SSC Stenographer Grade C Recruitment 2026
ಸಿಬ್ಬಂದಿ ನೇಮಕಾತಿ ಆಯೋಗ (SSC) ವು ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಪ್ರಮೂಖ ಇಲಾಖೆಗಳಲ್ಲಿ ಖಾಲಿ ಇರುವ ಸ್ಟೆನೋಗ್ರಾಫರ್ ಗ್ರೇಡ್ ಸಿ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಈ ನೇಮಕಾತಿಯು ಸೀಮಿತ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಡೆಯಲಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.
ಈ ಹುದ್ದೆಗಳಿಗೆ ಸಂಬಂಧಿಸಿದಂತೆ ನಮ್ಮ ವೆಬ್ ಸೈಟ್ ಉದ್ಯೋಗ ಸಲಹೆ ಯಲ್ಲಿ ಸಂಪೂರ್ಣ ಮಾಹಿತಿಯನ್ನು ನೋಡಬಹುದು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ 22-12-2025 ರಿಂದ 11-01-2026 ರ ವರೆಗೂ ಅವಕಾಶವಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಿ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ, ಅರ್ಹತಾ ಮಾನದಂಡ, ಅಗತ್ಯ ದಾಖಲೆಗಳು ಹಾಗೂ ಇನ್ನಿತರೆ ಮಾಹಿತಿಗಳ ಬಗ್ಗೆ ಸಂಪೂರ್ಣವಾಗಿ ಕೆಳಗೆ ನೀಡಿರುತ್ತೇವೆ ಅದನ್ನು ಓದಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ.
ಹುದ್ದೆಗಳ ಅವಲೋಕನ: (SSC Stenographer Grade C Recruitment 2026)
| ಸಂಸ್ಥೆಯ ಹೆಸರು | ಸಿಬ್ಬಂದಿ ನೇಮಕಾತಿ ಆಯೋಗ (SSC) |
| ಹುದ್ದೆಯ ಹೆಸರು | ಸ್ಟೆನೋಗ್ರಾಫರ್ ಗ್ರೇಡ್ ಸಿ |
| ಹುದ್ದೆಯ ಸಂಖ್ಯೆ | 326 ಹುದ್ದೆಗಳು |
| ಉದ್ಯೋಗ ಸ್ಥಳ | ಭಾರತದಾದ್ಯಂತ |
| ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 22-12-2025 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 11-01-2026 |
ಸಂಕ್ಷಿಪ್ತ ಮಾಹಿತಿ:
ಸಿಬ್ಬಂದಿ ನೇಮಕಾತಿ ಆಯೋಗ (SSC) ವು ಸ್ಟೆನೋಗ್ರಾಫರ್ ಗ್ರೇಡ್ ಸಿ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಈಗಾಗಲೇ ಕೇಂದ್ರ ಸರ್ಕಾರದ ಸೇವೆಯಲ್ಲಿ ಸ್ಟೆನೋಗ್ರಾಫರ್ ಗ್ರೇಡ್ ಡಿ ಆಗಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ವೃತ್ತಿಜೀವನವನ್ನು ನಡೆಸಲು ಸುವರ್ಣಾವಕಾಶ.

SSC Stenographer Grade C Recruitment 2026
ಹುದ್ದೆಗಳ ವಿವರ:
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
| ಕೇಂದ್ರ ಸಚಿವಾಲಯದ ಸ್ಟೆನೋಗ್ರಾಫರ್ ಸೇವೆಗಳು | 267 ಹುದ್ದೆಗಳು |
| ಸಶಸ್ತ್ರ ಪಡೆಗಳ ಪ್ರಧಾನ ಕಚೇರಿ ಸ್ಟೆನೋಗ್ರಾಫರ್ ಸೇವೆಗಳು | 37 ಹುದ್ದೆಗಳು |
| ಭಾರತೀಯ ವಿದೇಶಾಂಗ ಸೇವೆಗಳು | 13 ಹುದ್ದೆಗಳು |
| ರೈಲ್ವೆ ಮಂಡಳಿ ಸಚಿವಾಲಯದ ಸ್ಟೆನೋಗ್ರಾಫರ್ ಸೇವೆಗಳು | 08 ಹುದ್ದೆಗಳು |
| ಭಾರತೀಯ ಚುನಾವಣಾ ಆಯೋಗದ ಸ್ಟೆನೋಗ್ರಾಫರ್ ಸೇವೆಗಳು | 01 ಹುದ್ದೆ |
SSC Stenographer Grade C Recruitment 2026
ಶೈಕ್ಷಣಿಕ ಅರ್ಹತೆ:
- ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಯಿಂದ ಹತ್ತನೇ ತರಗತಿ ಅಥವಾ ಅದಕ್ಕೆ ಸಮಾನವಾದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿರ್ದಿಷ್ಟ ಶೈಕ್ಷಣಿಕ ಮತ್ತು ಸೇವಾ ಅರ್ಹತೆಯನ್ನು ಹೊಂದಿರಬೇಕು.
