲ್ವಿಚಾರಕ (FTA ಗ್ರೇಡ್-III) ಮೆಕ್ಯಾನಿಕಲ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಮೆಕ್ಯಾನಿಕಲ್ ನಲ್ಲಿ ಇಂಜಿನಿಯರಿಂಗ್/ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
- ಯೋಜನಾ ಮೇಲ್ವಿಚಾರಕ (FTA ಗ್ರೇಡ್-III) ಸುರಕ್ಷತೆ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಮೆಕ್ಯಾನಿಕಲ್/ ಸಿವಿಲ್/ಎಲೆಕ್ಟ್ರಿಕಲ್ ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು ಮತ್ತು ಸುರಕ್ಷತಾ ಪ್ರಮಾಣಪತ್ರವನ್ನು ಹೊಂದಿರಬೇಕು.
ವಯೋಮಿತಿ: BHEL Recruitment 2026
- ಪ್ರಾಜೆಕ್ಟ್ ಇಂಜಿನಿಯರಿಂಗ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ 35 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು.
- ಯೋಜನಾ ಮೇಲ್ವಿಚಾರಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ 32 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ:
- ST/SC ಅಭ್ಯರ್ಥಿಗಳಿಗೆ 5 ವರ್ಷ
- OBC ಅಭ್ಯರ್ಥಿಗಳಿಗೆ 3 ವರ್ಷ
- PwD ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಈ ಕೆಳಗೆ ನೀಡಲಾಗಿದೆ.
- ಸಾಮಾನ್ಯ ಅಭ್ಯರ್ಥಿಗಳಿಗೆ: 10 ವರ್ಷ
- OBC ಅಭ್ಯರ್ಥಿಗಳಿಗೆ: 13 ವರ್ಷ
- ST/SC ಅಭ್ಯರ್ಥಿಗಳಿಗೆ: 15 ವರ್ಷ
ಅರ್ಜಿ ಶುಲ್ಕ: BHEL Recruitment 2026
- ಸಾಮಾನ್ಯ/OBC ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ. 236
- ಮಾಜಿ ಸೈನಿಕ/ST/SC/PwD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
ವೇತನ ಶ್ರೇಣಿ: BHEL Recruitment 2026
- ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ ಆಯ್ಕೆಗೊಂಡ ಅಭ್ಯರ್ಥಿಗೆ ರೂ. 95,000 ದಿಂದ 1,00,000 ದ ವರೆಗೆ ಮಾಸಿಕ ವೇತನ ನೀಡಲಾಗುವುದು.
- ಯೋಜನಾ ಮೇಲ್ವಿಚಾರಕ ಹುದ್ದೆಗೆ ಆಯ್ಕೆಗೊಂಡ ಅಭ್ಯರ್ಥಿಗೆ ರೂ. 45,000 ದಿಂದ 48,000 ದ ವರೆಗೆ ಮಾಸಿಕ ವೇತನ ನೀಡಲಾಗುವುದು.
ಅಗತ್ಯ ದಾಖಲೆಗಳು:
- ಶೈಕ್ಷಣಿಕ ಪ್ರಮಾಣಪತ್ರ
- ಅಂಕಪಟ್ಟಿ
- ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಓಟರ್ ಐಡಿ
- ಜಾತಿ ಮತ್ತು ಆದಾಯ ಪ್ರಮಾಣಪತ್ರ
ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ವೆಬ್ ಸೈಟ್ https://www.bhel.com/ ಗೆ ಭೇಟಿ ನೀಡಿ
- ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಅರ್ಜಿಯಲ್ಲಿ ಎಲ್ಲ ಅಗತ್ಯ ದಾಖಲೆಗಳನ್ನು ಭರ್ತಿಮಾಡಿ ಅಪ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ
- ನಂತರ ಎಲ್ಲ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಪತಿಯನ್ನು ಕೆಳಗೆ ನೀಡಿರುವ ವಿಳಾಸಕ್ಕೆ ಕಳುಹಿಸಿ
(ಹೆಚ್ಚುವರಿ ಸಾಮಾನ್ಯ ವ್ಯವಸ್ಥಾಪಕ/ಮಾನವ ಸಂಪನ್ಮೂಲ, BHEL-SBD, ಪ್ರೊ, ಸಿ.ಏನ್.ಆರ್ ರಾವ್ ವೃತ್ತ, ಐಐಎಸ್ ಸಿ ಪೋಸ್ಟ್, ಬೆಂಗಳೂರು- 560012)
ಪ್ರಮುಖ ದಿನಾಂಕಗಳು:
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22-12-2025
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12-01-2026
- ಅರ್ಜಿ ಪ್ರತಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 19-01-2026
ಆಯ್ಕೆ ಪ್ರಕ್ರಿಯೆ:
- ಮೊದಲು ಅರ್ಜಿಗಳ ಶಾರ್ಟ್ ಲಿಸ್ಟ್ ಮಾಡಲಾಗುವುದು
- ವೈಯಕ್ತಿಕ ಸಂದರ್ಶನ
ಪ್ರಮುಖ ಲಿಂಕ್ ಗಳು:
| ಅಧಿಸೂಚನೆಯ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್ ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ತೀರ್ಮಾನ:
ಭಾರತ್ ಹೆವಿ ಎಲೆಕ್ಟ್ರಿಕಲ್ಸ್-2026 ಒಟ್ಟು 20 ಪ್ರಾಜೆಕ್ಟ್ ಇಂಜಿನಿಯರ್ ಮತ್ತು ಯೋಜನಾ ಮೇಲ್ವಿಚಾರಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 12-01-2026 ರ ವರೆಗೂ ಅವಕಾಶವಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅರ್ಹತಾ ಮಾನದಂಡವನ್ನು ಪೂರೈಸುತ್ತೇವೆಯೋ? ಇಲ್ಲವೋ? ಎಂದು ಖಚಿತ ಪಡಿಸಿಕೊಂಡು ಅರ್ಜಿಯನ್ನು ಸಲ್ಲಿಸಿ.
ಇತರೆ ಪ್ರಮುಖ ಲಿಂಕ್ ಗಳು:
| ಹುದ್ದೆಗಳು | ಹುದ್ದೆಗಳ ಲಿಂಕ್ ಗಳು |
| CSIR ನೇಮಕಾತಿ 2026 | ಇಲ್ಲಿ ಕ್ಲಿಕ್ ಮಾಡಿ |
| NMPA ಪದವೀಧರ / ಡಿಪ್ಲೊಮ ಅಪ್ರೆಂಟೀಸ್ ನೇಮಕಾತಿ 2025 | ಇಲ್ಲಿ ಕ್ಲಿಕ್ ಮಾಡಿ |
| BMRCL ಮ್ಯಾನೇಜರ್ ಹುದ್ದೆಗಳ ನೇಮಕಾತಿ 2026 | ಇಲ್ಲಿ ಕ್ಲಿಕ್ ಮಾಡಿ |
| ಶಿವಮೊಗ್ಗ ಜಿಲ್ಲಾ ಪಂಚಾಯತ್ ನೇಮಕಾತಿ | ಇಲ್ಲಿ ಕ್ಲಿಕ್ ಮಾಡಿ |
| ITI ಯುವ ವೃತ್ತಿಪರ ಹುದ್ದೆಗಳ ನೇಮಕಾತಿ 2026 | ಇಲ್ಲಿ ಕ್ಲಿಕ್ ಮಾಡಿ |