- ಅಭ್ಯರ್ಥಿಗಳು ಅಶುಲಿಪಿ ಕೌಶಲ್ಯವನ್ನು ಹೊಂದಿರಬೇಕು.
- ಅಭ್ಯರ್ಥಿಗಳು ಈಗಾಗಲೇ ಕೇಂದ್ರ ಸರ್ಕಾರದ ಸೇವೆಯಲ್ಲಿ ಸ್ಟೆನೋಗ್ರಾಫರ್ ಗ್ರೇಡ್ ಡಿ ಆಗಿ ಕಾರ್ಯನಿರ್ವಹಿಸುತ್ತಿರುವರಬೇಕು.
- ಕೇಂದ್ರ ಸಚಿವಾಲಯದ ಸ್ಟೆನೋಗ್ರಾಫರ್ ಹಾಗೂ ರೈಲ್ವೆ ಇಲಾಖೆಯ ಅಭ್ಯರ್ಥಿಗಳು ಕನಿಷ್ಠ 6 ವರ್ಷ ಸೇವೆ ಸಲ್ಲಿಸಿರಬೇಕು.
- ಸಶಸ್ತ್ರ ಪಡೆಗಳು ಮತ್ತು ಚುನಾವಣಾ ಆಯೋಗದ ಸೇವೆಗಳಿಗೆ ಕನಿಷ್ಠ 3 ವರ್ಷ ಸೇವಾವಧಿಯನ್ನು ಪೂರೈಸಿರಬೇಕು.
ವಯೋಮಿತಿ:
- ಸ್ಟೆನೋಗ್ರಾಫರ್ ಗ್ರೇಡ್ ಸಿ ಹುದ್ದೆಗಳ ನೇಮಕಾತಿಗೆ ಇರಬೇಕಾದ ಗರಿಷ್ಟ ವಯೋಮಿತಿಯೂ ಇಲಾಖೆಯ ಸೇವಾ ನಿಯಮಾವಳಿಗಳಿಗೆ ಒಳಪಟ್ಟಿರುತ್ತದೆ.
- ಅಭ್ಯರ್ಥಿಗಳ ವಯೋಮಿತಿ 01/07/2025 ರ ಆಧಾರದ ಮೇಲೆ ನಿರ್ಧಾರವಾಗಿರುತ್ತದೆ.
ವಯೋಮಿತಿ ಸಡಿಲಿಕೆ:
- SC/ST ಅಭ್ಯರ್ಥಿಗಳಿಗೆ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಸರ್ಕಾರದ ನಿಗದಿತ ನಿಯಮದಂತೆ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ:
- ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಪಾವತಿಯ ವಿವರವನ್ನು ಸರಿಯಾಗಿ ಓದಿಕೊಂಡು ಅರ್ಜಿ ಶುಲ್ಕವಿದ್ದಲ್ಲಿ ಆನ್ಲೈನ್ ಮೂಲಕ ಪಾವತಿಸಬೇಕಾಗುತ್ತದೆ.
ವೇತನ ಶ್ರೇಣಿ:
- ಆಯ್ಕೆಗೊಂಡ ಅಭ್ಯರ್ಥಿಗೆ ಕೇಂದ್ರ ಸರ್ಕಾರದ 7 ನೇ ವೇತನ ಆಯೋಗದ ಅನ್ವಯ ವೇತನವನ್ನು ನೀಡಲಾಗುತ್ತದೆ.
- ಅಭ್ಯರ್ಥಿಗಳು ತುಟ್ಟಿ ಭತ್ಯೆ, ಮನೆ ಬಾಡಿಗೆಯ ಭತ್ಯೆ, ನಗರ ಸಾರಿಗೆ ಭತ್ಯೆ ಮತ್ತು ಇತರೆ ಸರ್ಕಾರಿ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಅಗತ್ಯ ದಾಖಲೆಗಳು:
- ಶೈಕ್ಷಣಿಕ ಪ್ರಮಾಣಪತ್ರ
- ಅಂಕಪಟ್ಟಿ
- ಇತ್ತೀಚಿನ ಪಾಸ್ ಪೋರ್ಟ್ ಸೈಜ್ ಫೋಟೋ
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಓಟರ್ ಐಡಿ
ಅರ್ಜಿ ಸಲ್ಲಿಸುವ ವಿಧಾನ:
- SSC ಅಧಿಕೃತ ವೆಬ್ ಸೈಟ್ https://ssc.gov.in/ ಗೆ ಭೇಟಿ ನೀಡಿ
- ಸ್ಟೆನೋಗ್ರಾಫರ್ ಗ್ರೇಡ್ ಸಿ ಪರೀಕ್ಷೆ ಲಿಂಕ್ ಅನ್ನು ಕ್ಲಿಕ್ ಮಾಡಿ ವೈಯಕ್ತಿಕ ಮತ್ತು ಸೇವಾ ವಿವರವನ್ನು ಭರ್ತಿಮಾಡಿ
- ಇತ್ತೀಚಿನ ಫೋಟೋ ಮತ್ತು ಸಹಿಯನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ. ಅಗತ್ಯವಿದ್ದರೆ ಅರ್ಜಿ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ.
- ಮುದ್ರಿತ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ನಿಮ್ಮ ಇಲಾಖೆಯ ಮುಖ್ಯಸ್ಥರ ಮೂಲಕ ಸಿಬ್ಬಂದಿ ನೇಮಕಾತಿ ಆಯೋಗ (SSC) ಕಚೇರಿಗೆ ಸಲ್ಲಿಸಬೇಕು.
ಪ್ರಮುಖ ದಿನಾಂಕಗಳು:
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22-12-2025
- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-01-2026
- ಮುದ್ರಿತ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27-01-2026
ಆಯ್ಕೆ ಪ್ರಕ್ರಿಯೆ:
- ಆಯ್ಕೆ ಪ್ರಕ್ರಿಯೆಯು ಮೂರು ಹಂತದಲ್ಲಿ ನಡೆಯಲಿದ್ದು, ಮೂರು ಹಂತಗಳಲ್ಲಿ ಗಳಿಸಿದ ಒಟ್ಟು ಅಂಕಗಳ ಆಧಾರದ ಮೇಲೆ ಅಂತಿಮ ಮೆರಿಟ್ ಪಟ್ಟಿಯನ್ನು ಸಿದ್ದಪಡಿಸಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು.
- ಮೊದಲನೆಯ ಹಂತದಲ್ಲಿ 200 ಅಂಕಗಳ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಯಲಿದೆ.
- ಎರಡನೆಯ ಹಂತದಲ್ಲಿ ಅಶುಲಿಪಿ ಕೌಶಲ್ಯ ಪರೀಕ್ಷೆ ನಡೆಯಲಿದೆ.
- ಮೂರನೆಯ ಹಂತದಲ್ಲಿ ಅಭ್ಯರ್ಥಿಯ ವಾರ್ಷಿಕ ಸೇವಾ ವರದಿಯನ್ನು ಮೌಲ್ಯಮಾಪನ ಮಾಡಲಾಗುವುದು.
ಪ್ರಮುಖ ಲಿಂಕ್ ಗಳು:
| ಅಧಿಸೂಚನೆಯ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್ ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ತೀರ್ಮಾನ:
ಸಿಬ್ಬಂದಿ ನೇಮಕಾತಿ ಆಯೋಗ (SSC) ವು ಸ್ಟೆನೋಗ್ರಾಫರ್ ಗ್ರೇಡ್ ಸಿ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಈ ನೇಮಕಾತಿಯು ಸೀಮಿತ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಡೆಯಲಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ 11-01-2026 ರೊಳಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ, ಮುದ್ರಿತ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ನಿಮ್ಮ ಇಲಾಖೆಯ ಮುಖ್ಯಸ್ಥರ ಮೂಲಕ ಸಿಬ್ಬಂದಿ ನೇಮಕಾತಿ ಆಯೋಗ (SSC) ಕಚೇರಿಗೆ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.





